ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Friday, January 30, 2009

ನೀನಾರು..?


ನಿದ್ದೆಯ ಬೇಲಿಯ ಕನಸಿನ ಬನದಲಿ ಆಡುವ ಹೆಣ್ಣೆ, ನೀನಾರು ?
ಕಾಮನ ಬಿಲ್ಲಿನ ಸೀರೆಯ ಹೆಣ್ಣೆ, ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ, ಬಿಂಕದ ಹೆಣ್ಣೆ, ನೀನಾರು ?
ಎತ್ತಿದ ಮುಖವೊ ಚೆಲುವಿನ ಗೋಪುರ ; ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ - ಹೃದಯದ ಮರುಳೆ, ನೀನಾರು ?
ವಸಂತ ಹಸೆಮಣೆ ನಿನ್ನ ಹಣೆ; ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ ತೆರಳುವ ಹೆಣ್ಣೆ, ನೀನಾರು ?
ಕನಸಿನ ಬನದಲಿ ಕಮಲಾಕರದಲಿ ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ ಒಲಿಯದ ಹೆಣ್ಣೆ, ನೀನಾರು ?
ಕೆನ್ನೆಯ ಬಾನಲಿ ಮುತ್ತಿನ ಚಂದಿರ ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ ಮಾಯಾಮೋಹಿನಿ, ನೀನಾರು ?

ಕವಿಯಾದೆ ನಾನು.

ಸೂಜಿ ಕಣ್ಣ ಹುಡುಕುವ ಹಾಗೆ
ಹುಡುಕಿದೆ ನಾ ಗೆಳತಿಗೆ !
ಕಂಡಳೊಮ್ಮೆ ಕನಸ ಕನ್ಯೆ
ನನ್ನ ಮನದ ಅಪ್ಸರೆ..!

ಉಕ್ಕಿತೊಮ್ಮೆ ಮನದ ಕಡಲು
ಆ ಚಂದ್ರ ಕಾಂತಿಗೆ !
ಮಾತು ಮರೆತು ಮೂಗನಾದೆ
ಆ ಮೌನ ರಾಗ ಸ್ವರದಲೇ !

ವಾಸ್ತವ ಮರೆತು , ಅರಿವು ಹೋಗಿ
ಭಾವಲೋಕ ಕಂಡೆನಾ !
ನಿದ್ದೆ ಗಿದ್ದೆ ಏಕೆ ಬೇಕು ?
ಅವಳ ದೃಶ್ಯ ಮಾತ್ರ ಸಾಕು!

ಅವಳ ನಗುವೆ ಬರೆದ ಪಲ್ಲವಿಗೆ ,
ಎಂದೂ ಮುಗಿಯದ ಕವಿತೆಗೆ ,
ಅವಳೇ ಸ್ಪೂರ್ತಿಯಾದ ಸಾಲುಗಳಿಗೆ
ಕವಿಯಾದೆ ನಾನು..!!

ದಾರಿ ಹೋಕ ನಾನು.....

ಮಧುರ ನೆನಪಿಗೆ ನೀನೆ ಬರೆದ ಸಂಭಾಷಣೆ,
ಮತ್ತೆ ಯಾಕೆ ಈ ರೀತಿಯ ವಿಶ್ಲೆಷಣೆ,
ನಿನ್ನ ಬದುಕಿನಲಿ ಬರಿ ದಾರಿ ಹೋಕ ನಾನು,
ಒಮ್ಮೆ ನಿನ್ನ ನೋಡಿ ಹಾಗೆ ಹಿಂತಿರುಗುವೆ,
ಮನದ ಜೋಪಡಿ ಮುರಿದು ಹೋಗಿದೆ,
ಇನ್ಯಾರನು ಹುಡುಕಿತರಲಿ ನಾನು,
ಕೇಳುವೆಯ ಒಮ್ಮೆ ಮನದ ಅಳಲನು,
ಪ್ರತಿ ಪುಟಗಳು ಹರಿದು ಹೋದವು
ಇನ್ನೂ ತೆರೆಯದಲೆ,
ಮುಗಿಲ ಮೋಡಗಳು ಕರಗಿ ಹೋದವು
ಇನ್ನೂ ಹನಿಗಳ ಸುರಿಸದಲೆ,
ಇನ್ಯಾರ ಕನಸಲಿ ನಾ ನಿನ್ನ ಹುಡಕಲಿ,

ನೆನಪಿನಲ್ಲಿ ಮನ ತುಂಬಿ

ಬರೆಯಲೆಂದು ಕುಳಿತೆ ! ಭಾವನೆಗಳಲಿ ಅವಳಿದ್ದಳು !
ಚಿತ್ರಿಸಲೇ ಎಂದುಕೊಂಡೆ ! ಮನಸಿನೊಳಗೆ ಅಚ್ಚೋತ್ತಿದ್ದಳು ಅವಳು !
ಕಣ್ಣು ಮುಚ್ಚಿದೆ ! ಕಣ್ಣಾಗಿದ್ದಳು ಅವಳು !
ಉಸಿರೆಳೆದುಕೊಂಡೆ ! ಉಸಿರಿನೊಳಗೆ ಅವಳಿದ್ದಳು !
ಕನಸಿನೊಳಗೆ ಕಾಡಿದವಳು ! ಅವಳು !
ಬರೆಯಲಾಗಲಿಲ್ಲ ! ಯಾಕೋ ಗೊತ್ತಿಲ್ಲ !
ಮನ ಅವಳ ನೆನಪಿನಿಂದ ಹೊರ ಬರುತ್ತಿಲ್ಲ !
ಅವಳ ನೆನಪಿನಲೆ ದಿನ ಕಳೆದು ಹೋಗುತ್ತಿದೆಯಲ್ಲ !
ಯಾರವಳು ಎಂದು ಅರಿವಾಗಲಿಲ್ಲ !
ನನ್ನ ಗೆಳತಿಯೋ ? ನನ್ನ ದೇವತೆಯೋ ? ಏನೆಂದು ಗೊತ್ತಿಲ್ಲ !
ಆದರೆ ಅವಳ ನೆನಪಿನಲ್ಲಿ ಮನ ತುಂಬಿ ರುವುದು ಸುಳ್ಳಲ್ಲ !

Friday, January 16, 2009

ಕಲ್ಪನೆಯ ಹುಡುಗಿ

ನೆನಪು ನೆನಪು ಅವಳ ನೆನಪು
ಸಾವೇ ಈರದ ಸವಿ ನೆನಪು
ನೆನಪು ನೆನಪು ಅವಳ ನೆನಪು
ಕೊನೆಯೆ ಈರದ ಚೀರ ನೆನಪು
ಅವಳ ನಗು ಹುಣೆಮೆಯ ಬೆಳಕು ನನ್ನೇ ದೇ ಬಾನೀಗೆ
ಅವಳ ದಾನಿ ರಾಗ ದುಲಗಣೀ ನನ್ನೇ ದೇ ಹಾದಿಗೆ
ಗಮನೀ ಗಮನೀಲು ಪ್ರೀತಿ ಧ್ಯಾನ.............


