ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Wednesday, January 14, 2009

಻಻ ಅತೃಪ್ತರು....!

ಉಳ್ಳವರು ಹತ್ತಿ ಹಾಸಿಗೆ
ಮೇಲೆ ಮಲಗುವರು
ನಾನೇನು ಮಾಡಲಿ ರೈತನಯ್ಯಾ
ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ
ನಾಯಿಯೇ ಅಂಗರಕ್ಷಕ
ನನಗೇಕೆ ಹಂಸತೂಲಿಕಾತಲ್ಪವಯ್ಯಾ
ತಂಗಾಳಿ ಬೀಸಿರಲು
ಕೋಗಿಲೆ ಹಾಡಿರಲು
ಹಸಿದ ಹೊಟ್ಟೆ ತಣ್ಣಗಿರಲು
ನಿದ್ದೆ ಬರದಿರುತ್ತದೆಯೇ
ನಿನ್ನೆಯ ಚಿಂತೆಯಿಲ್ಲ
ನಾಳೆಯ ಹಂಗಿಲ್ಲ
ಕೇವಲ ಇಂದಿನ ರಾಜರು
ನಾವು ಇಂದಿಗೆ ತೃಪ್ತರು

ಹನಿಗವನ

**ಪ್ರೀತಿ**
ದೇವಿಗಾಗಿ ಗರ್ಭಗುಡಿಯ
ಬಾಗಿಲ ಬಳಿ ಕಾದು
ಸುಸ್ತಾದ ಭಕ್ತ, ಕೊನೆಗೆ
ನಂದಾದೀಪದ ಬೆಳಕಿಗೆ
ಕೈ ಮುಗಿದು ಹೊರಟ.
*******************

**ನನ್ನ-ನಿನ್ನ ನಡುವೆ**

ಒಲುಮೆಯ ಸಾಗರವಿದೆ
ನೋವ-ನಲಿವ ಅಲೆಗಳಿವೆ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!

ಹೊಸ ಕನಸು ಮೂಡುವ ಮೊದಲು

ಹೊಸ ಕನಸು ಮೂಡವಾ ಮೊದಲು
ಮೂಕವಾಗಿದೆ ನನ್ನ ಮನಸು
ಮಾತು ಮೂಡುತ್ತಿಲ್ಲ, ಎನೊಂದು ತಿಳಿಯುತ್ತಿಲ್ಲ
ನನಗಂತೂ ಇದೇ ಮೊದಲು.
ಹೊಸ ಪರಿಚಯದ ಹಂಗೇ,
ಅವಳ ಕುಡಿನೋಟದ ಬಂಧವೇ?
ಮೊದಲೆಂದು ಹೀಗಾಗಿರಲಿಲ್ಲ, ಇದು
ನನಗಂತೂ ಇದೇ ಮೊದಲು.
ಮಾತು ಬರಿ ತೋದಲು, ನೋಟ ಒಲವೇ ಒಲವು
ಅವಳ ಕುಡಿನೋಟದಲ್ಲಿ ಕಳೆದು ಹೋಗಿರುವೆನೆನೋ?
ಹುಡುಕುತ್ತಿದ್ದನೆ ನನ್ನನ್ನೆ ನಾನು, ಇದು
ನನಗಂತೂ ಇದೇ ಮೊದಲು.
ಬೀಜ ಮೊಳೆಯುವ ಮುನ್ನ
ಕನಸು ಹುಟ್ಟುವ ಮುನ್ನ
ಹೀಗಾಗಲೇ ಬೇಕೆನೋ? ಇದು
ನನಗಂತೂ ಇದೇ ಮೊದಲು,
ಅಲ್ಲಿ ಅವಳದೂ ಇದೇ ಸ್ಥಿತಿಯೇನೋ?

ಸ್ನೇಹವೊಂದಿದ್ದರೇ ಸಾಕು

ರೆಕ್ಕೆ ಪುಕ್ಕವಿಲ್ಲದ
ಮನಸ್ಸೆಂಬ ಗಗನ ಪಕ್ಷಿಗೆ
ನಿರ್ದಿಷ್ಟ ರೊಪಕೊಟ್ಟು
ಬಾನಿನಲ್ಲಿ ತಂಗಾಳಿಯ ಸ್ಪರ್ಶವನ್ನು
ಅನುಭವಿಸಲು ಅವಕಾಶ ನಿಡುವ
ಅಂತರಂಗದಾಳದ ಭಾವವೇ ' ಸ್ನೇಹ '.

ಆಕಾಶದಷ್ಟು ಅಗಲವಾದದ್ದು ಆಸೆ
ನೀರಿನಷ್ಟು ತೆಳುವಾದದ್ದು ಉಸಿರು
ಹೊವಿನಂತೆ ಮೃದುವಾದದ್ದು ಮನಸ್ಸು
ವಜ್ರಕ್ಕಿಂತ ಕಠಿಣವಾದದ್ದು ನಮ್ಮ ಸ್ನೇಹ.

ಸ್ನೇಹಕ್ಕೆ ಬೇಧವಿಲ್ಲ,
ಮನಸ್ಸಿಗೆ ರೊಪವಿಲ್ಲ,
ಕವನಕ್ಕೆ ಕಣ್ಣಿಲ್ಲ,
ನೆನಪಿಗೆ ಶತ್ರುವಿಲ್ಲ,
ಕಲ್ಪನೆಗೆ ಲೋಕವಿಲ್ಲ, ಆದರೆ
ಯಾರಿಗೆ ಯಾರಿಲ್ಲದಿದ್ದರೊ ನನಗೆ
ನಿಮ್ಮ ಸ್ನೇಹವಿದ್ದರೆ ಸಾಕು