
ಮುತ್ತಿನಂತ ಮಂಜಿನ ಹನಿಗಳಲಿ ನಿನ್ನ ಹೆಸರ ಬರೆದೆ ಕಣೆ,
ಕಣ್ಣುಬ್ಬಿಗಂತಲೇ ಕಾಮನಬಿಲ್ಲನು ತೆಗೆದಿಟ್ಟೆಕಣೆ,
ನಿನ್ನ ನಗುವಲ್ಲಿ ಹರಿಯುವ ಜಲಪಾತವನೆ ಕಂಡೆ ಕಣೆ,
ಸಾಗರದಿ ಹವಳವ ಆರಿಸಿದೆ ನಿನ್ನ ದಂತಕಂತ ಕಣೆ,
ಎಳೆ ಗರಿಕೆಯ ಎಸಳುಗಳು ನಿನ್ನ ಮುಂಗುರುಳಿಗೆ ಕಣೆ,
ನನ್ನೆದೆಯಾಳದಲ್ಲಿ ಮಿಡಿದ ಹೃದಯದ ಬಡಿತ ನಿನದೇ ಕಣೆ,
ನಿನ್ನೊಲವ ಅಲೆಯಲ್ಲಿ ನಾ ಕೊಚ್ಚಿ ಹೋದೆ ಕಣೆ,
ಪ್ರಾಣ ಹೋದರು ನನ್ನುಸಿರು ನಿನಗೆ ಕಣೆ,
ಚಂದ್ರನ ನಾಚಿಸಿದ ಜಾಣೆ.... ನೀನಿಲ್ಲದೆ ನಾನಿಲ್ಲಕಣೆ,
ಇಂತಿ ನಿನ್ನ ಪ್ರೀತಿಯ...
ಕಂಪನ
No comments:
Post a Comment