ಬೊಗಸೆ ಬೊಗಸೆ ಪ್ರೀತಿಯ ಅಮೃತಧಾರೆ ಎರೆವರು
ನಸುನಗುತ ನನ್ನನ್ನ ಹುರುದುಂಬಿಸುವರು.
ನನ್ನ ಕನಸುಗಳಿಗೆಲ್ಲ ಅಡಿಪಾಯ ಇತ್ತವರು.
ಬದುಕ ಹಸನಾಗಿಸಲು ನನ್ನ ಕೂಡ ನಿಂತವರು.

ನಿನ್ನ ನೆನಪು ಮತ್ತು ನವಿಲುಗರಿ

ನೀ ಕೊಟ್ಟ ನವಿಲುಗರಿ
ನವುರಾಗಿ ಕೂತಿದೆ
ನನ್ನ
ಪುಸ್ತಕದಲ್ಲಿ

ಎಳೆ ಎಳೆಗೂ ನಿನ್ನದೇ
ಪ್ರತಿಬಿಂಬ
ನೇವರಿಸುವಾಗ ಅದೆಂಥದ್ದೋ
ಪುಳಕ ಮೈತುಂಬ

ಮನದ ಕೋಣೆ
ಖಾಲಿ ಈಗ
ಒಂಟಿಯಾಗಿ
ನೋವುಣ್ಣುವಾಗ
ನಯವಾಗಿ
ನೇವರಿಸುತ್ತೇನೆ
ನಿನ್ನ ನೆನಪ
ನವಿಲುಗರಿಯಲ್ಲಿ
ನೋವಿನ ನಡುವೆ
ಸಂತಸ ಕಾಣುತ್ತೇನೆ

ಮನದ ಒಳಗೆ ನಿಂದೆ ನೀನು.... ಮನಕೆ ಮತ್ತು ಬರಿಸಲು...
ಪ್ರೀತಿ ಪ್ರೇಮದ ಬೆಳಕ ಹರಿಸಿ ಮನವ ಸಂತೈಸಲು....
ಮಿಡಿಯುತಿಹುದು ಎನ್ನ ಮನವು... ಮಿಡಿವ ರಾಗ ಕೇಳುನೀ...
ಮನವು ತುಂಬಿಹೋಯಿತಿನ್ನು... ಮನೆಯವರ ಭಾದೆ ತಾಳೆನಿನ್ನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು..

ನಿನ್ನ ಹೆಸರಿನಲ್ಲಿ...
ನಿನ್ನ ನಯನದ ಉಂಗುರ ತುಂಬಿಹುದು ನನ್ನ ಉಸಿರುನಲ್ಲಿ...
ಕ್ಷಣ ಕ್ಷಣವು ಯುಗಗಳಾಗಿ ಮಿಸಿಕುತಿಹುದು ಕೊರಳನು...
ತಾಳಲಾರೆ ನಾನು ಇನ್ನು, ನಿನ್ನ ದಾರಿ ಕಾಯುತಿಹೆನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು...
ಸೇರಿ ಬಾಳ್ವೆ ಮಾಡಲು... ಜೀವನ ರಸದೊಟವ ಸವಿಯಲುನಾನು ಒಳ್ಳೆಯವನೆ ಆದ್ರೂ ಸ್ವಲ್ಪಾ ತರ್ಲೆ ಹುಡುಗ .ಸ್ನೆಹಕ್ಕಾಗಿ ಪ್ರಾಣ ಕೊಡೊದಕ್ಕು ಸಿದ್ದ .ಸ್ನೇಹ ಮಾತ್ರ ಬಿಡೊದಿಲ್ಲ.

ಕಲ್ಪನೆಯ ಹುಡುಗಿ
ಪ್ರತಿದಿನ ನನ್ನ ಕಲ್ಪನೆಗಳಲ್ಲಿ ಬರುತ್ತಿ ,ನೀನು ನಿಜವಾಗಿ ನನ್ನ ಜೀವನದಲ್ಲಿ ಬರುವುದು ಯಾವಾಗ?ಇಂಥ ಪ್ರಶ್ನೆ ಕೆಳುತ್ತ ಕೆಳುತ್ತಲೆ ಯೌವನ ಕಳೆದು ಹೋದರೆ ಎಂಬ ಚಿಂತೆಯಾಗಿದೆ ಗೆಳತಿ. ಈ ಬಡಾಪಯಿಯ ಮೇಲೆ ಒಂದಿಷ್ಟು ಕರುಣೆ
ಇರಲೀ.
ನನ್ನ ಜೊತೆ ನಗುನಗುತ್ತಾ ಮತನಡುತೀ ನನ್ನೊಡನಿರುವುದು ನಿನಗಿಷ್ಟ ಎನ್ನುವುದು ನಂಗೊತ್ತು. ನನ್ನ ಕಣ್ಣಲ್ಲಿ ಕಣ್ಣೀಟ್ಟರೆ ನಿನ್ನ ಮುಖ
ಹೌದೋ ಅಲ್ಲವೋ ಎಂಬಂತೆ ರಂಗೇರುವುದನ್ನು ಗಮನಿಸಿದ್ದೇನೆ .ಆದರೆ ಆ ಕಣ್ಣುಗಳು ನಿಜಕ್ಕೂ ಹೇಳುವುದೇನೂ? ಬರೀ ಸ್ನೇಹವೊ ಅಥವಾ ಪ್ರೀತಿ-ಗೀತೀ ಏನಾದರೂ...........? ಗೊತ್ತಾಗುತ್ತಿಲ್ಲ.ನೀನು ಬಲು ಚಾಣಾಕ್ಷೆ ,ಗುಟ್ಟು ಬಿಟ್ಟುಕೊಡುವುದಿಲ್ಲ ,
ಅಬ್ಬಾ;ಅದೇನು ವೈಯಾರ ನಿನ್ನದು ; ತಕ್ಷಣ ಬಾಹುಗಳಲ್ಲಿ ಬಂಡಿಸಿಬಿಡಬೇಕು ಎಂಬ ಮತ್ಟೇರಿಸುವಂತದ್ದು , ಆದರೆ
ಆ ಸ್ವಾತಂತ್ರ್ಯ ನನಗಿದೆಯೇ ? ಎಸ್ಟು ದಿನ ಹೀಗೆ ಸತಾಯಸುತೀ ಹುಡುಗಿ? ಎಸ್ಟು ಅಂತ ಕಾಯವುದು? ಏನಿದೆ ನನ್ನ ಮನದಲಿ? ಹೆಳೀಬಿಡು.
ಹೃದಯವನ್ನು ಹಗುರವಾಗಿಸು ಎಂದು ನನ್ನ ಮನಸ್ಸುಕದ್ದವಳನ್ನು ಅಂಗಲಾಚುತ್ತೇನೆ..........................

