ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Saturday, October 22, 2011

ಚಿಟ ಪಟ ಹನಿ


ಯಾಕೋ ಗೊತ್ತಾಗುತ್ತಿಲ್ಲ
ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು
ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

Thursday, August 25, 2011

ಸ್ನೇಹ ಅಮರ: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,ಮುಂಗೈಗೆ ಜಾ...

ಸ್ನೇಹ ಅಮರ:

ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾ...
: ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ, ಮುಂಗೈಗೆ ಜಾರಿದ ಆಲಿಕಲ್ಲು ನೀನು; ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು, ಏನೆಂದು ಬಣ್ಣಿಸಲಿ ನಾನು. ಚುಮು ಚುಮು ಮು...

Saturday, August 13, 2011

ಮೌನದೊಳಗಿನ ಬೆಂಕಿ

ಈ ನೆಲದ ಎದೆಯಲ್ಲಿ ಬೆಂಕಿ
ಉರಿವ ಧಗೆಯಲ್ಲಿ
ಕಳಚಿ ಬಿದ್ದ ಗೂಡು
ಹಕ್ಕಿ ನಿಟ್ಟುಸಿರು,
ಸಾವು, ಸೇಡು ಕೂಗು.


ಹೆಪ್ಪುಗಟ್ಟಿದ ಮೌನ
ಹೆಡೆಯಾಡುವ ಹೊಗೆ
ಜೀವ ಬೇಡುತ್ತದೆ ಇರುಳಿಗೆ
ಹೆಜ್ಜೆ ಹಾಕುವ ಹಗಲು
ಸಂಜೆ ಸರಹೊತ್ತಿನಲ್ಲಿ
ಸತ್ತು ಹೋದವು ಹೂವು,

ಮುಂದುವರಿಯುವುದು...!


Monday, July 25, 2011

ಗುಲಾಬಿ

ಬಯಸಿ ಬಯಸಿ ಭಾವನೆಗಳು ಹುಟ್ಟಿಲ್ಲ ,
ಹುಟ್ಟಿತೆಂದೋ ಮೊಳೆತ ಸಸಿಯ ಹಾಗೆ..!
ಗುರುತಿಸಿದರೂ ಅರಿಯದ ಮುಗ್ದನಾಗಿದ್ದೆ .
ಇಂದು ಇದರಲ್ಲಿ ಸಾವಿರಾರು ಚೆಂಗುಲಾಬಿಗಳು..!
ನೀನಾಗಿಯೇ ಬೆಳೆಸಿದ ಗುಲಾಬಿ ತೋಟವಿದು ,
ನಂಬದಿದ್ದರೂ ಇದು ನಿಜ ನಿನ್ನಾಣೆಗೂ……!
ಕಂಪು ಬಡಿಯದೇ ನಿನ್ನ ನೀಳ ಮೂಗಿಗೆ ?
ನೀನಾಗಿಯೇ ಬಂದು ಈ ಹೂ ಮುಡಿಯೇ..!
ಎಂದಾದರೂ ಬಾ ಎಂದು ಕಾಯುತ್ತಿರುವೆ .
ಸಾವಿರ ಜನ್ಮದ ಆಹ್ವಾನದೊಂದಿಗೆ .!
ಮುಳ್ಳಿರಬಹುದು ಭಯಬೇಡ ನಾನಿರುವೆ..
ಪ್ರೀತಿಯಿಂದ ಬಂದು ನನ್ನ ಪ್ರೀತಿ ಅನುಭವಿಸೇ …!

Friday, July 22, 2011

ಯಾರದೋ ನೆನಪಿನಲ್ಲಿ...

ದಾರಿ ಕವಲಾಗುವ ಮುನ್ನ
ಜೊತೆಯಾಗಿ ನಡೆದೆವು
ಮೂಡಿಲ್ಲವೇನೇ ಹೆಜ್ಜೆ ಗುರುತು?
ಅಲೆದು ಅಲೆದು ದಾರಿ ತಪ್ಪಿರುವೆ
ಯಾರು ನೆರವಾದರೂ ನಿನ್ನ ಹೊರತು?

