ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Wednesday, December 31, 2008

ನಿನ್ನ ಮುಡಿಗೆ ಮಲ್ಲಿಗೆ ಮುಡಿಸುವಾಸೆ..

ಟೊಕ್ಕಿ…..ಇದು ನಾನು ಬರೆಯುತ್ತಿರುವ ಮೊದಲ ತೊದಲ ಪತ್ರ.ನಾನು ಸುಳ್ಳು ಹೇಳುತ್ತಿದ್ದೀನಿ ಟೊಕ್ಕಿ, ನಂಬಬೇಡ ನನ್ನ.. ನಾನು ಬರೆದು ನಿನಗೆ ಕಳಿಸಲಾಗದ ಅಸಂಖ್ಯಾತ ಪತ್ರಗಳಲ್ಲಿ ಇದು ಒಂದು ಪತ್ರವಾಗದೇ ಇದ್ದರೆ ಸಾಕು ಟೊಕ್ಕಿ. ಜನ ನಗ್ತಾರೆ ಕಣೆ, ಕಾಲೇಜ್ ಹುಡುಗ ನಾನು.ನನ್ನ ರೂಮು ಯಾವ್ ತರ ಇರಬೇಕು ಹೇಳು? ಹಾಲಿವುಡ್ ಬಾಲಿವುಡ್ ಚಿತ್ರಗಳ ಅಮಲು ಅಮಲು ನಟಿಯರ ಗೋಡೆ ಚಿತ್ರಗಳು? ಪೋಲಿ ಗೆಳೆಯರು ಕದ್ದುಮುಚ್ಚಿ ಕೊಟ್ಟಂತ ನೀಲಿ ನೀಲಿ ಪೀಡೆ ಚಿತ್ರಗಳ ಜೊಲ್ಲು ಜೊಲ್ಲು ಸೀಡಿಗಳು? ಇಲ್ಲ ಟೊಕ್ಕಿ ಅದಕ್ಕೆ ಹೇಳಿದ್ದು ಜನ ನಗ್ತಾರೆ ಕಣೆ ಅಂತ. ಕೇಳಿಲ್ಲಿ ನೀನು ನನಗೆ ಮೊದಲು ಮೊದಲು ತೊದಲುತ್ತ ಕೊಟ್ಟು ಜಿಂಕೆಮರಿಯಂತೆ ಓಡಿಹೋದೆಯಲ್ಲ ಅದೇ ಪುಟಾಣಿ ನವಿಲುಗರಿ, ನನ್ನ ದೇವರ ಮನೆಯಂತ ಪುಟಾಣಿ ಕೋಣೆಯಲ್ಲಿ ಬೆಚ್ಚಗೆ ಕುಳಿತಿದೆ. ಮತ್ತೆ ನಾನು ಇದುವರೆಗು ಬರೆದು ನಿನಗೆ ಕಳಿಸಲಾಗದ ಒಟ್ಟು ನೂರ ನಲವತ್ತೆರೆಡು ಪತ್ರಗಳು ನಿನ್ನ ನವಿಲುಗರಿ ಜೊತೆಯಲ್ಲಿ ಕುಳಿತಿವೆ. ಇದು ನನ್ನ ನೂರ ನಲವತ್ತಮೂರನೆಯ ಪತ್ರ.. ಟೊಕ್ಕಿ ಐ ವ್ ಯು ಕಣೆ. ದೇವರ ಚಿತ್ರದ ಪಕ್ಕದಲ್ಲಿಯೆ ನಾನು ಕದ್ದು ಮುಚ್ಚಿ ತೆಗೆದ ನಿನ್ನ ಚಿತ್ರ ದೇವರಿಗೆ ಪೈಪೋಟಿ ಹೊಡೆಯುವಂತೆ ಕುಳಿತಿದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಲೀ ಅಂತ ತಳಮಳ ಶುರುವಾಗುತ್ತೆ. ಕೋಪ ಬೇಡ ಕಣೆ ನಾನು ದೇವರ ಮುಖವನ್ನೆ ಮೊದಲು ನೋಡೋದು. ಯಾಕಂದ್ರೆ ಜೀವನ ಪೂರ್ತಿ ನಿನ್ನ ಪುಟಾಣಿ ಮುಖವನ್ನ ನೋಡುತ್ತ ಇರಬೇಕಲ್ಲವ ನಾನು? ಅದಕ್ಕೆ ಆ ದೇವರ ದಯೆ ಬೇಕಲ್ವ ಟೊಕ್ಕಿ?

.
.ಯಾಕೊ ಗೊತ್ತಿಲ್ಲ ಇವತ್ತು ದೇವಸ್ಥಾನಕ್ಕೆ ಹೋಗ್ಲೆಬೇಕು ಅನ್ನಿಸ್ತು ಗೊತ್ತ. ಅದು ಗಾಳಿಆಂಜನೇಯನ ಸನ್ನಿಧಿ. ಪೂರ್ತಿ ಏಳು ಸುತ್ತು ಹೊಡೆದೆ. ಅದರರ್ಥ ನಿನ್ನ ಜೊತೆ ಏಳು ಹೆಜ್ಜೆ ಹಾಕಬೇಕು ಅಂತನ? ಅಥವ ಏಳು ಜನುಮಗಳಲ್ಲೂ ನೀನು ನನ್ನ ಪ್ರೀತಿಯ ಗುಬ್ಬಚ್ಚಿ ಹುಡುಗಿ ಅಂತಾನ? ಗೊತ್ತಿಲ್ಲ ಟೊಕ್ಕಿ ನನಗೆ. ಈ ಏಳು ಹೆಜ್ಜೆಗಳಲ್ಲಿ ನಂಬಿಕೆ ಇಲ್ಲ ಕಣೆ. ನನ್ನ ಜೀವನದಲ್ಲಿ ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನದೊಂದು ಹೆಜ್ಜೆ ಜೊತೆಯಾಗಿರುತ್ತೆ, ಜೊತೆಯಾಗಿರಬೇಕು. ಅದೇನದು ಏಳು ಜನ್ಮ? ಈ ಜನುಮದಲ್ಲಿ ನನ್ನ ಜೊತೆಯಿರಬೇಕು ನೀನು ಕೊನೆಯವರೆಗು. ಇನ್ನು ಉಳಿದ ಎಲ್ಲಾ ಜನುಮಗಳಲ್ಲು ನಾನು ನಿನ್ನ ಜೊತೆ ಇರ್ತೀನಿ..ಇಷ್ಟು ಸಾಕಲ್ವ. ಅದೇನೋ ಆಂಜನೇಯನಂತ ಅಜನ್ಮ ಬ್ರಹ್ಮಚಾರಿಗೆ ಮತ್ತು,ನಿನ್ನ ಜೊತೆ ಮದುವೆಯಾಗಿ ಡಜನ್ ಡಜನ್ ಪಾಪುಪುಟಾಣಿಗಳನ್ನ ಮುದ್ದಾಡುವ ಯೋಜನೆ ಹಾಕಿಕೊಂಡಿರುವ ನನ್ನಂತವನ ಪ್ರಾರ್ಥನೆ ಇಷ್ಟವಾಯಿತು ಅನ್ನಿಸುತ್ತೆ ಬಲಗಡೆಯ ಪ್ರಸಾದ ಕಣೆ. ಅಷ್ಟೆ ಅಲ್ಲ ಬರುವಾಗ ಮೊಳಗುತ್ತಿದ್ದ ಘಂಟೆಯ ಸದ್ದಿನಲ್ಲಿ ಯಾವುದೋ ಪ್ರೇಮಗೀತೆಯ ಘಮ ಸುಮ

.
ಈ ಸಲ ಖಂಡಿತ ಮಿಸ್ಸ್ ಮಾಡೋದೆ ಇಲ್ಲ ಈ ಪತ್ರವನ್ನ ನಿನಗೆ ತಲುಪಿಸ್ತೀನಿ. ಹೊಳೆದಂಡೆಯ ಪಕ್ಕದಲ್ಲಿರುವ ಮಲ್ಲಿಗೆ ತೋಟದ ಹತ್ರ ಬರ್ತೀಯ ಅಲ್ವ ನೀನು? ಆ ಮಾರಮ್ಮನ್ ತರ ಸೀರೆ ಸುತ್ತಿಕೊಂಡು ಬರಬೇಡ ನೋಡು ನನಗೆ ಇಷ್ಟ ಅಗಲ್ಲ. ನಿನಗೆ ಕಪ್ಪು ಚೂಡಿ ತುಂಬಾ ಒಪ್ಪುತ್ತೆ. ಮೊದಲು ತಲೆಗೆ ಹರಳೆಣ್ಣೆ ಹಾಕೋದು ಕಮ್ಮಿ ಮಾಡು. ಮತ್ತೊಂದು ವಿಷ್ಯ ಈ ಸಲ ತಲೆ ತುಂಬ ಹೂವು ಮುಡಿದುಕೋಂಡು ಬರಬೇಡ. ನಿನಗೇ ಅಂತಾನೆ ಮಲ್ಲಿಗೆ ತೋಟದಲ್ಲಿ ಮೊಗ್ಗುಗಳನ್ನ ಕದ್ದು ತೆಗೆದಿಟ್ಟುಕೊಂಡಿರುತ್ತೇನೆ.ಮಲ್ಲಿಗೆ ಮೊಗ್ಗುಗಳ ಮಾಲೆ ಮಾಡಿ ನಾನೆ ನಿನಗೆ ಮುಡಿಸಬೇಕು ಅಂತ ತುಂಬಾ ಇಷ್ಟ ಕಣೆ. ಅಷ್ಟೆ ಅಲ್ಲ ನನ್ನ ನೂರ ನಲವತ್ತಮೂರು ಪತ್ರಗಳನ್ನು ನಿನ್ನ ಮಡಿಲಲ್ಲಿ ಓದಿ ಒದಿ ಹೇಳಬೇಕು. ನೀನು ಇಷ್ಟಗಲ ಕಣ್ಣರಳಿಸಿ ನೋಡೊದನ್ನ ನನ್ನ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ಬರ್ತೀಯ ಅಲ್ಲವೇನೆ?
ನಿನ್ನ ಚೋಮು

ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ......


ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!

Monday, December 29, 2008

ಕನಸುಗಳು.........

ಕನಸುಗಳು ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು ..

ಹಾಗೆ ಸುಮ್ಮನೆ"...

ಸಮಯ ಯಾರಿಗೂ ಕಾಯುವುದಿಲ್ಲ...
ದಿನಗಳು ಉರುಳುತ್ತವೆ..
ವರ್ಷಗಳು ಕೂಡ..
ನಾವು ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತೇವೆ..
ಹಾಗೇನೇ ಪ್ರೀತಿ ಪಾತ್ರರಿಂದ ದೂರ ಹೋಗುತ್ತೇವೆ...
ನಮ್ಮ ಜೀವನ ಬದಲಾಗುತ್ತದೆ...
ಸ್ನೇಹಿತರು ಬದಲಾಗುತ್ತಾರೆ..
ಸುತ್ತಲಿನ ಜನ ಬದಲಾಗುತ್ತಾರೆ..
ಆದರೆ..
ನಮ್ಮ ಹೃದಯ ಅವೆಲ್ಲ ಅತ್ಯಮೂಲ್ಯ ಕ್ಷಣಗಳನ್ನು ತನ್ನೊಂದಿಗೆ
ಇಟ್ಟುಕೊಂಡಿರುತ್ತದೆ..
ಅವೆಲ್ಲ ಬೇಕಿರಲಿ... ಬೇಡದಿರಲಿ....
ಅವು ಅಲ್ಲೇ ಇರುತ್ತವೆ...
ಕೆಲವೊಮ್ಮೆ ಆ ನೆನೆಪುಗಳು ನಮಗೆ ಸಂತೋಷ ಕೊಡುತ್ತವೆ..
ಕೆಲವೊಮ್ಮೆ ನೋವು..
ಇನ್ನು ಕೆಲವೊಮ್ಮೆ ಭರಿಸಲಾಗದ ಆಘಾತ...
ಆದರೆ ನಾವೆಲ್ಲ ಆ ನೆನಪುಗಳು ನಮ್ಮ ಹೃದಯದಲ್ಲೇ
ಒಂದು ಮೂಲೆಯಲ್ಲಿ ಇರುತ್ತವೆ...
ಯಾರೋ ಒಬ್ಬರು ನಮ್ಮ ಬಲಿ ಬಂದು ಕೇಳುತ್ತಾರೆ..
"ನಿಮ್ಮ ಮುಖ ಬಾಡಿದೆ ಯಾಕೆ" ಅಂತ?
ನೀವು ನಿಟ್ಟುಸಿರು ಹಾಕುತ್ತ ನಗುತ್ತ ಹೇಳುತ್ತೀರಾ..
"ಏನಿಲ್ಲ.. ಹಾಗೆ ಸುಮ್ಮನೆ"...

ಮೆಲ್ಲಮೆಲ್ಲನೆ ಬೀಸುವ ತಂಗಾಳಿ.............

ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !

ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !

ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !

ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !

ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !

Tuesday, December 16, 2008

ಹಾಗೆ ಸುಮ್ಮನೆ ..... ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ..........

ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ

ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ತಾನಾಗಿಯೆ ಮನ ಹಾರಾಡಿದೆ
ನಿ ಕೇಳು ಒಲವಿನ ಇಂಚರ
ಪ್ರೀತಿಯಲ್ಲಿ ಸೋತು ನೋಡು
ಪ್ರೀತಿಯಲ್ಲಿ ಮಾತೆ ಹಾಡು
ಪ್ರೀತಿಯಲ್ಲಿ ಜಗವೆಲ್ಲ ಜಗಮಗ ಸುಂದರ
ಪ್ರೀತಿಇದು ಸುಳ್ಳೆ ಶೋಕಿ
ಪ್ರೀತಿಯಲ್ಲಿ ನೋವೆ ಬಾಕಿ
ಪ್ರೀತಿ ಇದು ಹಿತವಾಗಿ ಸೆಲೆಯುವ ಪಂಜರಾ

ಪಿಸುನೋಟದಿಂದಲೆ ಓಲೆ ಬರೆವ
ಅಲೆ ಮಾರಿ ಸಂತೋಷ ಈ ಪ್ರೀತಿಗೆ
ಮರುಳಾಗಿ ಹಿಂದೇನೆ ಓಡಿಬರುವ
ಹಟಮಾರಿ ಆವೇಶ ಈ ಪ್ರೀತಿಗೆ
ಈ ಕಾಯುವ ಖುಷಿ ಬೇರೆಇದೆ
ಮನಸೀಗ ಕನಸಿನ ಆಗರ
ಹೇ ಪ್ರೀತಿ ಬರಿ ಆಪಾದನೆ
ಗಾಯಗಳ ಸಂಪಾದನೆ
ಪ್ರೀತಿ ಇದು ನೂರೆಂಟು ಸುಳಿಗಳ ಸಾಗರ

ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ

ನೋವನ್ನು ನಲಿವನ್ನು ಲೆಕ್ಕ ಇಡುವ
ಬೇಕಾರು ತಕರಾರು ಈ ಪ್ರೇಮವು
ಏಕಾಂತದಲ್ಲೂನು ಪಕ್ಕ ಇರುವ
ನೆನಪಿನ ತವರೂರು ಈ ಪ್ರೇಮವು
ಇದ್ದಂತಯೆ ಮನ ಹಾಯಾಗಿದೆ
ಬೇಕೇನು ವಿರಹದ ಬೇಸರ
ಪ್ರೀತಿಯಲಿ ಯಲ್ಲ ಮಾಫಿ
ಪ್ರೀತಿಯಲಿ ಹೃದಯ ಸಾಫಿ
ಪ್ರೀತಿಸುವ ಕಣ್ಣಲ್ಲಿ ನಗವನು ಚಂದಿರ

ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ
ನಾನೇನು ನಂಬೋದಿಲ್ಲ ಪ್ರೀತಿ ಗೀತಿಯಾ
ಸರಿ ಇನ್ನೋಮ್ಮೆ ಕೇಳು ನನ್ನ ಪ್ರೇಮ ಗೀತೆಯಾ

Sunday, December 14, 2008

ಹುಟ್ಟು ಹಬ್ಬ

ನೀನು ನಿನ್ನ ಹುಟ್ಟಿದ ಹಬ್ಬ ಬೇಡ ಅಂದ್ರು ಅದು ನಿನ್ನ ಬಿಡೋದಿಲ್ಲ..!!
ಬೆಂಬಿಡದ ಭೊತದಂತೆ ನಿನ್ನ ಬೆನ್ನ ಹಿಂದೆಯೆ ಇರುತ್ತೆ..!!

ಪ್ರಪಂಚದಲ್ಲಿ ಹಲವಾರು ಅಗೋಚರ , ವಿಚಿತ್ರಗಳು ದಿನ ನಿತ್ಯ ನಡೆಯುತಲೆಇರುತ್ತೆ..!!
ಇಂತಹ ಚಿಂತೆಗಳು ಬೇಡಾ ಅಂದ್ರು ನಮ್ಮ ಕಾಡುತ್ತೆ.. ಪೀಡಿಸುತ್ತದೆ..!!

ವರ್ಷದಲ್ಲಿ ಒಂದು ದಿನವಾದರು ಈ ಏಲ್ಲ ಚಿಂತೆ , ಕಂತೆಗಳನ್ನ ಬುತ್ತಿ ಕಟ್ಟಿ ಅಟ್ಟದಮೇಲಿಡುವ ಓಂದು ಪ್ರಯತ್ನ ಈ ಹುಟ್ಟು ಹಬ್ಬದ ಪ್ರತೀಕ..!!

ಅದೊ ಅಲ್ಲದೆ , ನೀನು ದೋಡ್ಡ ವ್ಯಕ್ತಿಯಾಗಬೇಕಾದರೆ , ಮೊದಲು ನಿನ್ನನ್ನು ನೀನು ತಿಳಿದುಕೊಳ್ಳ ಬೇಕು..!!
ನಿನ್ನ ಕಾರ್ಯಗಳಿಗೇ ನಿನ್ನನ್ನು ನೀನು ಅಭಿನಂದಿಸಿಕೊಳ್ಳಬೇಕು..!!

ಆಗಲೆ , ಜೀವನ ಸಾರ್ಥಕವಾಗುವುದು.. ನಿನ್ನಿಂದ ಪ್ರಪಂಚಕ್ಕೆ ಒಂದು ಒಳ್ಳೆ ಕೊಡುಗೆ ನೀಡುವುದಕ್ಕಾಗುವುದು..!!

-ಯುವಪ್ರೇಮಿ

ಒಂದು ಪ್ರೇಮ ಕವಿತೆ

ಸುಳಿವು ನೀಡದಲೆ ಪ್ರೇಮವೆಂದು ಮನಸೊಳಗೆ ನುಗ್ಗಿತರಿಯೆ!
ಸೆಳೆಯುತಿಹಳು ನನ್ನಿಂದು ನಲ್ಲೆಯು ಅಯಸ್ಕಾಂತದಂತೆ!
ಮನಸು ವಾಲುತಿದೆ ನಲ್ಲೆಯತ್ತ; ಇವಳೆಂಥ ಮುದದ ಚಿಲುಮೆ!
ಕನಸ ಮಾಲೆ ಪೋಣಿಸುತ ನಾನಿರುವೆ; ಯಾರದೇನು ಮಹಿಮೆ!

ಸೋಲುತಿರುವೆನುಪಮಾನ ಹುಡುಕುವಲಿ; ಇವಳಿಗಿಲ್ಲ ಸಾಟಿ!
ಲಭಿಸಲಿಲ್ಲ ಉಪಮಾನವೆಲ್ಲಿಯೂ; ಹೋದೆ ಎಲ್ಲ ದಾಟಿ!
ಮನವ ತಣಿಸುವಳು ಚಂದ್ರನಂತೆ; ರವಿಯಂತೆ ತಳ್ಳಿ ತಮವ!
ರವಿಗೆ ಹೋಲಿಸಲೊ? ಇಲ್ಲ ಚಂದ್ರನಿಗೊ? ನಿನ್ನ ಹೊಳೆವ ಮೊಗವ!

ಮಧುವ ಧಾರೆ ನಾಲಗೆಗೆ ಬೀಳಲದು ಹೇಗೆ ಬಹಳ ಹಿತವು
ಇವಳ ವಾಣಿಯನು ಕೇಳುವಲ್ಲಿ ನನಗಂತೆ ಬಹಳ ಸುಖವು!
ವಾಣಿ ಕಾಯುವಳು ಇವಳ ವಾಣಿಯನು ಕೇಳಲೆಂದು ನಿರುತ!
ನನ್ನ ಭಾಗ್ಯವೋ? ನಾನು ಅದನು ಆಲಿಪುದರಲ್ಲಿ ನಿರತ!

ನಾಚಿ ನಗಲು ಇವಳೆನ್ನ ಮನಸಿನಲಿ ಮಿಂಚಿನೋಟದಾಟ!
ಹಿತವ ಹಿಗ್ಗಿಸುವ ಗುಡುಗು ಮನಸಿನಲಿ! ಆಹಾ, ಸುಖದ ಕೂಟ!
ಬೆಚ್ಚಿ ಬಿದ್ದು ತಡವರಸಿ ನಡೆಯುವುದು ನನ್ನ ನಾಡಿಮಿಡಿತ!
ಒಂದು ಸಣ್ಣ ಕಿರುನಗೆಯದಷ್ಟೆ ಇದು, ಈ ಅನಂತ ಸೆಳೆತ!

ಉದಯರವಿಯ ಹೊಂಗಿರಣ ಹೊಳೆಯುವುದು ಇವಳ ಮುದ್ದು ಮೊಗದಿ!
ಆ ಹೊಳಪನೀಕ್ಷಿಸುತ ಕಣ್ಣ ಬಿಡುವುದದು ಸುಪ್ರಭಾತ ದಿನದಿ!
ಕೈಯ್ಯ ಹಿಡಿಯಬೇಕಿವಳದೆಂದು ಬಯಸಿಹುದು ಎನ್ನ ಮನವು!
ನಾಕದಲ್ಲಿ ಇಹ ವೃಕ್ಷದಲ್ಲಿವಳು ಬಾಡದಂಥ ಸುಮವು!

Saturday, December 13, 2008

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !

ಪ್ರತಿವರ್ಷವೂ ಶಾಲೆಗೆ ಅಧಿಕೃತ ಚಕ್ಕರ್ ಹಾಕಿ ರೋಣಕ್ಕೆ ಹೋಗಿ "ಅಬ್ಬಿಗೇರಿ To ನರೇಗಲ್" ವಿದ್ಯಾರ್ಥಿ ಬಸ್ ಪಾಸ್ ಪಡೆಯುವದು ನಮ್ಮೂರ ವಿದ್ಯಾರ್ಥಿಗಳ ಸತ್ಸಂಪ್ರದಾಯ.ಪಾಸಿನ ನೆಪ ಹೇಳಿ ಶಾಲೆ ತಪ್ಪಿಸಿದರೆ ಯಾವ ಮಾಸ್ತರನೂ ಕೆಮ್ಮಂಗಿಲ್ಲಾ ಅನ್ನೊದು ಒಂದು ಕಾರಣವಾದರೆ, ಪಾಸಿನ ನೆಪದಲ್ಲಿ ಅಧಿಕೃತವಾಗಿಯೇ ರೋಣದ ಪ್ಯಾಟಿಯ ಚೈನಿ ಹೊಡೆಯುವದೂ ಇನ್ನೊಂದು ಕಾರಣವಾಗಿತ್ತು. ನಮ್ಮೂರ ಎಲ್ಲಾ ಸತ್ಸಂಪ್ರದಾಯಗಳನ್ನು ಬಲು ನಿಷ್ಠೆಯಿಂದ ಪಾಲಿಸುವ ನನಗೆ ಹಿಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಬೇರೆ ಕಾರಣಗಳೇ ಇರುತ್ತಿರಲಿಲ್ಲ.ಹೀಗಾಗಿ ನಾನು, ಶೆಟ್ಟರ ಸಣ್ಯಾ,ಮೂಲಿಮನಿ ಚಂದ್ರ ಮತ್ತು ನಮ್ಮ ಕ್ಲಾಸಿನ ಹಿರಿ ವಿಧ್ಯಾರ್ಥಿಯಾದ ಮತ್ತು ನಮಗೆಲ್ಲಾ ಗುರು ಸಮಾನನಾದ ಜುಮ್ಮಿ ಎಲ್ಲರೂ ಸೇರಿ ನಮ್ಮ ಯೋಗ್ಯತಾನುಸಾರವಾಗಿ ಟಾಕು ಟೀಕಾಗಿ ರೋಣದ ಸವಾರಿಗೆ ಸಿದ್ದರಾಗಿ ಹೊರಡುತ್ತಿದ್ದೆವು.. ನನ್ನ ನೆನಪಿನಂತೆ ನಾವು ಆವಾಗ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದೆವು(?) , ಆ ವರ್ಷವೂ ನಮ್ಮ ಪಟಾಲಂ ಮಾಮೂಲಿನಂತೆ ಬಸ್ಸಿನ ಟಾಪನ್ನೇರಿ ರೋಣಕ್ಕೆ ಹೊರಟು ನಿಂತೆವು.. ರೋಣದ ಬಸ ಸ್ಟ್ಯಾಂಡಿನಲ್ಲಿ ಆಗಲೇ ಬೇರೆ ಊರುಗಳ ವಿಧ್ಯಾರ್ಥಿಗಳು ಬಂದು ಠಳಾಯಿಸಿದ್ದರು..