Thursday, January 15, 2009

ಬಣ್ಣದ ಮನಸ್ಸು.

ನಿನ್ನ ಅಂದ ಚೆಂದವ ನೋಡಿ ಆಸೆಪಟ್ಟೆ
ನಿನ್ನ ರೂಪವ ನೋಡಿ ಮೋಹಗೊಂಡೆ
ನಿನ್ನ ಬಣ್ಣನೋಡಿ ಬಯಕೆ ಪಟ್ಟೆ
ನಿನ್ನ ಮುಳ್ಳು ನೋಡದೆ ಮೋಸಹೋದೆ

ನಿನ್ನ ನಿಗೂಢತೆ ಅರಿಯದೆ
ಅರೆ ಹುಚ್ಚನಂತಾದೆ
ಒಟ್ಟಿನಲ್ಲಿ ನನ್ನ ಅರಿಯದೆ
ನಾ ಕೆಟ್ಟೆ - ಕಡೆಗೆ ವ್ಯಥೆಪಟ್ಟೆ

ಸಮಸ್ಯೆಗಳೂ ಸೃಷ್ತಿಯಾದಂತೆಲ್ಲಾ
ಆಕರ್ಷಣೆ ಕಡಿಮೆಯಾಂತೆಲ್ಲ
ನಿನ್ನ ಮನಸ್ಸಿನಾಳದ ಪದರಗಳು ಹೆಚಿಕೋಳುತ್ತವೆ ಗೆಳತಿ
ನನ್ನ ಕಡೆಗಣಿಸಿ ಮುನ್ನಡೆಯುವುದು ನಿನ್ನ ಮಾಯಾ ಮನಸ್ಸು.
ಸ್ನೇಹ ಸಾಂದ್ರತೆ ಕುಗ್ಗುತೋಡಗುತ್ತದೆ
ಪ್ರೀತಿ ಪ್ರೇಮ ಇಲ್ಲವಾಗುತ್ತದೆ.

Wednesday, January 14, 2009

಻಻ ಅತೃಪ್ತರು....!

ಉಳ್ಳವರು ಹತ್ತಿ ಹಾಸಿಗೆ
ಮೇಲೆ ಮಲಗುವರು
ನಾನೇನು ಮಾಡಲಿ ರೈತನಯ್ಯಾ
ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ
ನಾಯಿಯೇ ಅಂಗರಕ್ಷಕ
ನನಗೇಕೆ ಹಂಸತೂಲಿಕಾತಲ್ಪವಯ್ಯಾ
ತಂಗಾಳಿ ಬೀಸಿರಲು
ಕೋಗಿಲೆ ಹಾಡಿರಲು
ಹಸಿದ ಹೊಟ್ಟೆ ತಣ್ಣಗಿರಲು
ನಿದ್ದೆ ಬರದಿರುತ್ತದೆಯೇ
ನಿನ್ನೆಯ ಚಿಂತೆಯಿಲ್ಲ
ನಾಳೆಯ ಹಂಗಿಲ್ಲ
ಕೇವಲ ಇಂದಿನ ರಾಜರು
ನಾವು ಇಂದಿಗೆ ತೃಪ್ತರು

ಹನಿಗವನ

**ಪ್ರೀತಿ**
ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ.
*******************

**ನನ್ನ-ನಿನ್ನ ನಡುವೆ**

ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!

ಹೊಸ ಕನಸು ಮೂಡುವ ಮೊದಲು

ಹೊಸ ಕನಸು ಮೂಡವಾ ಮೊದಲು
ಮೂಕವಾಗಿದೆ ನನ್ನ ಮನಸು
ಮಾತು ಮೂಡುತ್ತಿಲ್ಲ, ಎನೊಂದು ತಿಳಿಯುತ್ತಿಲ್ಲ
ನನಗಂತೂ ಇದೇ ಮೊದಲು.
ಹೊಸ ಪರಿಚಯದ ಹಂಗೇ,
ಅವಳ ಕುಡಿನೋಟದ ಬಂಧವೇ?
ಮೊದಲೆಂದು ಹೀಗಾಗಿರಲಿಲ್ಲ, ಇದು
ನನಗಂತೂ ಇದೇ ಮೊದಲು.
ಮಾತು ಬರಿ ತೋದಲು, ನೋಟ ಒಲವೇ ಒಲವು
ಅವಳ ಕುಡಿನೋಟದಲ್ಲಿ ಕಳೆದು ಹೋಗಿರುವೆನೆನೋ?
ಹುಡುಕುತ್ತಿದ್ದನೆ ನನ್ನನ್ನೆ ನಾನು, ಇದು
ನನಗಂತೂ ಇದೇ ಮೊದಲು.
ಬೀಜ ಮೊಳೆಯುವ ಮುನ್ನ
ಕನಸು ಹುಟ್ಟುವ ಮುನ್ನ
ಹೀಗಾಗಲೇ ಬೇಕೆನೋ? ಇದು
ನನಗಂತೂ ಇದೇ ಮೊದಲು,
ಅಲ್ಲಿ ಅವಳದೂ ಇದೇ ಸ್ಥಿತಿಯೇನೋ?

ಸ್ನೇಹವೊಂದಿದ್ದರೇ ಸಾಕು

ರೆಕ್ಕೆ ಪುಕ್ಕವಿಲ್ಲದ
ಮನಸ್ಸೆಂಬ ಗಗನ ಪಕ್ಷಿಗೆ
ನಿರ್ದಿಷ್ಟ ರೊಪಕೊಟ್ಟು
ಬಾನಿನಲ್ಲಿ ತಂಗಾಳಿಯ ಸ್ಪರ್ಶವನ್ನು
ಅನುಭವಿಸಲು ಅವಕಾಶ ನಿಡುವ
ಅಂತರಂಗದಾಳದ ಭಾವವೇ ' ಸ್ನೇಹ '.

ಆಕಾಶದಷ್ಟು ಅಗಲವಾದದ್ದು ಆಸೆ
ನೀರಿನಷ್ಟು ತೆಳುವಾದದ್ದು ಉಸಿರು
ಹೊವಿನಂತೆ ಮೃದುವಾದದ್ದು ಮನಸ್ಸು
ವಜ್ರಕ್ಕಿಂತ ಕಠಿಣವಾದದ್ದು ನಮ್ಮ ಸ್ನೇಹ.

