ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Sunday, December 14, 2008

ಹುಟ್ಟು ಹಬ್ಬ

ನೀನು ನಿನ್ನ ಹುಟ್ಟಿದ ಹಬ್ಬ ಬೇಡ ಅಂದ್ರು ಅದು ನಿನ್ನ ಬಿಡೋದಿಲ್ಲ..!!
ಬೆಂಬಿಡದ ಭೊತದಂತೆ ನಿನ್ನ ಬೆನ್ನ ಹಿಂದೆಯೆ ಇರುತ್ತೆ..!!

ಪ್ರಪಂಚದಲ್ಲಿ ಹಲವಾರು ಅಗೋಚರ , ವಿಚಿತ್ರಗಳು ದಿನ ನಿತ್ಯ ನಡೆಯುತಲೆಇರುತ್ತೆ..!!
ಇಂತಹ ಚಿಂತೆಗಳು ಬೇಡಾ ಅಂದ್ರು ನಮ್ಮ ಕಾಡುತ್ತೆ.. ಪೀಡಿಸುತ್ತದೆ..!!

ವರ್ಷದಲ್ಲಿ ಒಂದು ದಿನವಾದರು ಈ ಏಲ್ಲ ಚಿಂತೆ , ಕಂತೆಗಳನ್ನ ಬುತ್ತಿ ಕಟ್ಟಿ ಅಟ್ಟದಮೇಲಿಡುವ ಓಂದು ಪ್ರಯತ್ನ ಈ ಹುಟ್ಟು ಹಬ್ಬದ ಪ್ರತೀಕ..!!

ಅದೊ ಅಲ್ಲದೆ , ನೀನು ದೋಡ್ಡ ವ್ಯಕ್ತಿಯಾಗಬೇಕಾದರೆ , ಮೊದಲು ನಿನ್ನನ್ನು ನೀನು ತಿಳಿದುಕೊಳ್ಳ ಬೇಕು..!!
ನಿನ್ನ ಕಾರ್ಯಗಳಿಗೇ ನಿನ್ನನ್ನು ನೀನು ಅಭಿನಂದಿಸಿಕೊಳ್ಳಬೇಕು..!!

ಆಗಲೆ , ಜೀವನ ಸಾರ್ಥಕವಾಗುವುದು.. ನಿನ್ನಿಂದ ಪ್ರಪಂಚಕ್ಕೆ ಒಂದು ಒಳ್ಳೆ ಕೊಡುಗೆ ನೀಡುವುದಕ್ಕಾಗುವುದು..!!

-ಯುವಪ್ರೇಮಿ

ಒಂದು ಪ್ರೇಮ ಕವಿತೆ

ಸುಳಿವು ನೀಡದಲೆ ಪ್ರೇಮವೆಂದು ಮನಸೊಳಗೆ ನುಗ್ಗಿತರಿಯೆ!
ಸೆಳೆಯುತಿಹಳು ನನ್ನಿಂದು ನಲ್ಲೆಯು ಅಯಸ್ಕಾಂತದಂತೆ!
ಮನಸು ವಾಲುತಿದೆ ನಲ್ಲೆಯತ್ತ; ಇವಳೆಂಥ ಮುದದ ಚಿಲುಮೆ!
ಕನಸ ಮಾಲೆ ಪೋಣಿಸುತ ನಾನಿರುವೆ; ಯಾರದೇನು ಮಹಿಮೆ!

ಸೋಲುತಿರುವೆನುಪಮಾನ ಹುಡುಕುವಲಿ; ಇವಳಿಗಿಲ್ಲ ಸಾಟಿ!
ಲಭಿಸಲಿಲ್ಲ ಉಪಮಾನವೆಲ್ಲಿಯೂ; ಹೋದೆ ಎಲ್ಲ ದಾಟಿ!
ಮನವ ತಣಿಸುವಳು ಚಂದ್ರನಂತೆ; ರವಿಯಂತೆ ತಳ್ಳಿ ತಮವ!
ರವಿಗೆ ಹೋಲಿಸಲೊ? ಇಲ್ಲ ಚಂದ್ರನಿಗೊ? ನಿನ್ನ ಹೊಳೆವ ಮೊಗವ!

ಮಧುವ ಧಾರೆ ನಾಲಗೆಗೆ ಬೀಳಲದು ಹೇಗೆ ಬಹಳ ಹಿತವು
ಇವಳ ವಾಣಿಯನು ಕೇಳುವಲ್ಲಿ ನನಗಂತೆ ಬಹಳ ಸುಖವು!
ವಾಣಿ ಕಾಯುವಳು ಇವಳ ವಾಣಿಯನು ಕೇಳಲೆಂದು ನಿರುತ!
ನನ್ನ ಭಾಗ್ಯವೋ? ನಾನು ಅದನು ಆಲಿಪುದರಲ್ಲಿ ನಿರತ!

ನಾಚಿ ನಗಲು ಇವಳೆನ್ನ ಮನಸಿನಲಿ ಮಿಂಚಿನೋಟದಾಟ!
ಹಿತವ ಹಿಗ್ಗಿಸುವ ಗುಡುಗು ಮನಸಿನಲಿ! ಆಹಾ, ಸುಖದ ಕೂಟ!
ಬೆಚ್ಚಿ ಬಿದ್ದು ತಡವರಸಿ ನಡೆಯುವುದು ನನ್ನ ನಾಡಿಮಿಡಿತ!
ಒಂದು ಸಣ್ಣ ಕಿರುನಗೆಯದಷ್ಟೆ ಇದು, ಈ ಅನಂತ ಸೆಳೆತ!

ಉದಯರವಿಯ ಹೊಂಗಿರಣ ಹೊಳೆಯುವುದು ಇವಳ ಮುದ್ದು ಮೊಗದಿ!
ಆ ಹೊಳಪನೀಕ್ಷಿಸುತ ಕಣ್ಣ ಬಿಡುವುದದು ಸುಪ್ರಭಾತ ದಿನದಿ!
ಕೈಯ್ಯ ಹಿಡಿಯಬೇಕಿವಳದೆಂದು ಬಯಸಿಹುದು ಎನ್ನ ಮನವು!
ನಾಕದಲ್ಲಿ ಇಹ ವೃಕ್ಷದಲ್ಲಿವಳು ಬಾಡದಂಥ ಸುಮವು!