ರೋಣದ ಬಸ ಸ್ಟ್ಯಾಂಡು ಅಂದರೆ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಕೊಳಕಿನಲ್ಲಿ ಯಾವುದಕ್ಕೂ ಕಮ್ಮಿಯಿಲ್ಲಾ. ಆದರೆ ರೋಣದ ಬಸ್ ಸ್ಟ್ಯಾಂಡಿನ ಹಿರಿಮೆಯಿರುವುದು ಅಲ್ಲಿನ ದೊಡ್ದ ಮೂತ್ರಾಲಯದಲ್ಲಿ. ಯಾಕೆಂದರೆ ಅದೊಂತರಾ ರೋಣ ತಾಲೂಕಿನ ಪ್ರೇಮಿಗಳ ನೋಂದಣಿ ಕಚೇರಿಯಿದ್ದಂತೆ. ಎಲ್ಲಾ ಮಜ್ನುಗಳು ತಮ್ಮ ಲೈಲಾಗಳ ಹೆಸರುಗಳನ್ನು ಆ ಪಾಯಖಾನೆಯ ಗೋಡೆಯ ಮೇಲೆ ಬರೆದು ’ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಅಂತಾ ಹಾಡುತ್ತಾ ತಮ್ಮ ಪ್ರೇಮ ಚರಿತ್ರೆಯನ್ನು ಇಡಿ ತಾಲೂಕಿಗೆ ಸಾರಿಬಿಡುತ್ತಿದ್ದರು. ಆದರೆ ಇವರ ’ಎದೆಗಾರಿಕೆ’ ಅವರ ಮಜ್ನುಗಳಿಗೆ ಭಲು ಮುಜುಗುರ ತಂದಿಕ್ಕುತ್ತಿತ್ತು.. ಹೀಗಾಗಿ ಹುಡುಗಿಯರೂ ಸಹ ತಮ್ಮ ಹೆಸರೂ ಸಹ ’ನೋಂದಣಿ’ ಯಾಗಿದೆಯಾ ಅಂತಾ ಕದ್ದು ಕದ್ದು ಗಂಡಸರ ಪಾಯಖಾನೆ ಕಡೆಗೆ ನೋಡುವುದು ಸಾಮಾನ್ಯವಾಗಿತ್ತು..ಇವರ ಈ ದೆಶೆಯಿಂದ ಇಡಿ ಪಾಯಖಾನೆಯ ಗೋಡೆ ಹಲವಾರು ಹೆಸರುಗಳು, ಬಾಣ ಚುಚ್ಚಿರುವ ಹೃದಯದ ಚಿತ್ರಗಳಿಂದ ತುಂಬಿ ಹೋಗಿತ್ತು, ಜೊತೆಗೆ ಮೂಲೆಯಲ್ಲಿ ಇದು ಗಂಡಸರ ಮಾತ್ತು ಹೆಂಗಸರ ಪಾಯಖಾನೆ ಎಂದು ಪ್ರತ್ಯೇಕಿಸಲು ಒಂದೊಂದು ಗಂಡು- ಹೆಣ್ಣಿನ ಚಿತ್ರಗಳು ಕಾಣಬಹುದಾಗಿತ್ತು.

ಈ ಪಾಯಖಾನೆಗೆ ಅಭಿಮುಖವಾಗಿ ಇರುವ ಕಿಡಕಿ ಮೂಲಕವೇ ನಮಗೆಲ್ಲಾ ಪಾಸು ವಿತರಿಸುವ ಕಾರ್ಯಕ್ರಮ ಇರುತ್ತಿತ್ತು. ಯಥಾಪ್ರಕಾರ ಜುಮ್ಮಿ ಪಾಳಿಯಲ್ಲಿ ನಿಲ್ಲದೇ ಉಳಿದವರಿಗೆ ರೋಪ್ ಹಾಕಿ, ಕಾದಾಡಿ ಬಡಿದಾಡಿ ಬೇಗನೆ ನಮಗೆಲ್ಲರಿಗೂ ಬೇಗನೆ ಪಾಸು ತಂದು ಕೊಟ್ಟ. ನಮ್ಮ ಮುಂದಿನ ಕಾರ್ಯಕ್ರಮವನ್ನು ನಾನು ಜುಮ್ಮಿ ರಾತ್ರಿಯೇ ಫಿಕ್ಸ ಮಾಡಿ ಬಿಟ್ಟಿದ್ದೆವು.. ಪ್ಲಾನಿನಂತೆ ಜುಮ್ಮಿ " ಸುಮ್ನೆ ಅಡ್ದಾಡುವುದಕ್ಕಿಂತ ನಾವು ಪಿಚ್ಚರಿಗೆ ಹೋಗೊಣ" ಅಂತ ಅನೌನ್ಸ ಮಾಡಿದ.

ನಾನು ಮಳ್ಳನಂತೆ " ಯಾವ ಪಿಚ್ಚರೆಲೇ ಜುಮ್ಮಿ? ರಾಮಾಚಾರಿ ಪಿಚ್ಚರು ಮೊನ್ನೆ ಟಿವಿಲೇ ಬಂದಿತ್ತಲ್ಲಾ!" ಎಂದು ಜುಮ್ಮಿ ಹೇಳುತ್ತಿರುವದು "ಆ ತರದ" ಚಿತ್ರದ ಬಗ್ಗೆ ಅಂತ ಗೊತ್ತಿದ್ದರೂ ಮುಗ್ದನಂತೆ ನಟಿಸಿದೆ..

ಆಗ ಜುಮ್ಮಿ ಗತ್ತಿನಿಂದ" ಲೇ ಪ್ಯಾಲಿ ಗೌಡ! ರಾಮಾಚಾರಿ ನೋಡಾಕ ನೀವೆಲ್ಲಾ ಇನ್ನೂ ಪ್ರೈಮರಿ ಸಾಲಿ ಹುಡುಗ್ರಾ?, ಮಕ್ಳಾ ಲಗ್ನಾ ಮಾಡಿದ್ರ ಮೂರು ಮೂರು ಮಕ್ಳ ಹಡೀತಿರಿ, ರಾಮಾಚಾರಿ ಅಂತೆ ರಾಮಾಚಾರಿ" ಅಂತ ಹುಸಿಕೋಪದಿಂದ ನಾವೂ ನೋಡ ಹೊರಟಿರುವ ಚಿತ್ರದ ಬಗ್ಗೆ ಸುಳಿವು ಕೊಟ್ಟ.
ಆದರೂ ಸಣ್ಯಾ, ಚಂದ್ರರಿಗೆ ಇನ್ನು ಅರ್ಥವಾಗದ್ದನ್ನು( ಅಥವಾ ಅರ್ಥವಾಗದವರಂತೆ ನಟಿಸುತ್ತಿದ್ದರೋ ಗೊತ್ತಿಲ್ಲಾ) ಕಂಡು ಜುಮ್ಮಿಗೆ ಅವರ ’ಜನರಲ್ ನಾಲೇಜ್’ ಬಗ್ಗೆ ಕನಿಕರವೆನಿಸಿ " ಲೇ ಹುಚ್ಚಪ್ಯಾಲಿ ನನ್ ಮಕ್ಳ ನಾವೀಗ ಒಂದೂವರೆ ತಾಸಿನ ಪಿಚ್ಚರಿಗೆ ಹೋಗುಣು" ಅಂತ ತಿಳಿ ಹೇಳಿ ಪಿಚ್ಚರಿನ ಹೆಸರು " ಆಡಂ and ಈವ The first love story" ಅಂತಲೂ ವಿವರಿಸಿದ.

ನಾನು ಆಗಲೇ ತುಂಬಾ ದೊಡ್ದವನಾಗಿದ್ದೆ ಅಥವಾ ಹಾಗಂತ ಅಂದುಕೊಂಡಿದ್ದೆ, ಹೀಗಾಗಿ ಜುಮ್ಮಿಯ ಈ ಆಫರ್ರು ನಾನು ’ದೊಡ್ದವನು" ಅಂತಾ ಅದಿಕೃತವಾಗಿ ಸಾರಲು ಸಿಕ್ಕ ವೇದಿಕೆಯೇ ಸರಿ ಅಂದುಕೊಂಡು "ಒಂದೂವರೆ ತಾಸಿ"ನ ಚಿತ್ರ ನೋಡಲು ರಾತ್ರಿಯೇ ಸಮ್ಮತಿಸಿದ್ದೆ. ಶೆಟ್ಟರ ಸಣ್ಯಾ ಮೊದಮೊದಲು ಅನುಮಾನಿಸಿದ, ನಂತರ ಜುಮ್ಮಿ ಅವನಿಗೆ ನಾವೂ ನೋಡ ಹೊರಟಿರುವುದು ವೈಜ್ಣಾನಿಕ ಕಮ್ ಸಾಮಾಜಿಕ ಚಿತ್ರವೆಂದೂ, ಅದರಲ್ಲಿ ಮಾನವನ ಜನಾಂಗ ಹೇಗೆ ಬೆಳೆದುಬಂತು, ನಮ್ಮ ಪೂರ್ವಜರು ಯಾರು ಇತ್ಯಾದಿ ಇತಿಹಾಸದ ಅಂಶಗಳನ್ನು ಹೇಳಿದ್ದಾರೆಂದೂ, ಜೊತೆಗೆ ಬಯೋಲಾಜಿಯ ಅನೇಕ ವಿಷಯಗಳನ್ನು ’ನೋಡಿ’ ತಿಳಿಯಬಹುದು ಅಂತಲೂ, ಸಮಾಜ ಮತ್ತು ವಿಜ್ಣಾನ ಓದದೇ ಪಾಸಾಗಬಹುದೆಂದು ಆಸೆ ಹುಟ್ಟಿಸಿದ. ಮೊದಲೇ ಹುಟ್ಟಾ ಬೃಹಸ್ಪತಿಯಾದ ಸಣ್ಯಾನಿಗೆ "ಪಠ್ಯ ಮತ್ತು ಪಠ್ಯೇತರ" ಸಂಗಮವಾದ ಈ ಚಿತ್ರವನ್ನು ನೋಡದಿರುವುದು ತನ್ನ ವಿಧ್ಯಾರ್ಥಿ ಜೀವನದಲ್ಲಿ ತುಂಬಲಾರದ ನಷ್ಟ ಅನಿಸಿ ಚಿತ್ರ ನೋಡಲೂ ಸಣ್ಯಾನೂ ಸಮ್ಮತಿಸಿದ.

ಆದರೆ ಚಂದ್ರ ಮಾತ್ರ ತನ್ನ ಕ್ಯಾರೆಕ್ಟರ್ ಸರ್ಟಿಫೀಕೆಟ್ ತೆಗೆದು ತುಂಬಾ ಒಳ್ಳೆಯ ಹುಡುಗನಂತೆ ಆಡತೊಡಗಿದ. ಜುಮ್ಮಿ ನಾನಾ ತರದಲ್ಲಿ ಚಿತ್ರದ ವರ್ಣನೆ ಮಾಡಿ ಚಿತ್ರ ನೋಡುವದರಿಂದ ನಿನ್ನ ಕ್ಯಾರೆಕ್ಟರ್ರು ಹಾಳಾಗುವದಿಲ್ಲಾ, ಚಿನ್ನ ಎಲ್ಲಿಟ್ಟರೂ ಚಿನ್ನವೇ ಅಂತೆಲ್ಲಾ ಪುಸಲಾಯಿಸಿದರೂ ಜಪ್ಪೆನ್ನಲಿಲ್ಲ. ಕೊನೆಗೆ ನಾನು ನಮ್ಮ ಹುಡುಗರ ಮರ್ಮಕ್ಕೆ ತಾಗುವ ಅಸ್ತ್ರ ತೆಗೆಯಲೇಬೇಕಾಯ್ತು. " ಲೇ ಚಂದ್ರ್ಯಾ! ನೀ ನಿಜವಾಗ್ಲೂ ಗಂಡಸಾಗಿದ್ದರೆ ನಮ್ಮ ಜೊತೆ ಬಾ, ಇಲ್ಲಾಂದ್ರೆ ರೋಣದ ಸಂತ್ಯಾಗ ಬಳಿ ಇಟ್ಕೋಂಡು ಊರ ಕಡೆ ನಡಿ. ನೀ ಎಂಥ ಗಂಡಸಲೇ?" ಅಂತ ಅಂದುಬಿಟ್ಟೆ. ಅದು ತಾಕಬೇಕಾದ ಜಾಗಕ್ಕೆ ತಾಕಿ ತಾನೂ ಗಂಡಸು ಅಂತ ನಿರೂಪಿಸಲಾದರೂ ನಮ್ಮ ಜೊತೆ ಬರಬೇಕಾಯ್ತು.. ಅಂತೂ ಇಂತೂ ನಮ್ಮ ನಾಲ್ವರ ಸವಾರಿ ವಿ.ಎಫ್ ಪಾಟೀಲ್ ಹೈಸ್ಕೂಲಿನ ಪಕ್ಕದ ಹಳೆ ಥೇಟರಿನತ್ತ ಸಾಗಿತು. ದಾರಿಯಲ್ಲಿ ಜುಮ್ಮಿ ಮೊದಲ ಬಾರಿಗೆ ಆ ತರದ ಚಿತ್ರ ನೋಡಲು ಹೋಗುತ್ತಿರುವವರಿಗೆ "ಕೋಡ್ ಆಫ್ ಕಂಡಕ್ಟ್ಸ" ಹೇಳಿಕೊಡತೊಡಗಿದ, ಥೇಟರಿನಲ್ಲಿ ಚಿಕ್ಕವರನ್ನೂ ಬಿಡುವುದಿಲ್ಲವೆಂದೂ, ಅದು ದೊಡ್ದವರ ಚಿತ್ರವಾಗಿದ್ದರಿಂದ ನಮ್ಮ ವಯಸ್ಸು ಕೇಳಿದರೆ ಹದಿನೆಂಟು ಅಂತ ಹೇಳಬೇಕೆಂದೂ ಮತ್ತು ಯಾರಾದ್ರೂ ಕೇಳಿದ್ರೆ ಸುಳ್ಳು ಹೆಸರು ಹೇಳಬೇಕೆಂದೂ ತಾಕೀತು ಮಾಡಿದ. ನಾವೆಲ್ಲಾ ಗುರು ಭಕ್ತಿಯಿಂದ ಹೂಂಗುಟ್ಟಿದೆವು. ಕೊನೆಗೂ ಥೇಟರ್ ಬಳಿ ಬಂದಾಗ ಥೇಟರ್ ಖಾಲಿ ಹೊಡೆಯುತ್ತಿತ್ತು. ಅಲ್ಲಲ್ಲಿ ಚಿತ್ರದ ಪೊಸ್ಟರುಗಳನ್ನು ಅಂಟಿಸಿದ್ದರು ಮತ್ತು ಪೊಸ್ಟರಿನ ಕೆಲಬಾಗಗಳನ್ನು ನೀಲಿ ಬಣ್ಣದಿಂದ ಅಳಿಸಿದ್ದರು, ಜೊತೆಗೆ ಅಲ್ಲಿ ಗೋಡೆಯ ಮೇಲೆ ದೊಡ್ದದಾಗಿ "ವಯಸ್ಕರಿಗಾಗಿ ಮಾತ್ರ" ಎಂದು ಬರೆದಿದ್ದು ನೋಡಿ ನಾವೆಲ್ಲಾ ಒಮ್ಮೆ ಇಡೀ ಅಬ್ಬಿಗೇರಿಗೆ ಹಿರಿಯರಾದಂತೆ ಭಾಸವಾಯಿತು. ಒಳ ಹೊಕ್ಕು ಕೂತರೇ ಆಗಲೇ ಚಿತ್ರ ಶುರುವಾಗಿತ್ತು.

