ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Tuesday, March 17, 2009

ಮುಂಗಾರು ಮಳೆ ಹಾಡಿನರಿಮಿಕ್ಸ್


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದೆ ಮೇಲೆ
ಸುರಿವ ರಭಸದ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದು ತಿಳಿಯಾದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿನಿಂತೆ ನಾನು
ಉಕ್ಕಿ ಉಕ್ಕಿ ಬರುವ ಜಲವು ಎನು ಕೋಡಿಯೋ

ಯಾವ ಕಾರಿನಿಂದ ಯಾರ ಮೇಲೆ ನೀರೆರಗುವುದೋ
ಯಾವ ಹನಿಗಳಿಂದ ಯಾವ ನೆಲವು ಕೆಸರಾಗುವುದೋ
ಯಾವ ಕೆಸರಲ್ಯಾರ ಹೆಸರೋ ಯಾರು ಬರೆದರೋ
ಯಾವ ಬಣ್ಣದ ಕೂಡೆಯು ಯಾರ ಕೈಯಿನಲ್ಲರಳುವುದೋ
ಯಾರ ತಲೆಯ ಮೇಲೇರುವುದೋ ಯಾರು ಬಲ್ಲರು

ಓಲವ ಮಳೆಯ ಮಾಮ ನಗುತ್ತಾ ಬಂದ ಮನೆಯಂಗಳಕೆ
ಮಬ್ಬು ಬೆಳಕಿನಲ್ಲಿ ಒಂದು ಕಾಲು ಗಂಟೆಯ ಒಳಗೆ
ಒಗೆದ ಬಟ್ಟೆಯೆಲ್ಲಾ ರಾಡಿ ಏನು ಮೋಡಿಯೋ
ದೊಡ್ಡ ಮೋರಿಯಲ್ಲಿ ಕಳೆದು ಹೋಗೋ ದುಃಖವ ನೆನೆದು
ಇನ್ನೂ ಇಲ್ಲೆ ನಿಂತಿದೆ ನೀರು ಏನು ಮಾಡಲೀ,
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ !!!

ಹೃದಯ

ಒಂದೊಮ್ಮೆ ನಾನು ಸತ್ತರೆ,

ನನ್ನನ್ನು ಸುಡುವ ಮೊದಲು,

ನನ್ನ ಹೃದಯವನ್ನು ಕ್ಷೇಮವಾಗಿ ತೆಗೆದುಕೋ.

ನಾನು ನನ್ನ ಹೃದಯದ ಬಗ್ಗೆ ಯೋಚಿಸುತ್ತಿಲ್ಲ,

ಆ ಹೃದಯದೊಳಗಿರುವ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೇನೆ.

ನಿನ್ನ ಹೃದಯದಲ್ಲಿ ಯಾರೋ ಇರಬಹುದು,

ನಿನ್ನ ಕನಸಿನಲ್ಲಿ ಯಾರೋ ಇರಬಹುದು,

ನಿನ್ನ ಬದುಕಿನಲ್ಲಿಯಾರೋ ಇರಬಹುದು,

ಆದರೆ . .ನಿನ್ನ ನೆನಪಿನಲ್ಲಿ ಯಾರೂ ಇಲ್ಲದೇ ಇದ್ದಾಗ ನಾನಿರುತ್ತೇನೆ...