
ಹೊಚ್ಚ ಹೊಸ ಪ್ರೀತಿಯಲಿ
ಕೊಚ್ಚಿ ಹೋಗುವ ಮುನ್ನ
ಎಚ್ಚರದ ಮಾತೋಂದ ಕೇಳು ಗೆಳತಿ..!
ಚುಚ್ಚು ಮಾತುಗಳಲ್ಲ
ಬಿಚ್ಚು ಮನಸಿನ ನುಡಿಯ
ರೊಚ್ಚಿಗೆಬ್ಬಿಸಿದಲ್ಲಿ ಕ್ಷಮಿಸು ಗೆಳತಿ..!
ನಿಚ್ಚಳದ ಪಥದಲ್ಲಿ
ಹುಚ್ಚು ಪ್ರೀತಿಯ ದಾರಿ...
ತುಚ್ಚ ಮಾತುಗಳೆಲ್ಲ ಕೇಳಿತು ನಿನಗೆ..!
ಕೊಚ್ಚಿ ಹೋಗುವ ಕೋಪ
ಕಿಚ್ಚು ಹಚ್ಚುವ ತಾಪ..
ಮುಚ್ಚಿ ಬಿಡು ನಿನ್ನಯ ಮನದ ಒಳಗೆ,
ಮೆಚ್ಚುಗೆಯು ಇದ್ದಲ್ಲಿ
ನೆಚ್ಚಿಗೆಯು ಇದ್ದಲ್ಲಿ
ಕೆಚ್ಚೆದೆಯು ನಿನ್ನೋಳಗೆ ಇರಲೇಬೇಕು.
ಮುಚ್ಚುಮರೆ ಒಳಿತಲ್ಲ
ಬೆಚ್ಚುವುದು ಬೇಕಿಲ್ಲ
ಸಚರಿತೆಯಲಿ ನಡೆಯುವುದೇ ಸಾಕು,
ಬಚ್ಚಿಟ್ಟ ಕನಸುಗಳನ್ನು ಬಿಚ್ಚಿಡುವವಳಾಗು
ನೊಚ್ಚು ನೂರಾಗುವ ಭಯ ಬೇಡ ನಿನಗೆ
ಸ್ವಚ್ಚ ಬದುಕಿಗೆ ನನ್ನ ಬೆಚ್ಚಗಿನ ಹಾರೈಕೆ
ಸದಾನಂದ ನಿನ್ನ ಬಾಳ ದೀವಟಿಗೆಗೆ...
namaste...
ReplyDeleteits really nice.... tumba sogasagide....
ತುಂಬು ಹೃದಯದ ಧನ್ಯವಾದಗಳು
ReplyDeleteಕಾಲೇಜು ಸಂಚಿಕೆಯಲ್ಲಿ ಈ ನನ್ನ ಕವಿತೆ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ.
ReplyDeleteನನ್ನ ಹೆಸರಿಗೆ ಬದಲಾಗಿ ಮಹೇಶ್ ಎಂದು ಹಚ್ಚಿಸಿಲಾಗಿದೆ.
ಇದಕ್ಕೆ ನನ್ನ ಪ್ರಬಲ ವಿರೋಧವಿದೆ.
ಇದಕ್ಕೆ ನೇರ ಹೊಣೆ.
ಶಾಂತಿಕಿರಣ ವಾರ್ಷಿಕ ಸಂಚಿಕೆ ಸಂಪಾದಕ ಮಂಡಳಿ.
ಇನ್ನಾದರೂ ಎಚ್ಚೇತುಕೊಳ್ಳಿ.
ಯುವಬರಹಗಾರಿಗೆ ಪ್ರೂತ್ಸಾಹ ಕೊಡಿ.