Monday, June 27, 2011

ದಯಮಾಡಿ ಇತ್ತ ಕಡೆ ಗಮನ ನೀಡಿ ಅಪರೂಪದ ಶಿಲಾ ದೇವಲಾಯಗಳನ್ನು ರಕ್ಷಿಸಿ.



 http://cheluvakannadanadugiriksg.blogspot.com/

ದಯಮಾಡಿ ಇತ್ತ ಕಡೆ ಗಮನ ನೀಡಿ ಅಪರೂಪದ ಶಿಲಾ ದೇವಲಾಯಗಳನ್ನು ರಕ್ಷಿಸಿ.
ಮೈಸೂರು ಜಿಲ್ಲೆ ಟಿ.ಎನ್.ಪುರ ತಾ.ಸೋಮನಾಥಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ೨ ಪ್ರಮುಖ ದೇವಾಲಯಗಳಿಗೆ ಶಾಂತಿ ಪದವಿ ಕಾಲೇಜಿನ ಪರಂಪರೆಕೂಟದ ವತಿಯಿಂದ ಭೇಟಿ ನೀಡಿದ್ದಾಗ ಪಂಚಕೂಟ ದೇವಲಾಯದ ಅವರಣ ಮತ್ತು ದೇವಲಾಯದ ಮೇಲೆ ಕಳ್ಳಿ ಗಿಡಗಳು ಮತ್ತು ವಿಷಾಕಾರಕ ಮುಳ್ಳುಗಳ ನಡುವೆ ಕುಸಿದು ಬಿದ್ದಿರುವ ದೇವಲಾಯದ ೨ ಮತ್ತು ೫ ನೇ ಗುಹೆಗಳು ದಯಮಾಡಿ ಇತ್ತ ಪುರಾತತ್ವ ಇಲಾಖೆಯವರು ಗಮನ ನೀಡಬೇಕೆಂದು ಕೋರಿ ಕೊಳ್ಳುತ್ತೇವೆ.
ಇದೇ ಗ್ರಾಮದಲ್ಲಿರುವ ಕೇಶವಲಾಯಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಿ.

Saturday, June 4, 2011

ಚಿರಕಾಲ

ಓ ನನ್ನ ಗೆಳತಿ
ಬರಬಹುದು ಒಂದಲ್ಲ ಒಂದು ದಿನ
ಬಿಳಿ ಹಾಳೆಗೂ ಬರಗಾಲ!?

ಬರೆದು ಬಿಡು ನಿನ್ನ ಪ್ರೇಮ ಕವಿತೆಯ
ನನ್ನ ಹೃದಯದ ಮೇಲೆ
ಅದಾದರೂ ಉಳಿದೀತು ಚಿರಕಾಲ.

ಇಂತಿ ನಿನ್ನ ಪ್ರೀತೀಯ
ಗಿರೀಶ್ ಗೌಡ

Thursday, May 12, 2011

ಮಲ್ಲಿಗೆ

 
ಮುಂಜಾವಿನ ಮಂಜಿನ
ಹನಿಗಳನ್ನೋತ್ತ ಮಲ್ಲಿಗೆ
ನೀ ಯಾರಿಗಾಗಿ ಕಾಯುವೇ ?


ನೇಸರ ಕಿರಣಕ್ಕೆ
ಮೆಲ್ಲನೆ ಆರಳುವೆ
ನೀ ಯಾರ ಮುಡಿಗೆ ಸೇರುವೆ?


ದುಂಬಿಯ ಗುಂಗಿನಲ್ಲೇ 
ಮಧುರಸವ ತುಂಬುವೆ
ನೀ ಯಾರ ಪ್ರೀತೀಗಾಗಿ ಕಾಯುವೆ?


