ಅಂಕೆ ಶಂಕೆ ಇಲ್ಲದ ಪ್ರೀತಿಯ ಹೇಳಿ ಕೊಟ್ಟೋಳು ಯಾರೇ?
ಗಿರಿ ಗಗನದ ಮೇಲೆ ಆಣೆ ಮಾಡಿ ಕೈಗೆ ಕೈ ಬೆಸೆದವಳು ಯಾರೇ?
ನನ್ನ ಹೃದಯದ ಭಾಷೆಗೆ ದನಿಯಾದ ಪ್ರಿಯತಮೆ ಯಾರೇ?
ನನ್ನೆದೆಯ ವೀಣೆಯ ಮೀಟಿ ನಾದವ ತಂದವಳು ಯಾರೇ?
ಬಿಳಿ ಮೋಡದ ನಗೆಯ ಸೂಸಿ ಕನಸಲ್ಲಿ ಕಾಡೋಳು ಯಾರೇ?
ಚಂದಿರನ ಬೆಳಕಲ್ಲಿ, ಹನಿಯುವ ಇಬ್ಬನಿಯಲ್ಲಿ ಬಿಗಿದಪ್ಪಿದವಳು ಯಾರೇ?
ಮುಸ್ಸಂಜೆ ಮುಬ್ಬಲ್ಲಿ, ಬಿಸಿಯುಸಿರ ಬೇಗೆಯಲ್ಲಿ ಮುತ್ತಿಟ್ಟೋಳು ಯಾರೇ?
ನೀನ್ಯಾರೆ??????
ಇಂತಿ ನಿನ್ನ ಪ್ರೀತಿಯ...
ಕಂಪನ