ಚಿತ್ರ ಇಂಗ್ಲೀಷನಲ್ಲಿದ್ದುದರಿಂದ ನಮಗಂತೂ ಅರ್ಥವಾಗುವ ಸಂಭವವೇ ಇರಲಿಲ್ಲಾ, ಆದರೂ ನಾನು ತಿಳಿದವನಂತೆ ಬಾಯಿಗೆ ಬಂದಂಗೆ ಅನುವಾದ ಮಾಡಿ ಉಳಿದವರ ಮುಂದೆ "ಶಾಣ್ಯಾ" ಅನ್ನಿಸಿಕೊಳ್ಲಲು ಯತ್ನಿಸಿದರೂ, ಆ ಮುಂಡೆವು ಕೇಳುವುದಕ್ಕಿಂತಲೂ "ನೋಡಲು" ತುಂಬಾ ಉತ್ಸುಕರಾದುದರಿಂದ ನನ್ನ ಪ್ರಯತ್ನಗಳು ಹುಸಿಯಾದವು. ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ ( ಯಾಕೆಂದರೆ ಜುಮ್ಮಿ ಆಡಂ, ಆಪಲ್ ತಿಂದ ಕೂಡಲೇ ಅವನಿಗೆ ಎಮೋಶನ್ ಬಂದು ಒಂದು ಮಹತ್ವದ ಘಟನೆ ಸಂಭವಿಸುತ್ತದೆ ಎಂದು ಹೇಳಿದ್ದ) . ಆದರೆ ಜುಮ್ಮಿ ಹೇಳಿದಂತೆ ಯಾವ ರೋಚಕ ಸನ್ನಿವೇಶವೂ ಬರಲೇ ಇಲ್ಲ ಮತ್ತು ಮುಖ್ಯವಾಗಿ ಆಡಂ, ಈವ್ ಚಿತ್ರದುದ್ದಕ್ಕೂ ನಮಗೆ ಬೆನ್ನು ತೋರಿಸಿಯೇ ಇರುತ್ತಿದ್ದುರಿಂದ ನಮಗೆ ಯಾವ ಮಹಾನ ಸಾಧನೆಯೂ ಆಗಲಿಲ್ಲ. ಆದರೂ ಜುಮ್ಮಿ ನಮ್ಮನ್ನೂ ಸಮಾಧಾನಿಸಿ ಒಮ್ಮೇಲೇ ಚಿತ್ರದ ಮದ್ಯೆ ಬೇರೆ ಯಾವುದೋ ಮಲಯಾಳಿ ಚಿತ್ರದ ತುಣುಕು ತೋರಿಸಿಯೇ ತೊರಿಸುತ್ತಾರೆಂದು ಹೊಸ ಆಸೆ ಹುಟ್ಟಿಸಿ, ಪೂರ್ತಿ ಚಿತ್ರ ಕಣ್ನಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದರೂ ಯಾವುದೋ ಅಂತಹ ಪವಾಡ ನಡೆಯಲೇ ಇಲ್ಲಾ ಮತ್ತು ಕೊನೆಗೂ ಆಡಂ ಆಪಲ್ ತಿನ್ನಲೇ ಇಲ್ಲಾ..

ಚಿತ್ರ ಮುಗಿದ ಮೇಲೆ ನಂಗೆ ಜುಮ್ಮಿಯ ಮೇಲೆ ಅಸಾದ್ಯ ಕೋಪ ಬಂದಿತ್ತು. ಆದರೆ ಚಂದ್ರ, ತನ್ನ ಗಂಡಸ್ತನ ನಿರೂಪಿಸಿದ ಸಾರ್ಥಕತೆ ಅನುಭವಿಸುತ್ತಿದ್ದ. ಸಣ್ಯಾ ಮಾತ್ರ ಸಮಾಜ ಮತ್ತು ಬಯಾಲಾಜಿಯ ಯಾವ ಯಾವ ಪಾಠಗಳನ್ನು ಚಿತ್ರ ಕವರ್ ಮಾಡಿತ್ತು ಅಂತ ಲೆಕ್ಕ ಹಾಕುತ್ತಿದ್ದ. ಜುಮ್ಮಿ ಕೊನೆಗೂ ಬಾಯಿ ಬಿಟ್ಟು " ಲೇ ಓರಿಜಿನಲ್ಲು ಫಿಲ್ಮಲ್ಲಿ ’ಎಲ್ಲಾ’ ಇರುತ್ತದೆ, ಈ ಥೇಟರು ಬೋ...ಮಕ್ಳು ಎಲ್ಲಾ ಕಟ್ ಮಾಡಿ ಬಿಸಾಕಿರುತ್ತಾರೆ" ಅಂತ ಗೋಳಾಡಿ, ನಮ್ಮೆಲ್ಲಾ ನಿರಾಶೆಗಳಿಗೆ ಥೇಟರಿನವರನ್ನು ಹೋಣೆಯಾಗಿಸಿ ನಿರಮ್ಮಳವಾದ. ನಾನು ಜುಮ್ಮಿಯನ್ನು ನಂಬಿದ್ದೆ ತಪ್ಪಾಯ್ತು ಅಂದುಕೊಂಡು ಉಳಿದವರನೆಲ್ಲಾ ಕರೆದುಕೊಂಡು ರೋಣದ ಸಂತೆ ಅಲೆಯಲು ನಡೆದೆ.

ಕನ್ನಡದ ಹೊಸ ಬುದ್ದಿಜೀವಿ: ರವಿ ಬೆಳಗೆರೆ..

ರವಿ ಬೆಳಗೆರೆ ಬುದ್ದಿಜೀವಿಯಾಗುವ ಹ್ಯಾವಕ್ಕೆ ಬಿದ್ದಿದ್ದಾನೆ ಅಂತಾ ಇತ್ತಿಚಿನ ಅವನ ದಾಟಿಯನ್ನು ನೋಡಿದರೇ ಗೊತ್ತಾಗುತ್ತಿತ್ತು, ಆದರೆ ಈ ಮಟ್ಟದ ಬುದ್ದಿಜೀವಿಯಾಗುತ್ತಾನೆ ಅಂತಾ ಅನ್ಕೊಂಡಿರಲಿಲ್ಲ. ಇಷ್ಟೇಲ್ಲಾ ನಾನು ಯಾಕೆ ಹೇಳುತ್ತಿದ್ದೇನೆ ಅಂತಾ ನಿನ್ನೆಯ ’ವಿಜಯ ಕರ್ನಾಟಕ’ ಓದಿದವರಿಗೆ ಗೊತ್ತಾಗಿರಬಹುದು. ಭೈರಪ್ಪನವರ ಮತಾಂತರದ ಬಗೆಗಿನ ಲೇಖನಕ್ಕೆ ರವಿ ತೀರಾ ಅತಿಯಾಗಿ ಬರೆಯುತಾ ಹೊಗುತ್ತಾರೆ. ಮೊದಮೊದಲು ಭೈರಪ್ಪನವರ ವಿವೇಕವನ್ನು ಪ್ರಶ್ನಿಸುತ್ತಾ ಸಾಗುವ ಬೆಳಗೆರೆ ಕೊನೆಕೊನೆಗೆ ಶೇರು, ಐಟಿ, ಅಮೇರಿಕ ಅಂತೆಲ್ಲಾ ಬಡಬಡಿಸಿ "ಭೈರಪ್ಪ" ಮುತ್ಸದ್ದಿಯಲ್ಲ ಅಂತಾ ಶರಾ ಬರೆದುಬಿಡುತ್ತಾನೆ.. ಇಡೀ ಲೇಖನದ ತುಂಬಾ ಭೈರಪ್ಪನವರನ್ನು ಏಕವಚನದಲ್ಲೇ ಸಂಬೋದಿಸುತ್ತಾ ಸಾಗುವ ರವಿ, ಇಡಿ ಪ್ರತಿಕ್ರಿಯೆಯ ತುಂಬ "I am the final" ಎಂಬರ್ಥದಲ್ಲಿ ಬರೆಯುತ್ತಾ ಹೋಗುತ್ತಾರೆ..

ರವಿಯ ಪ್ರಕಾರ ಅಮೇರಿಕದವರು ಶ್ರೀಮಂತರು, ಹೀಗಾಗಿ ಬಯೋತ್ಪಾದನೆ ಬಗ್ಗುಬಡಿದರು.. ಆದರೆ ರವಿಗೆ ಇಡಿ ಅಮೇರಿಕಯಲ್ಲಿ ಒಬ್ಬನೇ ಒಬ್ಬ ಬುದ್ದಿಜೀವಿಯೂ ಬಯೋತ್ಪಾದಕರ ಪರ ಬೀದಿಗೀಳಿಯುವದಿಲ್ಲಾ ಮತ್ತು ಮಾನವ ಹಕ್ಕುಗಳು( ಈ ಹಕ್ಕು ಕೇವಲ ಬಯೋತ್ಪಾದರಿಗೆ ಮಾತ್ರ! ಸಾಮಾನ್ಯ ನಾಗರೀಕರಿಗೆ ಅಲ್ಲಾ ಅನ್ನುವಂತೆ) ಅಂತೆಲ್ಲಾ ಗೋಳೋ ಅಂತಾ ಅಳುತ್ತಾ ಕೂರುವದಿಲ್ಲಾ ಅನ್ನುವುದು ಕಾಣುವುದೇ ಇಲ್ಲಾ. ಅದಿರಲಿ ಅವನ ಪ್ರಕಾರ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವದು ತುಂಬಾ ಹಳೆಯ ಚಿಕ್ಕ ವಿಷಯವಂತೆ, ಅದನ್ನು ಭೈರಪ್ಪ ಹೇಳಬಾರದಿತ್ತಂತೆ.. ಮೊದಲು ಕಾಶ್ಮೀರದಲ್ಲಿ ಶುರುವಾಗಿದ್ದು ಹೀಗೆ ಅಲ್ಲವೇ? ಚಿಕ್ಕದಿದ್ದ ವಿಷಯ ಇಡಿ ಭಾರತವನ್ನೇ ಅಲುಗಾಡಿಸುವಷ್ಟು ಬೆಳೆದಿಲ್ಲವೇ? ದಶಕಗಳ ಹಿಂದೆ ಬರೀ ಆಶ್ರಯಕ್ಕೆ ಸಂಬಂಧಪಟ್ತ ವಿಷಯವಾಗಿದ್ದ್ದ ಬಾಂಗ್ಲಾದ ನಿರಾಶ್ರಿತರ ಸಮಸ್ಯೆ ಈಗ ಇಡಿ ದೇಶಕ್ಕೆ ತಲೇನೋವಾಗಿ, ನಿರಾಶ್ರಿತರ ಸಂಖ್ಯೇಯೆ ಮೂಲನಿವಾಸಿಗಳ ಸಂಖ್ಯೇಯನ್ನು ಮೀರಿ ಆಯಾ ರಾಜ್ಯಗಳ ರಾಜಕೀಯದ ಹಣೆಬರಹವನ್ನೆ ನಿರ್ಧರು್ಸುತ್ತಿಲ್ಲವೇ? ಇದೆಲ್ಲಾ ರವಿಗೆ ತಿಳಿಯದಾ? ಸ್ವಾತಂತ್ರ ಪೂರ್ವದಲ್ಲೆ ಮಹಾತ್ಮಾ ಗಾಂಧೀ ಕೂಡಾ ಮತಾಂತರ ಆಂದರೆ ದೇಶಾಂತರ ಅಂದಿರಲಿಲ್ಲವೇ? ಅದಕ್ಕೆ ಪೂರಕವೆನ್ನುವಂತೆ ಕೆಲ ಈಶಾನ್ಯ ರಾಜ್ಯಗಳು ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲವೇ? ಇದೆಲ್ಲಾ ಬುದ್ದಿಜೀವಿಗಳಿಗೆ ತಿಳಿಯದ ವಿಷಯವೇ?
ಚರ್ಚಿನ ಮೇಲೆ ದಾಳಿಗೆ ಇಷ್ಟು ಮನನೊಂದು ಪ್ರತಿಕ್ರಯಿಸುವ ಬುದ್ದೀಜೀವಿಗಳು ಭಟ್ಕಳದ ಮುಸ್ಲಿಂ ಬಯೋತ್ಪಾದಕರೆ ಬಗ್ಗೆ ಬಾಯಿಯೇ ತೆರೆಯುವದಿಲ್ಲವಲ್ಲ? ಭಜರಂಗಧಳ ನಿಷೇದಿಸಿ ಅಂತಾ ಹ್ಯಾವಕ್ಕೆ ಬಿದ್ದವರಂತೆ ಬಡಿದುಕೊಳ್ಲುವ ಒಬ್ಬ ಗಂಡಸಾದರೂ "ಸಿಮಿ" ನಿಷೇದಿಸಿ ಅನ್ನುತ್ತಾನಾ?. ನಸ್ಲೀಮಾ ಭಾರತದಲ್ಲಿ ರಕ್ಸ್ಕಣೆಯಿಲ್ಲಾ ಲಸ್ಕಾ ಪುಸ್ಕಾ ಅಂತೆಲ್ಲಾ ಹೇಳಿ ದೇಶ ಬಿಟ್ಟು ಹೋದಾಗ " ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲಾ" ಅಂತಾ ಬೊಬ್ಬೆ ಇಟ್ಟಿದನ್ನು ಪುಟಗಟ್ಟಲೆ ಬರೆದು ಚಟ ತೀರಿಸಿಕೊಂಡ ಮಾದ್ಯಮಗಳು ಆಕೆ ಮತ್ತೇ ಹಳೆ ಗಂಡನ ಪಾದವೇ ಗತಿ ಅಂದುಕೊಂಡು ಭಾರತಕ್ಕೆ ಬಂದದನ್ನು ಯಾವ ಮಾದ್ಯಮವೂ ಸುದ್ದಿ ಮಾಡಲೇ ಇಲ್ಲವಲ್ಲ್ಲಾ? ಇದೇ ತಸ್ಲಿಮಾಳನ್ನು ಹೈದರಾಬಾದನಲ್ಲಿ ಆಂದ್ರದ ಮುಸ್ಲಿಂ ಶಾಸಕರು ಥಳಿಸಲು ಹೋಗಿದ್ದನ್ನು ಯಾವ ಬುದ್ದಿಜೀವಿಯೂ ಬಾಯಿ ಬಿಡುವಿದಿಲ್ಲವಲ್ಲಾ? ಯಾಕೆಂದರೆ ಥಳಿಸಲು ಹೋದವರು ಮುಸ್ಲಿಂ ಶಾಸಕರೆಂದೆ?.ಅದೇ ಬರಹಕ್ಕೆ ಪ್ರತಿಕ್ರಿಯೆಯಾಗಿ ಬರೆದವನೊಬ್ಬ ಅನಂತಮೂರ್ತಿಗಳ ಪತ್ನಿ ಮೂರ್ತಿಗಳನ್ನು ಮತಾಂತರ ಮಾಡಿದ್ದಾರಾ? ಅಂತಾ ಕೇಳುವ ಅವರಿಗೆ, ಸೋನಿಯಾ, ರಾಜೀವ ಗಾಂಧಿ ಕ್ರೈಸ್ತ ಧರ್ಮ ಸ್ವೀಕರಿಸಿದ ಮೇಲೆಯೇ ಅವರ ಮದುವೆಯಾಗಿದ್ದು ಅಂತಾ ತಿಳಿದಿಲ್ಲವಾ?.