ಸ್ನೇಹಕ್ಕೆ ಬೇಧವಿಲ್ಲ,
ಮನಸ್ಸಿಗೆ ರೊಪವಿಲ್ಲ,
ಕವನಕ್ಕೆ ಕಣ್ಣಿಲ್ಲ,
ನೆನಪಿಗೆ ಶತ್ರುವಿಲ್ಲ,
ಕಲ್ಪನೆಗೆ ಲೋಕವಿಲ್ಲ, ಆದರೆ
ಯಾರಿಗೆ ಯಾರಿಲ್ಲದಿದ್ದರೊ ನನಗೆ
ನಿಮ್ಮ ಸ್ನೇಹವಿದ್ದರೆ ಸಾಕು

Monday, January 12, 2009

ಗೆಳಯನ ಲವ್ ಲೆಟರ್.....

ಹೈ ಡಿಯರ್

ಹೌ ರ್ ಯು? ಈ ಲೆಟರ್ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.

ನಾನು ..... ಎಜುಕೇಶನ್ ಕಲಿತಿದ್ದೀನಿ , ನೂರಾರು ಹುಡ್ಗೀರನ್ನ ನೋಡಿದ್ದೀನಿ. ನನ್ನ ಮನೆಯ ಎದುರುಗಡೆ ಲೇಡೀಸ್ ಪಿ.ಜಿ. ಇದೆ. ಅಲ್ಲೂ ಹತ್ತಾರು ಹುಡ್ಗೀರು ಇದ್ದಾರೆ. ನೋಡಲಿಕ್ಕೆ ಚೆನ್ನಾಗಿರೋರು ಇದ್ದಾರೆ. ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ ಇನ್‌ಫಾಚುಯೇಶನ್ ಅಲ್ಲ ಅಂತ ಕೂಡ ಬುದ್ಧಿ ಮನಸ್ಸಿಗೆ ಹೇಳಿತು. ನಾನು ನಿನ್ನ ನೋಡಿದ್ದು ಇದೆ ಮೊದಲ ಸಲ ಏನಲ್ಲ. ಇದು ಕ್ರಮೇಣ ಜರುಗಿದ್ದು. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ ಫ್ಲರ್ಟ್ ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ ಫ್ರೆಂಡ್ಸ್ ಇದ್ದಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲ. ನೀನು ಬರಿ ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂತ ಪೀಠಿಕೆ ಆಗ್ತಾ ಇದ್ದೀನಿ ಅಂತ ಖಂಡಿತ ತಿಳ್ಕೋಬೇಡ. ನೀನು ನನ್ನ ಬಾಳಿ ನುದ್ದಕ್ಕೂ ಇರಬೇಕು, ಅದು ನನ್ನ ಆಸೆ. ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ಡೋನ್ಟ್ ಥಿಂಕ್ ಸಿಲ್ಲಿ.

ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, ಓ ಕೆ, ಐ ವಿಲ್ ಆಲ್ಸೊ ಎಂಜಾಯ್ ಇನ್ ಯುವರ್ ಸ್ಮೈಲ್. ತಲೆನೋವು ಬರೋದಾದರೆ ಐ ಡೋನ್ಟ್ ಬಾದರ್ ಟೂ ಮಚ್. ಯಾಕೆಂದರೆ ಮನಸ್ಸಿನಲ್ಲಿ ಇರೋ ಸವಿ ಪ್ರೀತಿ ನಾನು ತಿಳಿಸುವುದಾದರೂ ಹೇಗೆ?

ಈ ಲೆಟರ್ ನ ಟೈಮ್ ಪಾಸ್‌ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, ಫಿಲ್ಮ್ನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಫ್ರೆಂಡ್ಸ್ ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು ಮೀಡಿಯೇಟರ್ ಯಾಕೆ ಆಗಬೇಕು?

ನಿನಗೆ ಹೇಳಬೇಕು ಅನ್ನಿಸಿದ್ದನ್ನ ಸಂಕ್ಷಿಪ್ತವಾಗಿ ಹೇಳಿದ್ದೀನಿ. ನಿನಗೂ ನನ್ನ ಮೇಲೆ ಪ್ರೀತಿ ಬಂದರೆ ಪ್ರೀತಿಸು. ಯಾವ ರೀತಿಯ ಬಲವಂತವು ಇಲ್ಲ. ಯಾಕೆಂದರೆ ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ಆದರೆ ಸುಳ್ಳು ಹೇಳಿ ಕೈ ಕೊಡಬೇಡ. ನನ್ನ ಪರ್ಸನ್ಯಾಲಿಟೀ ನೋಡಿಯೋ, ಪ್ರಾಪರ್ಟೀ ನೋಡಿಯೋ ಪ್ರೀತಿಸಬೇಡ. ಯಾಕೆಂದರೆ ಅದು ಪ್ರೀತಿನೇ ಆಗಿರಲ್ಲ. ಹಾಗಾಗಿ ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನೀನು ನನ್ನ ಪ್ರೀತಿನ ಒಪ್ಪಿಕೊಳ್ಳಲೇಬೇಕು ಅಂತಾನೂ ಇಲ್ಲ. ಆದರೆ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದರೆ ಮಾತ್ರ, ನನಗೆ ನೆನೆಸಿಕೊಳ್ಳೋದಕ್ಕೆ ಆಗೋದಿಲ್ಲ. ಮತ್ತೆ ಯಾರನ್ನಾದರೂ ನೀನು ಈಗಾಗಲೆ ಪ್ರೀತಿಸುತ್ತಿದ್ದರೆ, ನನ್ನ ಕಡೆಯಿಂದ ಬೆಸ್ಟ್ ವಿಶಸ್ ಮತ್ತು ಸಾರೀ, ನಾನು ಸ್ವಲ್ಪ ಲೇಟ್ ಆದೇ ಅನ್ನಿಸುತ್ತೆ.