ಸಿಹಿಜೇನದುಂಬಿಗೆ ನೀಡಿ
ಪಾತರಗಿತ್ತಿಯ ಸ್ಪರ್ಶ ಮಾಡಿ 
ಜನ್ಮ ಸಾರ್ಥಕ ಪಡೆಯುವೆ


ಶ್ರೀಗಂಧದ ಸಿಂಚನ ಹರಿಸಿ
ಘಮ್ಮನೆ ಸುವಾಸನೆ ಬೆರಸಿ
ದೇವರ ಪಟ್ಟಕ್ಕೇರುವೆ


ಹೆಂಗಳೆಯರ ಮನಸ ಸೆಳೆವೆ
ಏಕಾಂತದಿ ಮನವ ಬೆಸೆವೆ
ಪ್ರೀತಿ  ಬೆಳೆಸಿ ಗೆಲ್ಲುವೆ


ಒಂದು ದಿನ ಅರಳಿದರೂ
ಸಂಜೆಯಲಿ ಬಾಡಿದರೂ
ನಿನ್ನ ಬದಕು ಸಾರ್ಥಕ ಮಲ್ಲಿಗೆ....!!!

Thursday, May 5, 2011

ಅಂತಿಮ ವರ್ಷದ ಕಾಲೇಜು ಬೀಳ್ಕೋಡುಗೆ ಸಮಾರಂಭ - 2011-12 ಒಂದಿಷ್ಷು ಮೆಲುಕು - 1

ಪ್ರೀತೀಯ ನೆಚ್ಚಿನ ಸ್ನೇಹಿತ/ಯಿರೇ.,


ನಾನು ಗಿರೀಶ್ ಕೋರೇಗಾಲ. 
ಇದು ನನ್ನ ಕಾಲೇಜು ದಿನದಲ್ಲಿನ ಅಂತಿಮ  ಕ್ಷಣದಲ್ಲಿ ಭಾವಪೂರ್ಣವಾದ ಕಣ್ಣಂಚಲ್ಲಿ  ಕಣ್ಣೀರತುಂಬಿದ ನನ್ನ ಎಲ್ಲಾ ಪ್ರೀತಿಯ ಸ್ನೇಹಜೀವಿಗಳಿಗೆ ಮುಡಿಪು.
ನನ್ನ ಕಾಲೇಜು ಜೀವನವು ಬಹಳ ಸುಂದರವಾಗಿತ್ತು. ಇಂದು ಅದು ಕೇವಲ ನೆನಪು. ಮತ್ತೆ ಮತ್ತೆ ಬಿಕ್ಕಿ-ಬಿಕ್ಕಿ ಉಮ್ಮಳಿಸಿಬರುವ ಆಳುವಿನ ನಡುವೆ ನನ್ನ ಸ್ನೇಹಿತರಿಗೆ ತುಂಬು ಹೃದಯದಿಂದ ದೇವರು ಎಲ್ಲರಿಗೂ ಆರೋಗ್ಯದ ಜೊತೆ ಉತ್ತಮ ಜೀವನವನ್ನು ದೊರಕಿಸಲೇಂದು ಬೇಡುತ್ತೆನೆ. 


ಇಂತಿ..
ಬೇಸರಗೊಂಡ ಸ್ನೇಹಿತ 
ಗಿರೀಶ್ ಕೋರೇಗಾಲ
9008906608.
9738745333.
9449325420.

ಕಾಲೇಜುದಿನಗಳು ತುಂಬಾ ಸಂತೋಷವಾಗಿದ್ದರಿಂದ , ನನ್ನ ಪಾಲಿಗೆ ಎಂದರೇ ಎಲ್ಲಾ ವಿಧ್ಯಾರ್ಥಿ ಜೀವನದಲ್ಲಿನ ಪ್ರತಿ ಘಳಿಗೆಯಲ್ಲೂ ನೆನಪಿಡುವಂತಹಡುವುದು, ಬಾಲ್ಯದಲ್ಲಿನ ಪುಂಡತನ, ಸ್ನೇಹದ ಒಡನಾಟದಲ್ಲಿ ಅಪಾರ ರೀತಿಯಲ್ಲಿ ಸ್ನೇಹವನ್ನು ಆಪಾರವಾದ ರೀತಿಯಲ್ಲಿ ಗಳಿಸಿ ಮರೆತಿರಬಹುದು. ನಾನು ಸಮಾಜಶಾಸ್ತ್ರ ವಿಧ್ಯಾರ್ಥಿಯಾದ್ದರಿಂದ  ಈ ಸಮಯದಲ್ಲಿ ನಮ್ಮ ಶಾಸ್ತ್ಞ್ರರ ಮಾತು ನೆನಪಿಗೆ ಬರುತ್ತದೆ.  " ಮಾನವನು ಸಮಾಜ ಜೀವಿ" ಇವನ ಸಂಬಂಧವು ಸಾಮಾಜಿಕವಾಗಿ ಹರಡಿಕೊಂಡಿರುವ ಒಂದು ಬಲೆಯಂತೆ ಎಂದು". ಈ ಮೇಲಿನ ವಾಕ್ಯವು ಎಷ್ಟೋಂದು ಸತ್ಯವಲ್ಲವೇ...??!