ಎಲ್ಲರಿಗೂ ಅಭಿಪ್ರಾಯ ಸ್ವಾತಂತ್ರವಿದೆ ಅನ್ನುವುದು ನಾನು ಒಪ್ತೀನಿ, ಹಾಗೆಂದ ಮಾತ್ರಕ್ಕೆ ನಾವೂ ಬೆಂಬಲಿಸುತ್ತಿರುವುದು ಯಾರನ್ನು? ಯಾವುದನ್ನು? ಅನ್ನುವ ಕನಿಷ್ಟ ಅರಿವಾದರೂ ಇರಬೇಕಲ್ಲವೇ?. ಇದೇ ಭಾರತದಲ್ಲಿ ಜೈನರೂ ಇದ್ದಾರೆ,ಭೌದ್ದರೂ ಇದ್ದಾರೆ, ನಾವೆಂದಾದರೂ ಅವರ ಮೇಲೇ ಹಲ್ಲೆ ಮಾಡಲಾಗಲೀ ಅವರ ಪ್ರಾರ್ಥನಾ ಮಂದಿರಕ್ಕೆ ಕಲ್ಲು ಎಸೆಯುವದಾಗಲೀ ನಡೆದಿದೆಯಾ?. ಕ್ರೈಸ್ತರ ಚರ್ಚುಗಳ ಮೇಲೆ ಹಲ್ಲೆ ಆಗುತ್ತಿದೆ ಅನ್ನುವವರು ಇದನ್ನು ಯೋಚಿಸಬೇಕಲ್ಲವೇ?. ಇನ್ನು ರವಿಯ ಉಳಿದ ವಿತಂಡ ವಾದಗಳ ಬಗ್ಗೆ, ಅವನ ಇತಿಹಾಸ ಪ್ರಜ್ಞೆಯ ಬಗ್ಗೆಯಾಗಲಿ ಮಾತನಾಡಿ ಪ್ರಯೋಜವವಿಲ್ಲಾ.. ಅವನಿಗೆ ನಾನು ಯಾರನ್ನು ಬಿಡುವುದಿಲ್ಲಾ, ಎಲ್ಲರನ್ನೂ ಜಾಲಾಡಬಲ್ಲೆ ಎಂಬುದನ್ನು ತೋರಿಸಿಕೋಳ್ಲಬೇಕಿತ್ತು ಅನಿಸುತ್ತೆ, ಅದಕ್ಕೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡಿದ್ದಾನೆ. ಅವನ ಉದ್ದೇಶ ಮತಾಂತರ ಸಮರ್ಥಿಸಿಕೊಳ್ಳುವುದಾಗಿತ್ತೋ, ಬುದ್ದ್ಜಿಜೀವಿ ಅನಿಸಿಕೊಳ್ಳುವುದಾಗಿತ್ತೋ ಅಥವಾ ಸುಮ್ನೆ ಭೈರಪ್ಪನವರನ್ನು ಟೀಕಿಸಿ ಚಟ ತೀರಿಸಿಕೊಳ್ಲುವದಾಗಿತ್ತೋ ಅನ್ನುವುದು ಅವನ ಪ್ರತಿಕ್ರಿಯೆ ಓದಿದ ಎಲ್ಲರಿಗೂ ತಿಳಿಯುತ್ತೆ.. ಕೆಲವೇ ಕೆಲವು ವರ್ಷಗಳ ಹಿಂದಿನ ಹಾಯ್ ನ ಸಂಪಾದಕೀಯ ಓದಿದರೆ ತಿಳಿಯುತ್ತೆ, ಇತ್ತಿಚಿನ ರವಿಯ ಚಿತ್ತ ಎತ್ತ ಇದೆ ಅನ್ನುವುದು..
ಇವೆಲ್ಲ ರವಿಗೆ ಗೊತ್ತಿಲ್ಲವಾ ಅಂತ ಅನುಮಾನ! ಮಲಗಿದವರನ್ನು ಎಬ್ಬಿಸಬಹುದು, ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸೋದು ಅಸಾದ್ಯ..

ಒಟ್ಟಿನಲ್ಲಿ ಸದ್ಯದಲ್ಲಿಯೇ ಕನ್ನಡಕ್ಕೆ ಇನ್ನೊಂದು "ಜ್ಞಾನಪೀಠ" ನಿರಿಕ್ಷಿಸಬಹುದು, ಕನಿಷ್ಟ ಯಾವುದಾದರೂ "ಸೌಹಾರ್ದ"ದ ಹೆಸರಿನ ಅಯೋಗದ ಅದ್ಯಕ್ಷಗಿರಿಯಾದರೂ ಕನ್ನಡಕ್ಕೆ ಒಲಿದು ಬಂದೀತು..

ಗೆಳೆಯನೊಬ್ಬನ ಕವನಗಳು...

ಅಮ್ಮನ ಬುತ್ತಿ ಬೇರಿನಲ್ಲಿ...

ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..

ಹಾಗೇ ಬಿಕ್ಕಿದ್ದು

ಒಮ್ಮೆ ಮಾತನಾಡಿಬಿಡು
ದಿನಾ ಮೊಬೈಲ್
ಫೋನ್ ಸ್ಪೀಕರಿಗೇ
ಕಣ್ಣೀರಿನ ಅಭಿಷೇಕದಿಂದ
ಕಲೆಯಾಗಿದೆ
ಕಿವಿಯನ್ನೇ ಮೊಗವಾಗಿಸಿ
ಅತ್ತುಕರೆದಾಗಿದೆ
ಹಾಗೇ ಎದ್ದು ಬಂದು ಬಿಡು
ಬೆಳದಿಂಗಳ ರಾತ್ರಿಯಲ್ಲಿ
ಕಣ್ಣಿಗೆ ಕಣ್ಣು ನೆಡು...


ಕಕ್ಕುಲತೆ, ಒಲವು
ಕಣ್ಣಲ್ಲಿ ಅದೆಂತಹ ಕಾವು
ಹೇಳುವ ಮಾತಿಗೆ
ಇಷ್ಟೇ ಜಾಡು
ಅಳತೆಯಿಲ್ಲದಷ್ಟು ಎದೆಯಲ್ಲಿರಿಸಿ
ಭ್ರಮಣ ಸಾಕುಮಾಡಿನ್ನು
ನಿಜಪಯಣ
ಬಂದುಬಿಡು ಹಾಗೇ ಕಣ್ಣಲ್ಲೊಮ್ಮೆ ಹೀರಿಬಿಡು!

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.

ಹಳೆಯ ಧಾರಾವಾಹಿಗಳ ನೆನೆದು..

ನಮ್ಮ ಮನೆಗೆ ಟಿ.ವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ- ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿ.ವಿ. ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು, ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟೀವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ

Saturday, December 6, 2008

Dialog of Mungaru Maale

ಈ ಜಗತ್ತಿನಲ್ಲಿ ಸಾವಿರಾರು ಬೆಲೆಬಾಳುವ ವಸ್ತುಗಳಿವೆ, ಎಲ್ಲದಕ್ಕು ಒಂದು ಬೆಲೆಯೂ ಇದೆ, ಆದರೆ ನಮ್ಮೀ ಸ್ನೇಹ ಮಾತ್ರ ಅದೆಲ್ಲಕ್ಕಿಂತ ಅತ್ಯಮೂಲ್ಯವಾದದ್ದು
ಯಾರನ್ನಾದರೂ ಬಿಸಿ ಬಿಸಿ ಕಾಫಿಗೆ ಕರೆಯಬೆಕೆ?
ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು? ಮಳೆಯಾಗಿ ಸುರಿದರೂ ಮನದಲ್ಲಿಲ್ಲ ನಿನ್ನ ನೆನಪು
ಮರೆವೆನೆಂದು ಕುಳಿತರೆ ನಿನ್ನ ನೆನಪುಗಳ ಮೆರವಣಿಗೆಗಳ ಸಾಲು ಸಾಲು ಮರಳಿ ಬರಲಾರದ ಹೃದಯವ ನೆನೆದು ಮನದ ಮುಗಿಲೊಳಗೀಗ ಮಳೆಯಿಲ್ಲ..!!
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ ನಿನ್ನ ಗುಂಗಿನಲ್ಲೇ ಕಳೆದಿದ್ದಿದೆ.. ಒಮ್ಮೆಯಾದರು ನೀನು ಮಗ್ಗಲು ಬದಲಿಸುವಾಗ ನನ್ನ ನೆನೆದಿದ್ದಿದೆಯ
ರೀ ಮ£Áê÷åಗ ಬ್ಯಾಡ ಟೈಂ ಶುರು ಆದ್ರೆ ತಲೆ ಕೆರ್ಕೊಂಡು ಕ್ಯಾನ್ಸರ ಆಗಿ ಡಾಕ್ಟgï ತಲೆನೇ ತಗಿಬೇಕು ಅಂತಾರೆ..ಅಂಥಾದ್ರಲ್ಲಿ ನಾನು ಈ ದಿಲ್ ಹಾರ್ಟ ಹೃದಯ ಅಂತಾರಲ್ಲಾ ಅಲ್ಲಿಗೆ ಕೈ ಹಾಕಿ ಪರಾ ಪರಾ ಅಂತ ಕೆರ್ಕೋಂಡು ಬಿಟ್ಟಿದಿನಿ ಕನ್ರೀ.....2)ನಿಮ್ ನಗೂ,ನಿಮ್ ಬ್ಯೂಟಿ,ನಿಮ್ ವೈಸ್,ನಿಮ್ ಕೂದ್ಲು,ನಿಮ್ ನೋಟ,ಈ ಬಿಕನ್ಯಾಸಿ ಮಳೆ,ನಿಮ್ ಗೆಜ್ಜೆ ಸದ್ದು,ಆ ವಾಚು,ಆ ರಾಸ್ಕಲ್ ದೇವದಾಸ್ ಗಂಟೆ ಸದ್ದು ಎಲ್ಲಾ ಮಿಕ್ಸ ಆಗಿ ನನ್ನ ಲೈಫಲ್ಲೆ ರೀಪೇರಿ ಮಾಡಾಕ್ಕಾಗ್ದೆಯಿರೊ ಅಷ್ಟು ಗಾಯಾ ಮಾಡಿದೆ ಕನ್ರಿ...3)ನನ್ಗೆ ಗೊತ್ತಾಗೋಯ್ತು ಕನ್ರಿ ನೀವು ನನ್ಗೆ ಸಿಗೋಲ್ಲಂತ...ಬಿಟ್ಕೋಟ್ಬಿಟ್ಟೆ ಕನ್ರೀ...ನಿಮ್ಮನ್ನ ಪಟಾಯಿಸಿ ಲೋಫರ ಅನ್ಸ್ಕೋಳದಕ್ಕಿಂತ ಒಬ್ಬ ಡಿಸೆಂಟ್ ಹುಡ್ಗನಾಗಿ ಇದ್ಬಿಟ್ರೇ ಸಾಕು ಅನ್ನಿಸ್ ಬಿಟ್ಟಿದೆ ಕನ್ರೀ....ಆದ್ರೆ ಒಂದು ವಿಷ್ಯಾ ತಿಳ್ ಕೋಳಿ ನನ್ನಷ್ಟು ನಿಮ್ಮನ್ನ ಇಷ್ಟ ಪಡೊವ್ರು ಈ ಭೂಮಿಮ್ಯಾಲೆ ಯಾರು ಸಿಗಲ್ಲಾ ಕನ್ರೀ...4)ಏನೋ ದೇವದಾಸು,ಲೈಫಲ್ಲಿ ಮೊದಲ್ನೆ ಸಾರಿ ಇಷ್ಟ ಪಟ್ಟ ಒಂದು ಮೊಂಬತ್ತಿ ಹಚ್ಚಿದ್ದೆ, ಮಳೆ ಹೊಯ್ದು ಆರಿಹೊತಲ್ಲೋ...5)ಲೈಫಲ್ಲಿ ಈ ಲೆವಲ್ಗೆ ಕಂಫ್ಯೂಜ್ ಆಗಿದ್ದು ಇದೇ ಮೊದ್ಲು...ಇಲ್ಲಾ ನಿಮ್ಮಾಶೀರ್ವಾದ...6)ನೀವು ಎಫ್ ಎಮ್ ನವ್ರು ಯಾರ್ ಫೋನ್ ಮಾಡಿದ್ರು ಪ್ರಾಬ್ಲೆಮ್ ಆಗುತ್ತೆ ಅಂತಾ ರೈಲ್ ಹತ್ತಿಸ್ತಾನೆ ಇರ್ತಿರಾ ಬಿಡ್ರಿ....7)ಈ ಮುಂಗಾರು ಮಳೆಲಿ ಇಷ್ಟೋಂದು ಬೆಂಕಿ ಇದೆ ಅಂತಾ ಗೋತ್ತಿರಲಿಲ್ಲಾ ದೇವದಾಸು....

ಮತ್ತೆ ಮತ್ತೆ ಏಕೋ ನಿನ್ನ ನೋಡೋ ಹಂಬಲ...

ನೂರುವರುಷದ ಗೆಳೆತನ ನಮ್ಮದು ಯಂಬ ಅನುಭವ ನೀಡಿದ ಪವಿತ್ರ ಗೆಳತಿ ಇವಳು .ಮನಸ್ಸಿನಲ್ಲಿ ಆತ್ಮಿಯತೆಯಿಂದ ಮಾತನಾಡುವ ಇವಳ ವಿಶಾಲ ಹೃದಯ ನಿಜಕ್ಕೂ ಮನಸ್ಸಿನಲ್ಲೇ ಉಳಿದು ಹೋಗುವಂತದ್ದು ,ಉತ್ತಮ ಮಾತು ,ಉತ್ತಮ ಗೌರವ ಭಾವ ಇವಳಿಂದ ನನಗಂತೂ ಸಿಕ್ಕಿದೆ ಈಕೆ ಗೆಳೆತನ ಮಾಡಿದ ಗೆಳೆಯ ಗೆಳತಿಯರಿಗೂ ಆ ಅನುಭವ ಸಿಕ್ಕಿದೆ ಅಂತ ಅಂದುಕೊಳ್ಳುತ್ತೇನೆ ,ಏಕೆಂದರೆ ಈಕೆಯಲ್ಲಿ ಅಗೋಚರವಾದ ಆತ್ಮಿಯತೆಯಿಂದ ಕೂಡಿದ ಪವಿತ್ರ ಗೆಳೆತನದ ಭಾವ ತುಮ್ಬಿಕೊಂಡಿರುವದು ನನ್ನ ಅನುಭವಕ್ಕೆ ಬಂದಿದೆ i wish her all the best.ಇಂಥ ಉತ್ತಮ ಮನಸ್ಸಿನ ಗೆಳತಿಯ ಗೆಳೆತನ ನಿಮಗೂ ಬೇಕೆಂದರೆ ಆಕೆಗೊಂದು request ಕಳಿಸಿ ಆಕೆ ಉತ್ತಮ ಗೆಳೆತನವನ್ನು ಇಷ್ಟಪಡುವ ಉತ್ತಮ ಗೆಳತಿ ಇವಳು .
ಕರೆಯದೇ ಬಂದಿರುವೆ ನಿನ್ನ ಹೃದಯದ ಬಾಗಿಲಿಗೇ ಕರೆಯದೇ ಬಂದಿರುವೆ ನಿನ್ನ ಹೃದಯದ ಬಾಗಿಲಿಗೇ ನಾನು ನಿನ್ನಹೃದಯದ ಬಡಿತವೆಂಬ ಭಾವನೆಗಳ ಬಾಗಿಲನ್ನು ತೆಗೆದು ಮನಸ್ಸು ಎಂಬ ಮಂಟಪದಲ್ಲಿ ಪ್ರೀತಿ ಎಂಬ ಕಾಣದಿರುವ ಶಿಲೆಯನ್ನು ಪೂಜಿಸಲು ಅನುಮತಿ ನಿಡು ಗೆಳತಿ ...........
ಮರೆವೆಂಬ ಸಮುದ್ರದ ನೊರೆ ನೀನಲ್ಲ ಗೆಳತಿ,ನನ್ನ ಒಡಲೆಂಬ ಸಮುದ್ರದ ಒಡಲಾಳದ ಮುತ್ತು ನೀನು,ಈ ಅಮೂಲ್ಯವಾದ ಮುತ್ತನ್ನು ನಾನೆಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ...ನಿನ್ನ "ಸ್ನೇಹ"ವೆಂಬ "ಹೂದೋಟ"ದಲ್ಲಿ ಬಾಡದ "ಸುಮ"ವು ನಾನಾಗಿರಲಿ ಎಂದು ಬಯಸುವ ನೀ ಮರೆಯದ ಗೆಳೆಯ - ನಾ ಮರೆಯದ ಗೆಳತಿ..
Friend cannot be a Lover, Lover cannot b a Friendand Widow cannot b a wife and wife cannot b a Friend r Lover....Friend is only Friend n that is pertained to only Friendship dear, dont get disheart n panic..R u sure and 100 % she too misses ur presence and absence? confirm with it first....
are yaar nothing wrong in that, i think both had not good time to express ones feelings in particular..B Happy dear, u know its a part of life.take care, good night
ಮನ ಮರುಗಿದಾಗಲೆಲ್ಲ ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು? ಕೂಡಿ ಬೆಳೆಯಲಿಲ್ಲ, ಕೂಡಿ ಬೆರೆಯಲಿಲ್ಲ ಆದರೂ ಅರೆಕ್ಷಣ ನಿನ್ನಗಲಿರಲಾರದ ಮಧುರ ನೊವಿನ ಗುಟ್ಟಾದರೂ ಎನು...?
ನೋವಿನಲ್ಲಿ ಜೊತೆಯಾಗಿರ್ತೀನಿ ಅಂತ ನಾನು ಮಾತು ಕೊಡಲ್ಲ.. ಆದ್ರೆ ನೋವು ಬರದೇ ಇರೊ ಹಾಗೆ ನೋಡ್ಕೋತೀನಿ ಅಂತ ಒಂದು ªÀiÁvÀÄ ಕೊಡ್ತೀನಿ..!

ಅರ್ಥೈಸಲಾಗದ ನನ್ನೀ ಪ್ರೀತಿಯನ್ನ ಹೇಳಿಕೊಳ್ಳಲಾಗದ ಅಸಹಾಯಕತೆ ಅವಳದು..... ನಿಮ್ಮ ನಗು ಪ್ರಿಯದರ್ಶಿ....

ನೀ ಬರೆವ ಪತ್ರದ ಕೊನೆಯ ಸಾಲಾದರೂ ನಾನಾಗಬೇಕೆಂದು.......
ನೀನೆ ಹಾಡಿದ ಸ ರೀ ಗ ಮ ದಲ್ಲಿ ಕಂಪನವೇಕೆ?ನೀ ಹಚ್ಚಿದ ದೀಪದಲ್ಲಿ ಕತ್ತಲೆ ಏಕೆ?ನೀ ನುಡಿಸಿದ ವೀಣೆಯ ನಾದದಲ್ಲಿ ಕರ್ಕಶವೇಕೆ? ನಿನ್ನ ಹುಣ್ಣಿಮೆಯಂತ ನಗುವಿನಲ್ಲಿ ವ್ಯಂಗ್ಯವೇಕೆ?ನಿನ್ನ ಮುದ್ದಾದ ಮಾತಿನ ಸಿಹಿಗಾಳಿಯಲ್ಲಿ, ಮೌನದ ಬಿರುಗಾಳಿಯೇಕೆ? ಚಿನ್ನ....ನಿನ್ನ ಪ್ರೀತಿಯ ಬಲೆಯಲ್ಲಿ ಬಂಧಿಯಾಗಿರುವ ನನ್ನ ಮೇಲೆ, ಮುತ್ತಿನಂತ ಕೋಪವೇಕೆ?ಇಂತಿ ನಿನ್ನ ಪ್ರೀತಿಯ...ಕಂಪನ
ನಮಸ್ತೆ ಗುರುವೇ ..........! ಇತಕಡೆ ನಾವು ಆರಂ ಇದೇವೆ ನೀವು ಹೇಗಿದಿರಿ .......? ಏನು ಸಂಪರ್ಕನೆ ಇಲ್ಲ ... ಸ್ವಲ್ಪ ನಮ್ಮನು ನೆನಪಿಸಿರಿ ಗುರುಗಳೇ ..
ಬೇರೆಯವರ ಹಿತಕ್ಕಾಗಿ ಪ್ರಾರ್ಥಿಸುವ ಬಾಯಿಗಿಂತ, ನೀಡುವ ಕೈಗಳೇ ಶ್ರೇಷ್ಠ
ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ-- ವಿನೋಬಾ ಭಾವೆ
ನೀನೇನೂ ಕೇಳಿಲ್ಲ ನಾನೇನು ಹೇಳಿಲ್ಲ ನಿನಗೆ ಎಲ್ಲವೂ ಅರ್ಥವಾಯಿತಲ್ಲ ನನ್ನ ಮಾತನ್ನು ಕೇಳುವವರಿಲ್ಲ ನೀನು ಕಿವಿಗೊಟ್ಟು ಆಲಿಸಿದೆಯಲ್ಲ ನೋವಾದಾಗ ಯಾರಿಗೂ ಹೇಳಲಿಲ್ಲ ಆದರೆ ನೀನು ಅರಿತುಕೊಂಡೆಯಲ್ಲಕಣ್ಣಂಚಿನ ಹನಿ ಮುಚ್ಚಿ ಕೊಂಡೆನಲ್ಲ ಅದ ನೀ ಮಾತ್ರ ಕಂಡುಕೊಂಡೆಯಲ್ಲ ಸ್ನೇಹವೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಂಡಿದೆ. ಆದರೆ ನನಗೆ ಕಂಡಿದ್ದು ಸ್ನೇಹ ನೀನಾಗಿ .... ನೀನೆ ಆಗಿ . ಅದ್ಯಾಕೆ ಗೊತ್ತಾ? ಅಂಥ ಸ್ನೇಹಕ್ಕೆ ನಾನು ಕಾಯುತ್ತಿದ್ದೆ ಅದೆಷ್ಟೋ ವರ್ಷಾಂತರ! ಬಂದ ಗೆಳೆತನಗಳಿಗೂ ನಾ ಬಯಸಿದ್ದಕ್ಕೂ ಇತ್ತು ಅಂತರ . ನಾ ಬಯಸಿದ್ದು ನಿನ್ನಲಿತ್ತು ಒಪ್ಪಿಕೊಂಡೆ ಇದು ನಿರಂತರ.ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ.---ಡಿ.ವಿ.ಜಿ

Friday, December 5, 2008

ನಿನ್ನ ಹೆಸರು ನವಿಲು ತಾನೆ?!

(ಅರ್ಪಣೆ:// ನನ್ನ ಆರ್ಕುಟ್ ಲೋಕದ "ತಿರುಗಿ ನೋದದವಳು ,ಮತ್ತೆ ಬಾರದವಳು" ಭಾವಚಿದ್ರದ ಅಡಿಬರಹವನ್ನ ಮೆಚ್ಚ್ಚಿದ
ಗೆಳೆಯ ,ಸ್ನೇಹದ ಹಿಮಾಲಯ ಹೇಮಂತ್ ಗಾಗಿ ಬರೆದ ಕವನ........ಪ್ರೀತಿಯಿಂದ)
ತಿರು ತಿರುಗಿ ಮತ್ತೆ ನೋಡಿ,
ಮರೆಯಾಗಿ ನನ್ನನು ಕಾಡಿ,
ಮನವನ್ನು ಜಾರಿಸಿದವಳು,
ಮನದಲ್ಲಿ ನೆಲೆಸಿರುವವಳು,
ನಿನ್ನ ಹೆಸರು ನವಿಲು ತಾನೆ?!

ನನ್ನ ಒಲವು ನೀನೆ ತಾನೆ,
ನಿನಗಾಗಿ ಕಾಯುತಿಹೆಹು,
ನೀ ಬಂದು ಸೇರು ಜಾಣೆ,
ನುಡಿಸೋಣ ಒಲವಿನಾ ವೀಣೆ ,
ಸಾಗಲಿ ಪ್ರೀತಿಯಾ naave,
ಸೇರಲಿ ನಲಿವಿನ ನಾಳೆ................
ಪ್ರೀತಿಯಿಂದ,
ಚುಕ್ಕಿ.....