ಸೋ ನೋ ಎಕ್ಸ್‌ಪೆಕ್ಟೇಶನ್, ಓನ್ಲೀ ಲವ್,
ರೀ ಪ್ರೀತಿ ಅಂದ್ರೆ ಒಂದು... ಕಾಣದ.... ಕಿ..... , ಎಲ್ಲೊ ಇರುವ ಒಂದು ಮನಸನ್ನ.... ಇನ್ನೆಲ್ಲೋ ಇರುವ ಇನ್ನೊಂದು ಮನಸ್ಸು ಗೆಲ್ಲಬಹುದು....
ಒಂದು ಹುಡುಗಿ ನನ್ ಪ್ರತಿ ಕನಸಲ್ಲೂ ಬರ್ತಿದ್ದ....., ಆ ಹುಡುಗಿಗಾಗಿ ನನ್ ಎಲ್ಲೆಲ್ಲೋ ಹುಡುಕಾಡಿದೆ......, ಅವಳು ನಂಗೆ ಎಷ್ಟು ಹತ್ರ ಆಗೆದ್ಲು ಅಂದ್ರೆ ನನ್ ಪ್ರತಿ ನಗುವಲ್ಲು, ಅಳುವಲ್ಲು..., ಪ್ರತಿ ಕ್ಷಣದಲ್ಲೂ ಬರ್ತ್ತಿದ್ದ್......., ಅವಳು ನನ್ ಪ್ರಕಾರ ತುಂಬ ಸ್ಪೆಷಲ್ person ಆಗೆದ್ಲು ......., ನಾನ್ ಅವಳನ್ ಮಗು ತರ ಪ್ರೀತಿಸ್ತಿದ್ದೆ....., ಆದ್ರೆ ಅವಳಿಗೆ ಆ ಪ್ರೀತಿ ಅರ್ಥಾನೆ ಆಗ್ತಿಲ್ಲ....., ನಾನ್ ಅವಲೆಂದ suffer ಆಗ್ತಾ ಇದ್ದೇನೆ...., ನಾನ್ ಪ್ರತಿ ಕ್ಷಣನು ಅವಲೆಂದ ಕಾಯ್ತಾ ........ ಇದ್ದೀನಿ...., ನಾನ್ ಎನಿಸಿಕೊಂಡ ನಿಷ್ಕಲ್ಮಶ ಪ್ರೀತಿ ಅವಳಲೀ ಇಲ್ಲ...., ಅವಲೆನದಗೆ ನಾನ್ ಎಲ್ಲರನ್ನು ಮಿಸ್ ಮಾಡ್ಕೋತಾ ಇದ್ದೀನಿ......, ತುಂಬ hurt ಆಗ್ತಿದೆ......, ಆ ನೋವಲ್ಲಿ ಎಲ್ಲರ ಹತ್ರನು ಹುಚ್....ಹುಚ್ಚಾಗಿ nadkotini......, ಇದ್ರಿಂದ ಎಲ್ಲರೂ ನನ್ನಿಂದ ದೂರ ಹೋಗ್ತಾರೆ......., ಒಂದು ಮನಸಿಗಾಗಿ,,,,,, ನೂರು ಮನಸನ್ನ ಮಿಸ್ ಮಾಡ್ಕೋತಾ ಇದ್ದೀನಿ......, ಕಡೆಗೂ ಆ ಕನಸಿನ ಹುಡುಗಿ ನಾನ್ ಕನಸಲ್ಲೇ ಹುಲಿದುಬೇತ್ಳು ..... ನನ್ ಮುಗ್ಧ ಪ್ರೀತಿಗೆ ಬೆಲೆನೇ ಇಲ್ಲ..........

ಇಂತಿ ನಿನ್ನ ಪ್ರೀತಿಯ ನಾನ್ಯಾರು.............?
ಕೊನೆದಾಗಿ ಹೇಳ್ತಾ ಇದ್ದೀನಿ.
ಹೇಯ್ ಹುಡುಗಿ ನೀನ್ ನಂಗೆ ಪ್ರತಿ ಕ್ಷಣನು ನೆನಪಿಗೆ ಬರ್ತೀಯ....., ನನ್ ಪ್ರತಿ ಹೆಜ್ಜೆಲು ನೀನ್ ಇರ್ತಿಯ........ ಒಂದ್ ಮಾತು ನಿಜ ಹೇಳು ನಿಂಗು ನಾನ್ ಹಾಗೇ ನೆನಪಿಗೆ......... ಬರ್ತಿನಾ..........?

ಟೇಕ್ ಕೇರ್,
ಸುನಿ
ಹೆಗೆತು ಫ್ರೆಂಡ್ಸ್ ನಾನಾ ಪ್ರೇಮ ಪತ್ರಾ
FRIENDS 100 ಜನ YOUNGSTERS ಲ್ಲಿ
60% ಜನ LOVE ಮಾಡ್ತಾರೆ
ಆದ್ರೆ ನಿಜವಾದ ಪ್ರೀತಿ ಸಿಗೋದು ಬರಿ 30% ಜನ ಕ್ಕೆ ಮಾತ್ರ
ಅ 30% ನಲ್ಲಿ ತಂದೆ -ತಾಯಿನ ಒಪ್ಸಿ. ಇಲ್ಲಾ
ಎದುರಾಕ್ಕ್ ಕೊಂಡು ಮದುವೆ ಅಗೋರು
ಬರಿ 15% ಮಾತ್ರ .ಮದುವೆ ಆಗಿರೋ
15%ಲ್ಲಿ ಇಡೀ ಜೀವನ ಸುಖವಗಿರೋರು
ಬರೀ 7.5%.. ಯಾಕೆ ?
SO ಲವ್ ಮಾಡೋಕ್ಕಿಂತ
ಮುಂಚೆ ಯೋಚ್ಸಿ .....

ನೀನೊಂದು ಚಿಕ್ಕ ಜೀವ
ಆದ್ರೆ ನಿನ್ನನು ಪ್ರೇಮಿಸುವ ಯಾವುದೋ
ಒಂದು ಜೀವಕ್ಕೆ ನೀನೆ ಪ್ರಪಂಚ..