      ನಿತ್ಯ ಜೀವನದಲ್ಲಿ ಬಾಲ್ಯದ ನೆನಪುಗಳನ್ನು ಸವಿಯುತ್ತಾ ಅಪ್ಪ-ಅಮ್ಮರನ್ನೆ ನೆಚ್ಚಿಕೊಂಡು ಪ್ರಾಥಮಿಕ-ಮಾಧ್ಯಮಿಕ ವಿಧ್ಯಾಭ್ಯಾಸವನ್ನು ಮುಗಿಸಿದ ನಂತರ ಫ್ರೌಢವಸ್ಥೆಯಲ್ಲಿ ನಮ್ಮನ್ನು ಬಂದು ಸೇರುವುದು ಮೆಚ್ಚಿನ ಗೆಳತನ. ಒಬ್ಬರಿಗೆ ಒಬ್ಬರು ಬಿಡಲಾರದ ನಂಟು.

   ಅದೇ ರೀತಿ ಈ ಹಿಂದಿನ ವಿದ್ಯಾಬ್ಯಾಸದಲ್ಲಿನ ನಂಟು ಇಂದಿಗೂ ಹಲವಾರು ರೀತಿಯ ಗೆಳತನವನ್ನು ಸೃಷ್ಟಿಸಿದ್ದರೆ. ಅದು ಆ ಹಂತದ ಗೆಳತನ ಮುಗಿಯವವರಗೆ ಮಾತ್ರ . ನನ್ನ ಪ್ರಾಥಮಿಕ ಹಂತದ ಸ್ನೇಹಿತರು ಇಂದಿಗೂ ಸಿಕ್ಕರೆ ನನಗೆ ಸಂತೋಷವಾಗುತ್ತದೆ. ಅದೇ ರೀತಿ ನಾನು ಇಂದು ಕೂಡ ಅವರನ್ನು ಅಂದಿನ ಖುಷಿಯಿಂದಲೇ ಮಾತನಾಡಿಸುತ್ತೇನೆ. ಹಿರಿಯ ಹಂತದಲ್ಲಿ ಸುಮಾರು 20ಜನರಿದ್ದ ನಾವು ಸದಾ ಉತ್ಸುಕತೆಯಿಂದ ಎಲ್ಲಾ ತೆರನಾದ ಕಾಯ್ರಕ್ರಮದಲ್ಲಿ ಭಾಗಿಯಾಗಿದ್ದೆವೆ.  ಏಕೆಂದರೇ ಸ್ನೇಹಿತರು ನನ್ನ ಯಶಸ್ಸಿನ ಮೆಟ್ಟಿಲುಗಳಿಗೆ ಏರಲು ಸಹಾಯ ಮಾಡಿದ ಏಣಿಯಾ ಹಾಗೇ. ಇಂದಿಗೂ ನನ್ನ ಸ್ನೇಹಿತರನ್ನು ನೆನೆಪಿಸಿಕೊಳ್ಳುತ್ತೆನೆ.


