ಸ್ವಾಗತ
Wednesday, October 3, 2012
Tuesday, June 19, 2012
ಭೂಮಿ
ನಡೆಯುವಾಗ
ಜನ್ಮ ಭೂಮಿ,
ಮಾತೃ ಭೂಮಿ,
ಪುಣ್ಯ ಭೂಮಿ,
ಮಲಗಿದಾಗ
ರುದ್ರಭೂಮಿ.!!!
ಜನ್ಮ ಭೂಮಿ,
ಮಾತೃ ಭೂಮಿ,
ಪುಣ್ಯ ಭೂಮಿ,
ಮಲಗಿದಾಗ
ರುದ್ರಭೂಮಿ.!!!
End of The College Dayszzzzz.! Slideshow Slideshow
End of The College Dayszzzzz.! Slideshow Slideshow: TripAdvisor™ TripWow ★ End of The College Dayszzzzz.! Slideshow Slideshow ★ to Malavalli (near Talakad). Stunning free travel slideshows on TripAdvisor
Thursday, May 24, 2012
ಹನಿಗವನ - 1 ಸೇವೆ
ಬಣ್ಣ ಬಣ್ಣದ ಅಕ್ಷರಗಳಿಂದ
ಬೀಗುತ್ತವೆ
ಬೀದಿ ಬೀದಿಗಳಲ್ಲಿ
ಜಾಹಿರಾತೀನ ಫಲಕಗಳು
ಯಾವ ಅಕ್ಷರಗಳನ್ನೂ
ಶಾಶ್ವತವಾಗಿ
ತಮ್ಮೂಳಗೆ ಉಳಿಸಿಕೊಳ್ಳದೆ
ನಿಸ್ವಾರ್ಥ ಸೇವೆ ಸಲ್ಲಿಸುತ್ತಿವೆ
ಶಾಲೆಗಳಲ್ಲಿನ ಕಪ್ಪು ಹಲಗೆಗಳು...!!!
Tuesday, January 10, 2012
ನಿನ್ನ ನೀರಿಕ್ಷೆಯಲ್ಲಿ
ಬರೆದಷ್ಟು ಮುಗಿಯುತಿಲ್ಲ ನಿನ್ನ ಚೆಲುವಿನ ಕವನ
ನಿದಿರೆ ಬರುತಿದ್ದರೂ ಕಣ್ಮುಚ್ಚುತಿಲ್ಲ ನಿನ್ನ ಕನಸಿನಲಿ ನನ್ನ ನಯನ
ಮಿಡಿಯುತಿದೆ ಹೃದಯ ಹೇಗೆ ಬಣ್ಣಿಸಲಿ ಅದರ ಖುಷಿಯನ್ನ
ಕಳೆದು ಹೋಗುವ ಆಸೆ ನಿನ್ನೊಳಗೆ ಕಾಯುತಿರುವೆ ಆ ಕ್ಷಣವನ್ನ !
... ಏನಾಗಿದೆ ಏಕಾಗಿದೆ ಏನೊಂದು ಅರಿವಿಲ್ಲ
ಸುಮ್ಮನೆ ಮನ ಹಾಗೆ ಆನಂದದಿ ಹಾರಡ ತೊಡಗಿದೆಯಲ್ಲ
ಮನದಿ ಏನೋ ಮಧುರ ಭಾವನೆ ಮನೆ ಮಾಡಿದೆಯಲ್ಲ
ನಿನ್ನ ನೆನಪಿನಲಿ ನಾ ಹಾಗೆ ಸುಮ್ಮನೆ ಕಳೆದು ಹೋಗಿರುವೇನಲ್ಲ !
ಮನದಲಿ ಮಾತಾಡುವ ಮಾತುಗಳು ನೂರಿದ್ದರೂ ಮೂಕನಾಗಿ ನಿಂತಿರುವೆ
ನಿನ್ನ ಪ್ರೀತಿಯ ನೆನಪಿನಲಿ ನಾ ಮೈ ಮರೆತಿರುವೆ
ಅರಿಯದೆ ಹೋದ ಗೆಳತಿ ನೀ ಏಕೆ ಮರೆಯಾಗಿರುವೆ
ಅರಿತು ನನ್ನ ಹೃದಯವ ನೀನೆಂದು ಬಾಳಿಗೆ ಬರುವೆ !
ಹೃದಯದ ಭಾಷೆಗೆ ಹೊಸತನ ತಂದವಳು ನೀನು
ಆಡುವ ಪ್ರತಿ ಮಾತಿಗೂ ಹೊಸ ಅರ್ಥ ಕೊಟ್ಟವಳು ನೀನು
ಹಾಗೆ ಸುಮ್ಮನೆ ನಲಿದಾಡುವ ಮನಸಾಗಿದೆ ಅದಕೆ ಕಾರಣವೇನು
ಓ ಗೆಳತಿ ನಿನಗೆ ಇದೆಲ್ಲ ಅರಿವಾಗಿ ನನ್ನ ಬಳಿಗೆ ಬರಲು ಸಾದ್ಯವಿಲ್ಲವೇನು
ತುಂಬಿ ಕೊಂಡಿದೆ ಹೀಗೆ ನನ್ ಮನದ ತುಂಬೆಲ್ಲ ಪ್ರಶ್ನೆಗಳ ಭಾನು !
ಒಲವಿನ ಪ್ರಿಯ ಲತೆ ನೀನಾಗ ಬಲ್ಲೆಯೇನು
ಕಣ್ಣ ಕನಸಿನೊಳಗೆ ನೀ ಅವಿತು ಕುಳಿತಿಲ್ಲವೇನು
ನನ್ನ ಮನದ ಭಾವನೆ ನಿನಗೆ ಅರಿವಾಗುವುದಿಲ್ಲವೇನು
ನಿನ್ನ ನೀರಿಕ್ಷೆಯಲಿ ಕಾದು ಕುಳಿತಿರುವೆ ನಾನು !

Subscribe to:
Posts (Atom)