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ ಹೊ ಗೆಳತಿ ನೀನುನು ಉಳಿದಿಲ್ಲ

ಭೋಬಿನೀ ಕಡಲು ನಾನು ಹ್ಡಗೂ ಬಿರುಗಾಳಿ ಬಾಲೆಲ್ಲ ನೀನಿಲ್ದೆ ಗೊತ್ತಿಲ್ಲ ಗುರಿಇ ಲ್ಲ

ಬಿಢೆಲಿ ಬಡವ ಸಾಯೌವಾಗ ಕ್ಲೋಕೆ ಯಾರಿಲ್ಲ ಹೂ ಗೆಳತಿ ಕಣ್ಣೀರು ಹೊರೆಸೋಲ್ಲ

ಕಣ್ಣೀರ ಕೊಳ್ಳಲು ಯಾರು ಇ ಲ್ಲ ಕಣ್ಣೀರ್ಗೆ ಬೆಲೆ ಇ ಲ್ಲ ಹೂ ಗೆಳತಿ ಇ ದುನಿಯಾ ನಮಗಲ್ಲ

ವಿಶ್ವಾಸವಿರದ ಧ್ರೋಹಿ ದುನಿಯಾ ನೀನುನು ಹಾಗೆನ ಹೂ ಗೆಳತಿ ನಿನ್ನಲು ವಿಷವೇನ

Saturday, January 10, 2009

ಗೆಳಯರು...ಸಿಗುವುದು ತುಂಬಾ ಕಷ್ಟ

ಮಿಲಿಯಾಂತರ ಜನರನ್
ಫ್ರೆಂಡ್ ಮಾಡ್ಕೊಳೋದು
ದೊಡ್ಡದಲ್ಲ ಕಣ್ರೀ ......
ಮಿಲಿಯಾಂತರ ಜನ ಎದುರು :) :)
ಬಂದು ನಿಂತರು ಪಕ್ಕದಲ್ಲಿ
ಬಂದು ನಿಲ್ಲೋ ಒಬ್ಬ
ಫ್ರೆಂಡನ್ನು ಪಡೆಯೋದು
ನಿಜಕ್ಕೂ ಗ್ರೇಟ್ ಕಣ್ರೀ..................
ಒಂದು ಕ್ಯಾಂಡಲ್ ಉರಿಸಲು
ಬೆಂಕಿ ಕಡ್ಡಿ ತನ್ನ ಬದುಕನ್ನೆ
ಕಳೆದುಕೊಳ್ಳುತ್ತದೆ..........
ಈ ಬೆಂಕಿ ಕಡ್ಡಿಯ ನೆನಪಲ್ಲಿ
ಕ್ಯಾಂಡಲ್ ತಾನೇ ಸುಟ್ಟುಕೊಂಡು
ಅಂತ್ಯ ಕಾಣುತ್ತೆ............
ಎಂಥಾ ಫ್ರೆಂಡ್ ಶಿಪ್,,....


ನಗುವ ಗುಲಾಬಿಯ ಹಿಂದೆ
ನೋವೆಂಬ ,ಮುಳ್ಳೀರುತ್ತೆ.
ಆದರೆ
ನಗಿಸುವವರ ಮನದಲ್ಲಿ
ನಗಲಾದದಷ್ಟು ನೋವಿರುತ್ತೆ.
ಇದೇ ನನ್ನ ಜೀವನ
This is my life.

ಸ್ನೇಹ ಮಾತಾಡುತ್ತೆ ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?
ಪ್ರೀತಿಯಿಂದ ಕೈ ಚಾಚಿದರೆ ಬೆಳಕು ..................
ಅದೇ ಕೋಪದಿಂದ ಕೈ ಚಾಚಿದರೆ ಶ್ವಾಕ್..............................

ಸುಂದರವಾದ ಗುಲಾಬಿ ನೋಡೋಕೆ ಸಿಗೋದು ಕಷ್ಟ ಸುಂದರವಾದ ಮಾತು ಕೇಳೋಕೆ ಸಿಗೋದು ಕಷ್ಟ ಹಾಗೆಒಳ್ಳೆಯ ಫ್ರೆಂಡ್ ಸಿಗೋದು ಕಷ್ಟ .........................

***ಹಾಯ್ ***

ಈ ಜಗತ್ತಿನ ನಿಯಮಗಳೇ
ತುಂಬ ತುಂಬ ವಿಚಿತ್ರ ……
ಕೆಲವರಿಗೆ ಪ್ರೀತಿ ಸಿಗುತ್ತೆ
ಕೆಲವರಿಗೆ ಮೋಸ ಆಗುತ್ತೆ …….
ಆದರೆ ನೀನು ಮಾತ್ರ ಯಾವತ್ತು
ನಗ್ತಿರಬೇಕು….. ಯಾಕೆಂದರೆ,
ನಿಮ್ಮ ನಗುವಿನಲ್ಲಿ ಇನ್ಯಾರದೋ
ಖುಷಿ ಇರುತ್ತೆ ನೆನಪಿರಲಿ ……..

ಮೊಗ್ಗಿನ ಮನಸ್ಸು .... ಯಾಕಿಂಗ್ ಹಾಡ್ತಾರೂ ಈ ಹುಡುಗರು ರೀಮಿಕ್ಸ್

*****ವಿನು *****Remix

ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.
ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.
ಹುಡುಗನ ಮನಸಲಿ ಏನಿದೆ,ಓದದೇ,ನೋಡದೇ
ಪ್ರೀತಿಯ ಮಾತನು ಹೇಳದೆ,ಸುಮ್ಮನೆ ಕಾಲ ಕೊಲ್ಲುವರು.
ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.
ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.

ಕೆಲಸಕೆ ಬಾರದ ಮಾತುಗಳಾ..,ಸುಮ್ಮನೆ ನಗಿಸುವ ಜೋಕುಗಳಾ..,
ಹೇಳುತ ತಲೆಯ ತಿನ್ನುವರೂ..,
ಹುಡುಗರ ಕಂಗಳು ಸೂಸುವ..,ಆಸೆಯ,ನೋಡದೇ,
ತೆರೆದಿಹ ಹೃದಯದ ಬಾಗಿಲ,ನೂಕದೆ ಹಾಗೆ ಹೋಗುವರು.
ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.
ಯಾಕಿಂಗಾಡ್ತಾರೋ ಈ ಹುಡುಗಿರು,ಯಾಕಿನ್ಮಾಡ್ತಾರೋ ಈ ಹುಡುಗಿರು.
//ಯಾಕಿಂಗಾಡ್ತಾರೋ//

ಸಕಲವೂ ತಿಳಿದಿದೆ ಎನ್ನುತಲಿ..,ಕೋತಿಯ ಚೇಷ್ಟೆಯ ಆಡುತಲಿ..,
ಮನೆ ಬಿಟ್ಟು ಬರುವೆನು ಎನ್ನುವರೂ..,
ಮನೆಯವರ ಎದುರಲಿ ನಿಂತರೇ..,ಹೆದರುತ,ಬೆದರುತ,
ಪ್ರೀತಿಯ ವಿಷಯವ ಹೇಳದೆ,ಏನೇನೋ ಹೇಳಿ ಓಡುವರು.
//ಯಾಕಿಂಗಾಡ್ತಾರೋ//

ನಲ್ಲೆ...ನಿನ್ನ ಮೊಗದ ಮೇಲೆ

ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,

ನಲ್ಲೆ, ನೀನೀಗ ನೋಡಲೆಂತು ಸೊಗಸು,

ಕೆಂದಾವರೆಯಂತ ಕೆನ್ನೆಯ ಮೇಲೆ,ಕಣ್ಣಿಂದ ಜಾರಿದ ಹನಿಯ ಲೀಲೆ,

ಬಿಂಬವಾಗಿ ನಾನಿದ್ದೆ ಆ ಹನಿಯಲ್ಲಿ,ಹೂವಿನ ಎಸಳಂತೆ ಜಾರಿಬಿತ್ತು ನನ್ನ ಅಂಗೈಲಿ,

ಬೊಗಸೆಯಲ್ಲಿ ಹಿಡಿದಿಟ್ಟ ಕಣ್ಣೀರ ಹನಿಯ,

ಎದೆಯ ಚಿಪ್ಪಲ್ಲಿಟ್ಟು, ಪ್ರೀತಿಯ ಮುತ್ತನು ಮಾಡಿ,

ಉಡುಗೊರೆಯ ನೀಡುವೆಕಣೆ,ಮುನಿಸಿನ ಮೊಗದ ಮೇಲೆ,

ಮಂದಹಾಸವ ಕಾಣುವಾಸೆಕಣೆ,



ಇಂತಿ ನಿನ್ನ ಪ್ರೀತಿಯ...
ಕಂಪನ

Wednesday, December 31, 2008

ನಿನ್ನ ಮುಡಿಗೆ ಮಲ್ಲಿಗೆ ಮುಡಿಸುವಾಸೆ..