ಭಾವಿಸು ನನ್ನೋಲವನ್ನು......

FEEL MY LOVE.....!!
ಬಾವಿಸು ನನ್ನೋಲವನ್ನು............!!
ಪ್ರೀತಿಸು, ಈ ಜೀವವನ್ನು.........!!
ನಿನ್ನ ಪ್ರೀತಿಲಿ ಕೋಪವೇ ಇರಲಿ,
ನಿನ್ನ ಪ್ರೀತಿಲಿ ದ್ವೇಶವೇ ಇರಲಿ,
ನಿನ್ನ ಪ್ರೀತಿಲಿ ಶಾಪವೇ ಇರಲಿ,ಒಲವೆ,
ಫೀಲ್ ಮೈ ಲವ್../ಪ/
ನಿನ್ನ ಪ್ರೀತಿಲಿ ಬಾರವೇ ಇರಲಿ,
ನಿನ್ನ ಪ್ರೀತಿಲಿ ದೂರವೇ ಇರಲಿ,
ನಿನ್ನ ಪ್ರೀತಿಲಿ ತಪ್ಪೇ ಇರಲಿ,ಒಲವೆ, ಪೀಲ್ ಮೈ ಲವ್//
ನಿನ್ನ ಪ್ರೀತಿಲಿ ಮೌನವೇ ಇರಲಿ,
ನಿನ್ನ ಪ್ರೀತಿಲಿ ಮುಜುಗರ ಇರಲಿ,
ನಿನ್ನ ಪ್ರೀತಿಲಿ ಶೂನ್ಯವೇ ಇರಲಿ,ಇದು ಇದೆಯೋ, ಇಲ್ವೋ, ಏನೋ ,ಅರಿಯೆ,ಫೀಲ್ ...........ಮೈ.................ಲವ್..............ಫೀಲ್ ಮೈ ಲವ್......ಫೀಲ್ ಮೈ ಲವ್.....ಲಾ.............ಲಾ.............ಲಾ.............ಲ................ಲಾ..............ಲಾ..........//ಪ//
ನಾ ಕೊಟ್ಟ ಪ್ರತ್ರಗಳನ್ನ...ಹರಿಯುತ್ತ....ಫೀಲ್ ಮೈ ಲವ್...
ನಾ ಕೊಟ್ಟ ಹುವುಗಳನ್ನ......ಎಸೆಯುತ್ತ........ಫೀಲ್ ಮೈ ಲವ್.
.ನಾ ಹೇಳೋ ಕವನಗಳನ್ನ...ಛೀ ಹೇಳ್ತಾ .....ಫೀಲ್ ಮೈ ಲವ್..
ನಾ ಮಾಡೋ ಚೆಸ್ತೆ ಗಳನ್ನ...ಬೇಜಾರೂ.... ಮಾಡ್ಕೊಂದ್ರುನೂ.......ಫೀಲ್..............ಮೈ............ಲವ್..................//
ನನ್ನ ರೀತಿ ಬೇರೆ ಆದ್ರೂ...
ನನ್ನ ಊಹೆ ಬರದೆ ಇದ್ರೂ..
ನ ನಿನಗೆ ಸರಿಯಾಗ್ ದಿದ್ರೂ..
ನನ್ನ ಮಾತು ಬೇಡದೆ ಇದ್ರೂ..
ನೀ ನನ್ನ ಸೇರದೆ ಇದ್ರೂ..
ಇದ್ರೂ ,ಇದ್ರೂ, ...ಇಲ್ದನೆ...ಇದ್ರೂ..
.ನೆನೆಸಿ...ನೆನೆಸಿ...ನೆನೆಸಿ ಕೊಳ್ತಾ....ಫೀಲ್.........ಮೈ...........ಲವ್.......................//ಲಾ............ಲಾ...........ಲಾ....................
ಕೋಪದಿಂದ ನೋಡ್ತಿದ್ರೂ,
ಕಣ್ಣಲ್ಲೇ ಫೀಲ್ ಮೈ ಲವ್...
ಏನೇನೊ, ಬಯ್ತಿದ್ರೂ,ಬಯಿಂದ್ಲೆ,
ಫೀಲ್ ಮೈ ಲವ್..ಕೈಯಿಂದ ಎದೆಗೆ ಹೊಡೆದರೂ,
ಕೈಯಲ್ಲೇ ,ಫೀಲ್ ಮೈ ಲವ್...ನನ್ನ ಬಿಟ್ಟ್ ನಡೆವಾಗ್ಲೂ,ಕಾಲಲ್ಲೇ....
ಫೀಲ್ .......ಮೈ.........ಲವ್..............//
ನಡೆವಾಗ ಆಯಾಸ ಆದ್ರೆ,
ಕೈಯಿಗೆ ನೋವು ಆದ್ರೆ,
ಕಣ್ಣಿಗೆ ಮಂಪರು ಆದ್ರೆ,
ತುಟಿಗಳು ಮೌನ ಆದ್ರೆ,
ಫೀಲ್.........ಮೈ..........ಲವ್...........//aamele ................ಒಂದು ಸಾರಿ..........ಹೃದಯ ಅಂತ..........ನಿನಗೆ ಇದ್ರೆ..................ಫೀಲ್..............ಮೈ...................ಲವ್...................ಫೀಲ್..................ಮೈ..................ಲವ್.......................
sangaraha
( ಇದು ನನ್ನ ಹೊಸ ಬಗೆಯ ಪ್ರಯತ್ನ...ತುಂಬ ಇಸ್ತವಾದ ತೆಲಗು ಗೀತೆ...ಆರ್ಯ ಚಿತ್ರದ...ಫೀಲ್ ಮೈ ಲವ್...ಹಾಡನ್ನ ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ....ಬಾವದಲ್ಲಿ ಏನು ಕೊರತೆ ಇದೆಯೋ, ಗೊತ್ತಿಲ್ಲ...ಅನಿಸಿತು....ಹಾಡಿದ್ದೇನೆ.........ಒಪ್ಪಿಸಿಕೊಳ್ಳಿ

bittuhodavaligondu thanks

ಆತ್ಮಿಯರೇ ,
ಬದುಕಿನ ನೆನಪಿನ ಪುಟಗಳಲ್ಲಿ , ಕೆಲವೊಂದು ಘಟನೆಗಳು, ವ್ಯಕ್ತಿಗಳು, ಊರುಗಲೂ... ಮತ್ತಿನ್ನೇನೋ ಬೆನ್ನಿಗನ್ತಿಕೊಂಡೆ ಇರುತ್ತವೆ. ಒಮ್ಮೊಮ್ಮೆ ಹೆಗಲಿಗೆರಿ, ಒಮ್ಮೊಮ್ಮೆ ತಲೆಗೇರಿ ನರ್ಥಿಸುತ್ತವೆ...ಈ ನೆನಪುಗಳ ಭಾರವನ್ನ ಇಳಿಸಿಕೊಳ್ಳುವ ಬಗೆ ಹೇಗೆ ಎಂದು ಅನ್ನಿಸಿದಾಗೆ ಸಾಥ್ ಕೊಟ್ಟದ್ದು ನಾನು ಅಪಾರವಾಗಿ ಪ್ರೀತಿಸುವ "ಅಕ್ಷರ ಮಿತ್ರರು"..ಇಲ್ಲಿ ಬರೆಯುತ್ತಿರೋದು ಕಾದಂಬರಿಯ?,ಕವಿಥೆಯಾ?, ನನ್ನ ಬದುಕಿನ ಕಥೆಯಾ?,ವ್ಯಥೆಯಾ?,..ಉತ್ತರ ನನಗೆ ನಿಘುದ.....! ಇದರ ಬಗ್ಗೆ ನನಗನ್ನಿಸೋದು ಇಸ್ತೆ..."ಕಲ್ಪನೆಯ ಕಡಲಿನಲ್ಲಿ,ಅನುಭವದ ಕುಲುಮೆಯಲ್ಲಿ,ನೊಂದು, ಬೆಂದು, ಮಿಂದು,ಹದವಾಗಿ ಬೆರೆತ ಅಕ್ಷರಗಳು,ನಿಮ್ಮ ಮುಂದಿವೆ........ "ಈ ಅಕ್ಷರಗಳ ಗುಚ್ಛ ಹರೆಯದ ಕನಸುಗು, ಪ್ರೀತಿಯ ಸಾಫಲ್ಯ್, ವಿಪಲತೆ, ಕಾಲೇಜಿನ ಕ್ಯಾಮ್ಪುಸ್, ಅದರಚೆಗಿನ ಬದುಕು, ಗೆಳೆತನ, ಸಂದರ್ಬಗಳ ಆಟ, ವಿಧಿಯ ನಿಗುದತೆ.....ಹೀಗೆ ಅನೇಕ ಸಂಗತಿಗಳ ಸರಪಳಿಯಲ್ಲಿ ಬಂದಿಸಲ್ಪತ್ತಿದೆ....ಇವುಗಳ ಬಿಡುಗಡೆ ಎ ದಿವ್ಯತೆ ಎದೆಗಿನ ಪಯಣ.....ಈ ಪಯಣದಲ್ಲಿ ನೆನಪುಗಳದ್ದೆ ಕಾರುಬಾರು...ಬಿಟ್ಟರು ಬಿಡುವುದಿಲ್ಲ ನೆನಪುಗಳು.....ಈ ನೆನಪುಗಳೇ ನಿಮ್ಮ ಮುಂದೆ....." ಬಿಟ್ಟು ಹೋದವಲಿಗೊಂದು ಥ್ಯಾಂಕ್ಸ್" ...ಆಗಿ.....ಇಲ್ಲಿನ ಪಾತ್ರಗಳು ಹಲವರಿಗೆ ಅನ್ವಯಿಸಬಹುದು, ಅನ್ವಯಿಸದಿರಬಹುದು...ಇದಕ್ಕೆ ನಾನು ಜವಾಬ್ದಾರನಲ್ಲ.....ನನ್ನಿಂದ ಆಚೆಗೆ ನಿಂತು ಇಲ್ಲಿನ ಪಾತ್ರಗಳನ್ನ ನೋಡುವ ಪ್ರಯತ್ನ ಮಾಡಿದ್ದೇನೆ....ಈ ಪಾತ್ರಗಳೆಲ್ಲ ಅನುಬವಾದ ಕುಳುಮೆಯಲ್ಲಿ ಹೆಕ್ಕಿ ತೆಗೆದ ಕಾಲ್ಪನಿಕ ಚಿತ್ರಗಳು...ಹರೆಯದ ಬದುಕಿನ ವಸ್ತುಸ್ತಿತಿಯನ್ನ, ಕಂಡ ಸತ್ಯಗಳನ್ನ, ಬದಲಾಗುವ ಸತ್ಯಗಳನ್ನ, ಅನ್ಯ ಮನಸ್ಸುಗಳಿಗೆ ನೋವಾಗದಂತೆ ಚಿತ್ರಿಸುವ ಪ್ರಯತ್ನ ಮಾತ್ರ ನನ್ನ ಪಾಲಿನದು...ಅದು ಸ್ವಾರ್ಥಕ್ಕಾಗಿ....!ಏನು ಆ ಸ್ವಾರ್ಥ ಅಂತೀರ...."ಅಜ್ಞಾತ ದುಕ್ಕದ ಹೊರೆಯನ್ನ ಕಡಿಮೆ ಮಾಡಿಕೊಳ್ಳುವುದು."ಆರ್ಕುಟ್ ಗೆಳೆಯರ ಬಳಗವಾಗಲಿ, ಈ ಅಂತರ್ಜಾಲ ಬ್ಲಾಗ್ ಗಲಾಗಲಿ...ನನ್ನ ಬದುಕಿನಲ್ಲಿ ಹಲವಾರು ಸಮಯಗಳಿಂದ ಉತ್ತಮ ಸಂಗಾತಿಗಲಾಗಿವೆ....ಇಲ್ಲಿಂದ ಬದುಕಿನ ಸ್ಪೂರ್ತಿ ಪಡೆದಿದ್ದೇನೆ...ಇದಕ್ಕೆ ನಾನು ಎಲ್ಲ ಅಂತರ್ಜಾಲ ಗೆಳಯರಿಗೂ ಚಿರರುಣಿ.....ನನ್ನ ಈ ಪ್ರಯತನಕ್ಕೆ ನಿಮ್ಮ ದೊಂದು ಶುಬ ಹಾರೈಕೆಯಿರಲಿ..........."ಮನೋಹರ"ನ ಕಾಲೇಜು ದಿನಗಳ ನೆನಪಿನ ದೋಣಿ ನಿಮ್ಮ ಮುಂದಿದೆ.... ಸ್ವೀಕರಿಸಿ.... ನಿಮ್ಮ ಅಮೂಲ್ಯ ಸಲಹೆ, ವಿಮರ್ಶೆಗಳಿಗೆ ಸದಾ ಸ್ವಾಗತ.................ಓದುವ ಪ್ರೀತಿ ನಿಮ್ಮದು......ಧನ್ಯವಾದಗಳು........ಅಪಾರ ಪ್ರೀತಿಯಿಂದ...
ಸಂಗ್ರಹ
ಬಿಂದುವಿನಿಂದ ಅನಂತದೆಡೆಗೆ........