ನಂತರ ಪ್ರೌಢಶಾಲಾ ಸರದಿ 


ಈ ಹಂತದ ವಿಧ್ಯಾಭ್ಯಾಸದಲ್ಲು ಇದೇ ರೀತಿಯದು. ಎಲ್ಲರೂ ತಮ್ಮ ತಮ್ಮಲ್ಲಿ ಇಂದಿಗೂ ಕೂಡ ನನ್ನ ಸ್ನೇಹಿತರು ಸಿಕ್ಕರು ನಗುವಿನಲ್ಲಿಸ್ವಾಗತಿಸುತ್ತೇನೆ.  ಇಂದಿಗೂ ಅಪಾರವಾದ ಸ್ನೇಹ ಬಳಗವು ಪ್ರೌಢಶಾಲಾ ಅವಧಿಯಲ್ಲಿದೆ.
ಕೆಲವು ಸ್ನೇಹಿತರ ಹೆಸರನ್ನು ಹೇಳಲು ಬಯಸುವೆ
ರಾಜೇಗೌಡ. ಸಿದ್ದರಾಜೇಗೌಡ, ಸುನೀಲ್ , ಪೂರ್ಣಿಮಾ, ಶೃತಿ ನೆಲಮಾಕನಹಳ್ಳಿ
ಕಾವ್ಯಶ್ರೀ, ಚೈತ್ರ, ಧನಲಕ್ಷ್ಮಿ ದ್ವಯರು, ಅನಿಲ್ ಕುಮಾರ್ (ಬಡ್ಡಿ), ಪ್ರತೀಪ್ ಕುಮಾರ್ ಟಿ.ಜೆ, ಹನುಮಂತ, ತಳಗವಾದಿ ಸ್ನೇಹಿತರು,
ಪ್ರತಾಪ. ಮಹೇಶ ಡಿ.ವಿ. ಭವ್ಯ, ಚಂದನ್. ರವಿಕುಮಾರ್.ರಾಜೇಶ. ರೇವಣ್ಣ, ದೇವಿಪುರ
ಗಿರೀಶ್ (ಗಿಳಿಮರಿ), ನಂದೀಶ್(ಗೊಜ್ಜು), ಕುಮಾರ್, ಗೊಣ್ಣೆ ಶ್ರೀನಿವಾಸ, ಶೃತಿ ಲಂಬು. ಕಾಗೇಪುರ.
ಹಂಗೇ ನಮ್ಮೂರು ಹತ್ರ ಬಂದರೇ ಕೆಂಪೇಗೌಡ, ಲಕ್ಷ್ಮಮ್ಮ, ಮಾದಹಳ್ಳಿ.


ನಮ್ಮೂರು ಕೋರೇಗಾಲ ದಿನವು ಮುಂದಿನ ಸರದಿಯಲ್ಲಿ....... ಮುಂದುವರಿಯುವುದು











Sunday, May 1, 2011

ಸ್ನೇಹ-ಪ್ರೇಮ -ಆಸರೆ

ಸ್ನೇಹ-ಪ್ರೇಮ

ಸ್ನೇಹ
ಸೌಮ್ಯವಾಗಿ
ಅರಳಿಸುತ್ತದೆ
ಪ್ರೇಮ
ಕ್ರೂರವಾಗಿ
ನರಳಿಸುತ್ತದೆ.

ಆಸರೆ

ತಿಳಿಯಬೇಕು
ಪ್ರೇಮಿಗಳೊಂದು
"ಖರೆ"
ಆನ್ಯೋನ್ಯತೆ
ಪ್ರೀತಿಗೆ 
'ಆಸರೆ'



Friday, April 29, 2011

ದೋಣಿ

ನನ್ನ ಕನಸುಗಳ
ಬೋಟ್ ಮಾಡಿ
ಮನೆ ಮುಂದೆ ಹರಿವ
ಮಳೆ ನೀರಿನಲ್ಲಿ ತೇಲಿ ಬಿಟ್ಟು ನಕ್ಕೆ
ಬಾಲ್ಯ ಸರಿಯಿತು,

ಫೀ ಕಟ್ಟಲು ಕಂಡವರ
ಮುಂದೆ ಎಡತಾಕಿ
ದುಡಿದು ಓದಿದೆ
ತೇಲಿ ಬಿಟ್ಟ ದೋಣಿ
ದಡ ಸೇರಿತು,

ಕನಸುಗಳ ತುಂಬಿ
ಸಂಸಾರ ಬೆನ್ನಟಿಕೊಂಡು
ಹರಿಗೋಲು ಹಾಕುವೆ
ಕುಳಿತ ದೋಣಿ ಪಲ್ಟಿ ಹೊಡೆಯುತ್ತದಯೋ?
ಏನೋ

ನೆಲವನರಿಯದ ಆಳ ನೀರಗರ್ಭ
ನೀರ ಓಲಾಟ
ದೋಣಿ ಕೈಬಿಟ್ಟ ನೀರ ಬಯಲಲ್ಲಿ
ನಮ್ಮ ಜೀವಭಯದ ಹೋರಾಟ

ರಟ್ಟೆಗಳಿವೆ
ಈಜು ಬರುತ್ತದೆ..!

Monday, April 25, 2011

ಅವ್ವ

!

ದಡಿಯ ಸೀರೆ
ತಲೆಯ ತುಂಬ ಸೆರಗು
ಕಣ್ಣಂಚಿನಲ್ಲಿ ಮಿಂಚು ಮೂಡಿಸುವ ಬೆಳಕು
ಗೌರವದ ನಗೆಗೆ ದೀಪ ಮಂಕು
ಬಿಸಿ ರೊಟ್ಟಯ ಮುಟಿಗೆ
ತುಸು ಬೆಳ್ಳೋಳ್ಳಿ, ಸಾಕಿಷ್ಟು ಜೀರಿಗೆ
ಪಡಸಾಲಯ ಕಂಬಕೊರಗಿ ಮೆಲ್ಲುತ್ತಲೆ
ತೊಟ್ಟಿಲ್ಲು ಜೀಕುತ್ತ
ನಾಳೆ ಬರುವ ಹುಣ್ಣಿಮೆಗೆ ಮಗಳಿಗೊಂದು ಸೀರೆ
ಬೆಳ್ಳಿ ಉಡದಾರ ಮೊಮ್ಮಗನಿಗೆ,
ದಿಂಬಿಗೊರಗಿದ ತಲೆ ತುಂಬ
ರಾತ್ರಿ ಸಂಸಾರದ್ದೆ ಹಬ್ಬ :
ಐವತ್ತರ ಜೀವ
ತಂತಿ ಬಿಗಿ ಮಾಡಿದ ಶರೀರ,
ಹಂಗಿಲ್ಲದ ಹಟ,
ಇಂದು ಗೂಡು ಹಾಕುವುದು
ನಾಳೆ ತೆನೆ ಮುರಿಯುವುದು
ಬೇಡಿ ಕೇಳಿದರೇ ದನಕ್ಕೆ ಹಿಡಿದಂಟು
ಕಣಕ್ಕೂ ನನ್ನ ಕರೆದಾರು
ಕೈ ಜೋಡಿಸಿದರೆ ಹಿಡಿ ಕಾಳು ಕೊಟ್ಟಾರು
ರಾಶಿ ದಾಟುವ ಮುನ್ನ ಬಾಳ ಕಟ್ಟುವ ಬಯಕೆ
ಒತ್ತಿ ಕಟ್ಟಿದ ಸೆರಗಿನಲ್ಲಿ ಲೋಕ ಮೀರುವ ಛಲ
ಬಿಡುವಿಲ್ಲ,
ಕಟ್ಟೆಯಲ್ಲಿ ಕುಳಿತು ಮಾತು ಕಟೆಯಲು
ದಣಿದು ಬಂದ ದೇಹಕ್ಕೆ ಹಂಡೆಯಲಿ ನೀರಿಲ್ಲ
ಕಾಲ್ತೋಳೆಯಲು,
ಯಾರಿಗೆ ಬೇಕೂ ಮಕ್ಕಳು
ಗಂಡ ದಂಡಪಿಂಡ
ಚಿಮಣಿಗೆ ಎಣ್ಣೆ ಹಾಕುವ ಹತ್ತು
ಎರಡು ಕೊಡ ನೀರು ಹೊತ್ತು
ಕಸಗೂಡಿಸಿ ದೀಪ ಹಚ್ಚಿದರೇ
ಜಗುಲಿಯ ಮೇಲಿನ ದೇವರ ಮುಖದಲಿ
ಮಂದಹಾಸ
ಮನೆತುಂಬ ಬೆಳದಿಂಗಳು
ದಡಿ ಸೀರೆಯ ಮುಖದಲ್ಲಿ ದಣಿವಿಲ್ಲದ ನಗೆ
ಅವ್ವನೆದುರಿಗೆ ದೇವತೆಗಳಿಗೂ ಹಗೆ!!!!