ಟೊಕ್ಕಿ…..ಇದು ನಾನು ಬರೆಯುತ್ತಿರುವ ಮೊದಲ ತೊದಲ ಪತ್ರ.ನಾನು ಸುಳ್ಳು ಹೇಳುತ್ತಿದ್ದೀನಿ ಟೊಕ್ಕಿ, ನಂಬಬೇಡ ನನ್ನ.. ನಾನು ಬರೆದು ನಿನಗೆ ಕಳಿಸಲಾಗದ ಅಸಂಖ್ಯಾತ ಪತ್ರಗಳಲ್ಲಿ ಇದು ಒಂದು ಪತ್ರವಾಗದೇ ಇದ್ದರೆ ಸಾಕು ಟೊಕ್ಕಿ. ಜನ ನಗ್ತಾರೆ ಕಣೆ, ಕಾಲೇಜ್ ಹುಡುಗ ನಾನು.ನನ್ನ ರೂಮು ಯಾವ್ ತರ ಇರಬೇಕು ಹೇಳು? ಹಾಲಿವುಡ್ ಬಾಲಿವುಡ್ ಚಿತ್ರಗಳ ಅಮಲು ಅಮಲು ನಟಿಯರ ಗೋಡೆ ಚಿತ್ರಗಳು? ಪೋಲಿ ಗೆಳೆಯರು ಕದ್ದುಮುಚ್ಚಿ ಕೊಟ್ಟಂತ ನೀಲಿ ನೀಲಿ ಪೀಡೆ ಚಿತ್ರಗಳ ಜೊಲ್ಲು ಜೊಲ್ಲು ಸೀಡಿಗಳು? ಇಲ್ಲ ಟೊಕ್ಕಿ ಅದಕ್ಕೆ ಹೇಳಿದ್ದು ಜನ ನಗ್ತಾರೆ ಕಣೆ ಅಂತ. ಕೇಳಿಲ್ಲಿ ನೀನು ನನಗೆ ಮೊದಲು ಮೊದಲು ತೊದಲುತ್ತ ಕೊಟ್ಟು ಜಿಂಕೆಮರಿಯಂತೆ ಓಡಿಹೋದೆಯಲ್ಲ ಅದೇ ಪುಟಾಣಿ ನವಿಲುಗರಿ, ನನ್ನ ದೇವರ ಮನೆಯಂತ ಪುಟಾಣಿ ಕೋಣೆಯಲ್ಲಿ ಬೆಚ್ಚಗೆ ಕುಳಿತಿದೆ. ಮತ್ತೆ ನಾನು ಇದುವರೆಗು ಬರೆದು ನಿನಗೆ ಕಳಿಸಲಾಗದ ಒಟ್ಟು ನೂರ ನಲವತ್ತೆರೆಡು ಪತ್ರಗಳು ನಿನ್ನ ನವಿಲುಗರಿ ಜೊತೆಯಲ್ಲಿ ಕುಳಿತಿವೆ. ಇದು ನನ್ನ ನೂರ ನಲವತ್ತಮೂರನೆಯ ಪತ್ರ.. ಟೊಕ್ಕಿ ಐ ವ್ ಯು ಕಣೆ. ದೇವರ ಚಿತ್ರದ ಪಕ್ಕದಲ್ಲಿಯೆ ನಾನು ಕದ್ದು ಮುಚ್ಚಿ ತೆಗೆದ ನಿನ್ನ ಚಿತ್ರ ದೇವರಿಗೆ ಪೈಪೋಟಿ ಹೊಡೆಯುವಂತೆ ಕುಳಿತಿದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಲೀ ಅಂತ ತಳಮಳ ಶುರುವಾಗುತ್ತೆ. ಕೋಪ ಬೇಡ ಕಣೆ ನಾನು ದೇವರ ಮುಖವನ್ನೆ ಮೊದಲು ನೋಡೋದು. ಯಾಕಂದ್ರೆ ಜೀವನ ಪೂರ್ತಿ ನಿನ್ನ ಪುಟಾಣಿ ಮುಖವನ್ನ ನೋಡುತ್ತ ಇರಬೇಕಲ್ಲವ ನಾನು? ಅದಕ್ಕೆ ಆ ದೇವರ ದಯೆ ಬೇಕಲ್ವ ಟೊಕ್ಕಿ?

.
.ಯಾಕೊ ಗೊತ್ತಿಲ್ಲ ಇವತ್ತು ದೇವಸ್ಥಾನಕ್ಕೆ ಹೋಗ್ಲೆಬೇಕು ಅನ್ನಿಸ್ತು ಗೊತ್ತ. ಅದು ಗಾಳಿಆಂಜನೇಯನ ಸನ್ನಿಧಿ. ಪೂರ್ತಿ ಏಳು ಸುತ್ತು ಹೊಡೆದೆ. ಅದರರ್ಥ ನಿನ್ನ ಜೊತೆ ಏಳು ಹೆಜ್ಜೆ ಹಾಕಬೇಕು ಅಂತನ? ಅಥವ ಏಳು ಜನುಮಗಳಲ್ಲೂ ನೀನು ನನ್ನ ಪ್ರೀತಿಯ ಗುಬ್ಬಚ್ಚಿ ಹುಡುಗಿ ಅಂತಾನ? ಗೊತ್ತಿಲ್ಲ ಟೊಕ್ಕಿ ನನಗೆ. ಈ ಏಳು ಹೆಜ್ಜೆಗಳಲ್ಲಿ ನಂಬಿಕೆ ಇಲ್ಲ ಕಣೆ. ನನ್ನ ಜೀವನದಲ್ಲಿ ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನದೊಂದು ಹೆಜ್ಜೆ ಜೊತೆಯಾಗಿರುತ್ತೆ, ಜೊತೆಯಾಗಿರಬೇಕು. ಅದೇನದು ಏಳು ಜನ್ಮ? ಈ ಜನುಮದಲ್ಲಿ ನನ್ನ ಜೊತೆಯಿರಬೇಕು ನೀನು ಕೊನೆಯವರೆಗು. ಇನ್ನು ಉಳಿದ ಎಲ್ಲಾ ಜನುಮಗಳಲ್ಲು ನಾನು ನಿನ್ನ ಜೊತೆ ಇರ್ತೀನಿ..ಇಷ್ಟು ಸಾಕಲ್ವ. ಅದೇನೋ ಆಂಜನೇಯನಂತ ಅಜನ್ಮ ಬ್ರಹ್ಮಚಾರಿಗೆ ಮತ್ತು,ನಿನ್ನ ಜೊತೆ ಮದುವೆಯಾಗಿ ಡಜನ್ ಡಜನ್ ಪಾಪುಪುಟಾಣಿಗಳನ್ನ ಮುದ್ದಾಡುವ ಯೋಜನೆ ಹಾಕಿಕೊಂಡಿರುವ ನನ್ನಂತವನ ಪ್ರಾರ್ಥನೆ ಇಷ್ಟವಾಯಿತು ಅನ್ನಿಸುತ್ತೆ ಬಲಗಡೆಯ ಪ್ರಸಾದ ಕಣೆ. ಅಷ್ಟೆ ಅಲ್ಲ ಬರುವಾಗ ಮೊಳಗುತ್ತಿದ್ದ ಘಂಟೆಯ ಸದ್ದಿನಲ್ಲಿ ಯಾವುದೋ ಪ್ರೇಮಗೀತೆಯ ಘಮ ಸುಮ