Thursday, December 4, 2008

ಮೊಬೈಲ್ ಸಂದೇಶ

ದುಃಖವನ್ನು ಮಾಡಿರಿ Delete
ಸಂತೋಷವನ್ನು ಮಾಡಿರಿ Save !
ಸಂಬಂಧಗಳಿಗೆ ಮಾಡಿರಿ Reacharge !
ಸ್ನೇಹವನ್ನು ಮಾಡಿರಿ Download !
ಶತ್ರುಗಳನ್ನು ಮಾಡಿ*** ನಿಮ್ಮ ಸಂತೋಷಕ್ಕಾಗಿ ಸಲಹೆಗಳು ***ರಿ Erase !
ಸತ್ಯಕ್ಕಾಗಿ ಮಾಡಿರಿ Broadcast !
ಸುಳ್ಳಿಗಾಗಿ ಮಾಡಿರಿ Switch off !
Tensionಗೆ ಮಾಡಿರಿ Not reachable !
ಪ್ರೀತಿಗಾಗಿ ಮಾಡಿರಿ Incoming on !
ದ್ವೇಷವನ್ನು ಮಾಡಿರಿ Outgoing off !
Languageನ್ನು ಮಾಡಿರಿ Control !
ನಗುವಿಗಾಗಿ ಮಾಡಿರಿ Outbox full !
ಕಣ್ಣೀರಿಗೆ ಮಾಡಿರಿ Inbox empty !
ಕೋಪಕ್ಕೆ ಮಾಡಿರಿ Hold !
ಮುಸುನಗುವನ್ನು ಮಾಡಿರಿ Sent !
Helpಗೋಸ್ಕರ ಮಾಡಿರಿ Ok !
Selfಗಾಗಿ ಮಾಡಿರಿ Autolock !
ನಿಮ್ಮ ಹೃದಯವನ್ನು ಮಾಡಿರಿ Vibrate !@@@ ಮತ್ತೆ ನೋಡಿರಿ,
ಜೀವನದ Ringtone ಎಷ್ಟೊಂದು Polyphonic ಆಗುತ್ತೆಂದು @@@ಯಾವಾಗಲು ನಿಮ್ಮ ನಗೊವನ್ನ ಬಯಸುವ ನಿಮ್ಮ ಗೆಳೆಯ

ಸಂಗಾತಿ

ನೀನಿಲ್ಲದೇ ನನಗೇನಿದೆಮನಸೆಲ್ಲ
ನಿನ್ನಲ್ಲೇ ನೆಲೆಯಾಗಿದೆಕನಸೆಲ್ಲ
ಕಣ್ಣಲ್ಲೇ ಸೆರೆಯಾಗಿದೆನಿನಗಾಗಿ
ಕಾದು ಕಾದು ಪರಿತಪಿಸಿ ನೊಂದೇ
ನಾನುಕಹಿಯಾದ ವಿರಹದ ನೋವು
ಹಗಲಿರುಳು ತಂದೇ ನೀನುಎದೆಯಾಸೆ
ಎನೋ ಎಂದು ನೀ ಕಾಣದಾದೇನಿಶೆಯೊಂದೇ
ನನ್ನಲ್ಲಿ ನೀ ತುಂಬಿದೆಬೆಳಕೊಂದೇ
ನಿನ್ನಿಂದ ನಾ ಬಯಸಿದೆಒಲವೆಂಬ
ಕಿರಣ ಬೀರಿ ಒಳಗಿರುವ ಬಣ್ಣ
ತೆರೆಸಿಒಣಗಿರುವ ಎದೆನೆಲದಲ್ಲಿ
ಭರವಸೆಯ ಜೀವ ಹರಿಸಿಸೆರೆಯಿಂದ ಬಿಡಿಸಿ
ನನ್ನ ಆತಂಕ ನೀಗುಹೊಸ ಜೀವ
ನಿನ್ನಿಂದ ನಾ ತಾಳುವೆಹೊಸ ಲೋಕ ನಿನ್ನಿಂದ ನಾ ಕಾಣುವೆ

ಗೆಳೆಯ

ಜೀವನದ ಸಾಗರದಲ್ಲಿಬಹಳಷ್ಟು
ಗೆಳೆಯರುನಿನಗೆ ಸಿಗಬಹುದುನನಗಿಂತ
ಸಾವಿರ ಒಳ್ಳೆಯವರುಸಿಗಬಹುದು..
ಆ ಒಳ್ಳೆಯವರ ಗುಂಪಿನಲ್ಲಿನನ್ನನು
ಮರೆಯಬೇಡ...ಯಾಕೆಂದರೆ
ನಿನಗೆ ನಾನುಮತ್ತೋಮ್ಮೆ ಸಿಗುವವನೇ...?

ಮತ್ತೆ ಮತ್ತೆ ಕಾಡುತಿದೆ ನಿನದೇ

ಮತ್ತೆ ಮತ್ತೆ ಕಾಡುತಿದೆ ನಿನದೇ ನೆನಪುನಿನ್ನ ಭಾವನೆಗಳಿಂದಲೇ ಎರಧೆ ಎನ್ನ ಮನಕೆ ತಂಪುಕೇಳದ ಧನಿಗೆ ನಿನ್ನ ಬರವಣಿಗೆ ಇಂದಲೇ ನೀಡಿದೆ ಇಂಪುಮನದಾಳದಿಂದ ಮರಳಿ ಮರಳಿ ಬರುತ್ಹಿದೆ ನಿನದೇ ನೆನಪುನಿನದೇ ನೆನಪು.............. ----------------------------------------------------------------------------ಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುನಿನ್ನ ಪರಿಮಳವ ಪಸರಿಸಿಮೊಗ್ಗಿನ ಪದರಗಳ ಬಿಡಿಸಿಹೂವಾಗಿ ನಿಂತೆಪರಗಸ್ಪರ್ಶಕೆ ನಾ ಕಾದೆಎಲ್ಲಿ ಹೋದೆ ನೀನುಸ್ಪರ್ಶಿಸದೆ ಈ ನನ್ನ ಮನವನ್ನು ಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುಅಲೆಗಳಾಗಿರಲು ನಾನುಚಂದಿರನಾಗಿ ಬರುವೆ ಎಂದು ನಾ ಕಾದೆಆದರೇನು ಸುಖ ಬಂತುನೀನಾದೆ ಅಮಾವಾಸ್ಯೆ ನನ್ನ ಬಾಳಿಗಂತೂಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲುನವಿಲಾಗಿ ನರ್ತಿಸಲು ನಾನುಕಾರ್ಮೊದಕ್ಕಾಗಿ ಕಾದು ಕುಳಿತೆನೀ ಬಂದು ಸೂರ್ಯನಂತೆಚದುರಿಸಿದೆ ಅವುಗಳನು ಅದರಂತೆಹೂ ದುಂಬಿಯಾಗಿ ನೀ ಬರಲುಹೂವಾದೆ ನಾನು ಮೊದಲು

Wednesday, December 3, 2008

ಗೆಳತನ........

ಗೆಳತನ ಎನ್ನುವುದು ನೆಟ್ ವಕ್ ಱ ಇದ್ದಂತೆ!ಅದನ್ನು.......ರೀಚಾಜ್ ಱ ಮಾಡಬೇಕಿಲ್ಲರೋಮಿಂಗ್ ಮಾಡಿಸಬೇಕಾದಿಲ್ಲ..ವ್ಯಾಲಿಡಿಟಿ ಕೊಡ ಅಗತ್ಯವಿಲ್ಲಆಕ್ಟೀವೇಷನ್ ಬೇಡಸಿಗ್ನಲ್ ಸಮಸ್ಯೆಯಂತೂ ಇರುವುದೇ ಇಲ್ಲ ಅದ್ರೆ..... ನಿನ್ನ ಹೃದಯವನ್ನು "ಸ್ವಿಚ್ ಆಫ್" ಮಾತ್ರ ಮಾಡಬೇಡ.....!
ನನಗೂಂದು ಮಾಂತ್ರಿಕ ದೀಪ ಸಿಕ್ಕಿತು.
ಉಜ್ಜಿ ನೋಡಿದೆ.ಏನಾಶ್ಚಯಱ!
ಪುಟ್ಟ ಭೂತವೊಂದು ಪ್ರತ್ಯಕ್ಷ!!
ನಿನಗೇನು ಬೇಕೆಂದು ನನ್ನ ಕೇಳಿತು,ನಾನೇನು ಹೇಳಿದೆ ಗೊತ್ತೆ?"
ಈ ಸಂದೇಶ ಓದುವ ವ್ಯಕ್ತಿ ಎಂದೆಂದೂ ಸಂತಸದಿಂದರಲಿ"

ಕನ್ನಡ ಎನೆ ಕುಣಿದಾಡುವುದೆನ್ನದೆ

ಕನ್ನಡ ಎನೆ ಕುಣಿದಾಡುವುದೆನ್ನದೆ

ಕನ್ನಡ ಎನೆ ಕಿವಿನಿಮಿರುವುದು |
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು |

ಕನ್ನಡ ಕನ್ನಡ ಹಾ ಸವಿಗನ್ನಡ
ಬಾಳುವುದೇತಕೆ ನುಡಿ ಎಲೆ ಜೀವ |
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ |
ಕನ್ನಡತಾಯಿಯ ಸೇವೆಯ ಮಾಡೆ |
---------------------------------
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!--ಕುವೆಂಪು
-----------------------------------
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು ---ಕೆ ಎಸ್ ಎನ್
-------------------------------
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ---ಜಿ.ಎಸ್. ಶಿವರುದ್ರಪ್ಪ

ಕನ್ನಡವೆಂದರೆ ಭಾಷೆಯಲ್ಲ , ಅದೊಂದು ಚಿರಂಜೀವ ! ಭಾವಗಳಿವೆ ,ಸಂಸ್ಕೃತಿಯಿದೆ , ನೀತಿಯಿದೆ , ಮಂತ್ರವಿದೆ……. ” ಈ ಹೆಸರಲ್ಲಿ ಏನಿಲ್ಲ ?! ” ಬೆಳೆಯುತ್ತಿರಲಿ ಕನ್ನಡ, ಭಾಷ

ಕನ್ನಡವೆಂದರೆ ಭಾಷೆಯಲ್ಲ ,
ಅದೊಂದು ಚಿರಂಜೀವ !
ಭಾವಗಳಿವೆ ,ಸಂಸ್ಕೃತಿಯಿದೆ ,
ನೀತಿಯಿದೆ , ಮಂತ್ರವಿದೆ…….
” ಈ ಹೆಸರಲ್ಲಿ ಏನಿಲ್ಲ ?! ”
ಬೆಳೆಯುತ್ತಿರಲಿ ಕನ್ನಡ,
ಭಾಷಾಭಿಮಾನಿಗಳಿಂದ…
ಭಾಷಾಂಧಿಗಳಿಂದಲ್ಲ..!!
ಬರಲಿ ಬಿಡಿ ಹೊಸ ಪದಗಳು
ಮಣ್ಣಿನ ವಾಸನೆ ಬೆರೆತು `ಕನ್ನಡವಾಗಲಿ’
ಅದರಲ್ಲೂ ಮಿತಿ ಇರಲಿ..
ಬೇರೆ ಭಾಷೆಗಳಿಗೂ ನಮ್ಮ ಬಳುವಳಿಯಿದೆ..
ಕಾಲ-ದೇಶಗಳ ಮೀರಿದ ಭಾಷೆ ಕನ್ನಡ.
ಎಲ್ಲೆಯಿಲ್ಲದ ಭಾಷೆ ಕನ್ನಡ,
ಜೀವ ಸಂಕುಲದ ಉಸಿರು ಕನ್ನಡ,
ಜೀವ ಜೀವದ ತೊದಲ್ನುಡಿ ಕನ್ನಡ.
ಯಾವ ಮೂಲೆಯಲ್ಲಾದರೂ ಇರು…
ಯಾವ ಭಾಷೆಯವನೇ ಆಗಿರು …
ನಿನ್ನ ನೋವಿಗೂ ದನಿಯಾಗುವಳು..
`ಅಮ್ಮ’,”ಕನ್ನಡಮ್ಮ”
ಅವಳ ಮಡಿಲಲ್ಲೇ ಉಸಿರಾಡುತಿರುವೆ..
ನಾನು ಕನ್ನಡದ ಕಂದ…!

ಕಣ್ ಕಣ್ಣ ಸಲಿಗೆ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೇ ನನಗೇ ನನ್ನ್ ನನಗೇ
ಥರ ಥರ ಹೊಸಥರ ಓಲವಿನಾ ಅವಸರ
ಹ್ರುದಯಾನೆ ಜೋಕಾಲಿ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೇ ನನಗೇ ನನ್ನ್ ನನಗೇ

ರುತು ಹೇಳೊ ಭೂಮಿಯ ಮೇಲೆ ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದ ಪ್ರೀತಿ ತಾನೆ ಪಂಚಮ ವೇದ
ನಿಜಾ ನಿಜಾ ಪ್ರೇಮ
ನಾನು ನಿನ್ನಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೇ ಹೋದರೇ ಏನೋ ಭೀತಿ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೇ ನನಗೇ ನನ್ನ್ ನನಗೇ

ಸಹಿ ಮಾಡು ನನ್ನೆದೆ ತುಂಬಾ ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆಒಂದು ಮಾತು ಕೇಳೂ ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯಾ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ ಪ್ರೀತಿ ಮಾಡೇ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೇ ನನಗೇ ನನ್ನ್ ನನಗೇ
ಥರ ಥರ ಹೊಸಥರ ಓಲವಿನಾ ಅವಸರ
ಹ್ರುದಯಾನೆ ಜೋಕಾಲಿ

Sundara Yuvati.........

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೆಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್ !!