.
ಈ ಸಲ ಖಂಡಿತ ಮಿಸ್ಸ್ ಮಾಡೋದೆ ಇಲ್ಲ ಈ ಪತ್ರವನ್ನ ನಿನಗೆ ತಲುಪಿಸ್ತೀನಿ. ಹೊಳೆದಂಡೆಯ ಪಕ್ಕದಲ್ಲಿರುವ ಮಲ್ಲಿಗೆ ತೋಟದ ಹತ್ರ ಬರ್ತೀಯ ಅಲ್ವ ನೀನು? ಆ ಮಾರಮ್ಮನ್ ತರ ಸೀರೆ ಸುತ್ತಿಕೊಂಡು ಬರಬೇಡ ನೋಡು ನನಗೆ ಇಷ್ಟ ಅಗಲ್ಲ. ನಿನಗೆ ಕಪ್ಪು ಚೂಡಿ ತುಂಬಾ ಒಪ್ಪುತ್ತೆ. ಮೊದಲು ತಲೆಗೆ ಹರಳೆಣ್ಣೆ ಹಾಕೋದು ಕಮ್ಮಿ ಮಾಡು. ಮತ್ತೊಂದು ವಿಷ್ಯ ಈ ಸಲ ತಲೆ ತುಂಬ ಹೂವು ಮುಡಿದುಕೋಂಡು ಬರಬೇಡ. ನಿನಗೇ ಅಂತಾನೆ ಮಲ್ಲಿಗೆ ತೋಟದಲ್ಲಿ ಮೊಗ್ಗುಗಳನ್ನ ಕದ್ದು ತೆಗೆದಿಟ್ಟುಕೊಂಡಿರುತ್ತೇನೆ.ಮಲ್ಲಿಗೆ ಮೊಗ್ಗುಗಳ ಮಾಲೆ ಮಾಡಿ ನಾನೆ ನಿನಗೆ ಮುಡಿಸಬೇಕು ಅಂತ ತುಂಬಾ ಇಷ್ಟ ಕಣೆ. ಅಷ್ಟೆ ಅಲ್ಲ ನನ್ನ ನೂರ ನಲವತ್ತಮೂರು ಪತ್ರಗಳನ್ನು ನಿನ್ನ ಮಡಿಲಲ್ಲಿ ಓದಿ ಒದಿ ಹೇಳಬೇಕು. ನೀನು ಇಷ್ಟಗಲ ಕಣ್ಣರಳಿಸಿ ನೋಡೊದನ್ನ ನನ್ನ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ಬರ್ತೀಯ ಅಲ್ಲವೇನೆ?
ನಿನ್ನ ಚೋಮು

ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ......


ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!

Monday, December 29, 2008

ಕನಸುಗಳು.........

ಕನಸುಗಳು ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು ..

ಹಾಗೆ ಸುಮ್ಮನೆ"...

ಸಮಯ ಯಾರಿಗೂ ಕಾಯುವುದಿಲ್ಲ...
ದಿನಗಳು ಉರುಳುತ್ತವೆ..
ವರ್ಷಗಳು ಕೂಡ..
ನಾವು ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತೇವೆ..
ಹಾಗೇನೇ ಪ್ರೀತಿ ಪಾತ್ರರಿಂದ ದೂರ ಹೋಗುತ್ತೇವೆ...
ನಮ್ಮ ಜೀವನ ಬದಲಾಗುತ್ತದೆ...
ಸ್ನೇಹಿತರು ಬದಲಾಗುತ್ತಾರೆ..
ಸುತ್ತಲಿನ ಜನ ಬದಲಾಗುತ್ತಾರೆ..
ಆದರೆ..
ನಮ್ಮ ಹೃದಯ ಅವೆಲ್ಲ ಅತ್ಯಮೂಲ್ಯ ಕ್ಷಣಗಳನ್ನು ತನ್ನೊಂದಿಗೆ
ಇಟ್ಟುಕೊಂಡಿರುತ್ತದೆ..
ಅವೆಲ್ಲ ಬೇಕಿರಲಿ... ಬೇಡದಿರಲಿ....
ಅವು ಅಲ್ಲೇ ಇರುತ್ತವೆ...
ಕೆಲವೊಮ್ಮೆ ಆ ನೆನೆಪುಗಳು ನಮಗೆ ಸಂತೋಷ ಕೊಡುತ್ತವೆ..
ಕೆಲವೊಮ್ಮೆ ನೋವು..
ಇನ್ನು ಕೆಲವೊಮ್ಮೆ ಭರಿಸಲಾಗದ ಆಘಾತ...
ಆದರೆ ನಾವೆಲ್ಲ ಆ ನೆನಪುಗಳು ನಮ್ಮ ಹೃದಯದಲ್ಲೇ
ಒಂದು ಮೂಲೆಯಲ್ಲಿ ಇರುತ್ತವೆ...
ಯಾರೋ ಒಬ್ಬರು ನಮ್ಮ ಬಲಿ ಬಂದು ಕೇಳುತ್ತಾರೆ..
"ನಿಮ್ಮ ಮುಖ ಬಾಡಿದೆ ಯಾಕೆ" ಅಂತ?
ನೀವು ನಿಟ್ಟುಸಿರು ಹಾಕುತ್ತ ನಗುತ್ತ ಹೇಳುತ್ತೀರಾ..
"ಏನಿಲ್ಲ.. ಹಾಗೆ ಸುಮ್ಮನೆ"...

ಮೆಲ್ಲಮೆಲ್ಲನೆ ಬೀಸುವ ತಂಗಾಳಿ.............

ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !

ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !

ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !

ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !

ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !